ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಭವಿಷ್ ಘಟಕ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ವಿಶೇಷ ಮಾಹಿತಿ ಕಾರ್ಯಗಾರ ನಡೆಯಿತು.
ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಶಿಕ್ಷಕ ವೃತ್ತಿ-ಶ್ರೇಷ್ಠ ವೃತ್ತಿ’ ವಿಷಯದಕುರಿತು ಮಾತನಾಡಿ,ಸಮಾಜದಲ್ಲಿ ವಿದ್ಯಾರ್ಥಿಗಳು ಗೌರವಯುತವಾಗಿ ನಡೆಯಲು ಶಿಕ್ಷಕರ ಮಾರ್ಗದರ್ಶನ ಮುಖ್ಯವಾಗಿದೆ. ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಉನ್ನತ ಹುದ್ದೆಯತ್ತಾ ಸಾಗುವಲ್ಲಿ ಶಿಕ್ಷಕರ ಪಾತ್ರಗಮನಾರ್ಹ. ಇದರೊಂದಿಗೆ ಭಾರತ ಸದ್ಗುರುವಾಗುವಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯನ್ನು ಕಡೆಗಣಿಸುವುದನ್ನು ಕಾಣಬಹುದು. ಆದರೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿತ್ವಗಳನ್ನಾ ನಿರ್ಮಿಸುವಲ್ಲಿ ಶಿಕ್ಷಕ ವೃತ್ತಿಯ ಪಾತ್ರ ಗಮನಾರ್ಹವಾಗಿದೆ ಎಂದು ಹೇಳಿದರು.
ಕಾಲೇಜಿನ ವಿಶೇಷ ಅಧಿಕಾರಿ(ಶಿಕ್ಷಕ ವಿಭಾಗ) ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ.ಎಸ್ ‘ಶಿಕ್ಷಕರ ಅರ್ಹತೆಗಳು ಮತ್ತು ಅಧಿಕಾರ’ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ನಿರಂತರ ಕಲಿಕೆಯ ಮನೋಭಾವವನನ್ನು, ಬೆಳೆಸುವ ಸಾಮರ್ಥ್ಯ ಎಲ್ಲಾ ಶಿಕ್ಷಕರು ಹೊಂದಿರಬೇಕು. ಮತ್ತುವಿದ್ಯಾರ್ಥಿಗಳಿಗೆ ಇಂತಹ ವಿಚಾರಗಳನ್ನು ಧಾರೆ ಎರೆಯುವುದು ಶಿಕ್ಷಕನ ಮುಖ್ಯ ಕರ್ತವ್ಯ. ಹಾಗೂ ನಿಷ್ಠೆ,ಬದ್ಧತೆ, ನಾಯಕತ್ವ, ಸಾಮಾಜಿಕ ಜವಾಬ್ದಾರಿಗಳನ್ನು ಅಳವಡಿಸಿಕೊಂಡು ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದರು.
ಕಾರ್ಯಗಾರದಲ್ಲಿ ಭವಿಷ್ ಘಟಕದ ಸಂಯೋಜಕ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪ್ರಮೋದ್ ಎಂ.ಜಿ, ಭವಿಷ್ ಘಟಕದ ಸಹ ಸಂಯೋಜಕಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕವಿತಾ ಉಪಸ್ಥಿತರಿದ್ದರು. ಕಾರ್ಯಗಾರವನ್ನು ಭವಿಷ್ ಘಟಕದ ವಿದ್ಯಾರ್ಥಿ ಜೊತೆ ಕಾರ್ಯದರ್ಶಿ ಆಶಾ ಸ್ವಾಗತಿಸಿ, ಭವಿಷ್ ಘಟಕದ ಕಾರ್ಯದರ್ಶಿ ನಿಶ್ಮಿತಾ ವಂದಿಸಿ, ಭವಿಷ್ ಘಟಕದ ವಿದ್ಯಾರ್ಥಿ ಅಧ್ಯಕ್ಷೆ ಚೈತನ್ಯ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
