ಕೂಟ ಮಹಾಜಗತ್ತು ಕೇಂದ್ರ ಮಹಾಧಿವೇಶನ ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0

 " ಸಂಘಟನೆಯಿಂದ ಸಮಾಜ ಬಲಿಷ್ಠ ಶರವು ರಾಘವೇಂದ್ರ ಶಾಸ್ತ್ರಿ "



ಮಂಗಳೂರು: ಸಂಘಟನೆಯಿಂದ ಯಾವುದೇ ಸಮಾಜ ಬಲಿಷ್ಠವಾಗಳು ಸಾಧ್ಯ ಸಂಘಟನೆಯು ಸಮಾಜದ ಬಲ ಮತ್ತು ಪ್ರಗತಿಯ ಮೂಲ ಎಲ್ಲರೂ ಧನಾತ್ಮಕವಾಗಿ ಸೇರಿದಾಗ ಸಮಾಜವು ಸುರಕ್ಷಿತವಾಗಿ ಬೆಳೆಯುತ್ತದೆ ಎಂದು ಶರವು ರಾಘವೇಂದ್ರ ಶಾಸ್ತ್ರಿಗಳು ನುಡಿದರು. 


ಅವರು ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ ಸಂಯೋಜನೆ ಮತ್ತು ಆತಿಥ್ಯದಲ್ಲಿ  ಇದೇ ಸೆಪ್ಟೆಂಬರ್ ತಿಂಗಳ 27 ರಂದು ಮಂಗಳೂರಿನ ಸಂಘನಿಕೇತನದಲ್ಲಿ ಜರುಗಲಿರುವ ಕೂಟ ಮಹಾಜಗತ್ತು (ರಿ) ಸಾಲಿಗ್ರಾಮ ಇದರ ಕೇಂದ್ರ ಮಹಾಧಿವೇಶನ ಮತ್ತು 73 ನೇ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ  ಶರವು ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಿ ಶ್ರೀ ದೇವರ ಪ್ರಸಾದವನ್ನು ಅಂಗ ಸಂಸ್ಥೆಯ ಅಧ್ಯಕ್ಷರಾದ ನೃತ್ಯ ಗುರು ಶ್ರೀಧರ ಹೊಳ್ಳ ಇವರಿಗೆ ನೀಡಿ ಶುಭ ಹಾರೈಸಿದರು. 


ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ ಐತಾಳ, ಕೇಂದ್ರ ಉಪಾಧ್ಯಕ್ಷ ಸದಾಶಿವ ಐತಾಳ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಅಂಗಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಐತಾಳ, ಕಾರ್ಯದರ್ಶಿ ಜಿ.ಕೆ.ಮಯ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾ ಎಸ್ ರಾವ್, ಉಪಾಧ್ಯಕ್ಷೆ ಲಲಿತಾ ಉಪಾಧ್ಯಾಯ, ಕಾರ್ಯದರ್ಶಿ ಪಂಕಜ ಐತಾಳ, ಕೋಶಾಧಿಕಾರಿ ಗೌರಿ ಹೊಳ್ಳ ಮತ್ತು ಎಲ್ಲಾ ಸದಸ್ಯರು ಉಪಸ್ಥಿರಿದ್ದರು.


ಇದೇ ಸಂಧರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆಯೋಜಿಸಲ್ಪಡುವ ರಾಷ್ಟ್ರೀಯ ಕೃಷ್ಣ ವೇಷ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನೂ ಬಿಡುಗಡೆಗೊಳಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top