ವಿವೇಕಾನಂದ ಕಾಲೇಜಿನಲ್ಲಿ 45ನೇ ಮಾನ್ಸೂನ್ ಚೆಸ್ ಟೂರ್ನಮೆಂಟ್

Upayuktha
0

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ, ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು. ಇಲ್ಲಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲ್ಲಿ ಅಂತರ್ ಕಾಲೇಜು ಹಾಗೂ ಅಂತರ್ ಜಿಲ್ಲಾ ಮಟ್ಟದ 45ನೇ ಮಾನ್ಸುನ್ ಚೆಸ್ ಟೂರ್ನಮೆಂಟ್‍ನ ಸಮಾರೋಪ ಸಮಾರಂಭ ನಡೆಯಿತು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಚೆಸ್ ಆಟಗಾರ ಮಾನಸಿಕವಾಗಿ ಸದೃಢನಾಗಿರಬೇಕು. ಆತನ ಯೋಚನಾಶೀಲ ಮನೋಭಾವ ಕೂಡ ಇತರರಿಗಿಂತ ಭಿನ್ನವಾಗಿರಬೇಕು. ಆಟಗಾರ ಆಟದ ನಿಯಮ ಮತ್ತು ಶಿಸ್ತುಗಳನ್ನು ಆಟದ ಜೊತೆಗೆ ಅವರ ದೈನಂದಿನ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಬೇಕು. ಆಟದಲ್ಲಿ ಅನುಸರಿಸುವ ನಡೆ ಇತರ ಆಟಗಾರರಿಗೂ ಪ್ರೇರಣೆಯಾಗಲಿ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಇಂದು ವಿದ್ಯಾರ್ಥಿಗಳು ಚೆಸ್ ಆಟಗಳಲ್ಲಿ ಭಾಗವಹಿಸುವುದು ಕಡಿಮೆ. ಕಲಿಕಾಹಂತ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳ ಅಭಿರುಚಿ ಹಾಗೂ ಆದ್ಯತೆಗಳು ಬದಲಾಗುತ್ತದೆ. ಆಟಗಾರರು ಚೆಸ್ ಆಡುವುದರ ಜೊತೆಗೆ ಆಟವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಯೋಚಿಸುವುದು ಮುಖ್ಯ. ಎದುರಾಳಿಯ ಚಿಂತನೆ ಮತ್ತು ತಂತ್ರಗಳನ್ನು ನಿಖರವಾಗಿ ತಿಳಿದುಕೊಂಡು ಅವರನ್ನು ಯಾವ ರೀತಿಯಾಗಿ ಸೋಲಿಸಬಹುದು ಎಂದು ಯೋಚಿಸಿ ಆಡುವುದು ಮುಖ್ಯ, ಇದು ಆಟಗಾರರಲ್ಲಿ ಬುದ್ಧಿಶಕ್ತಿ ಹಾಗೂ ಚಿಂತಾನಾಶೀಲ ಮನೋಭಾವನೆಯನ್ನು ಬೆಳೆಸುತ್ತದೆ ಎಂದರು.


45ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟದಲ್ಲಿ ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಪ್ರಥಮ ಸ್ಥಾನ, ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿ ವಿಷ್ಣುಪ್ರಸಾದ್ ದ್ವಿತೀಯ ಸ್ಥಾನ ಮತ್ತು ಕುಂದಾಪುರದ ಡಾ. ಬಿ ಬಿ ಹೆಗಡೆ ಕಾಲೇಜಿನ ಸಿಂಚನ್ ಜಿ ನಾಯಕ್ ಇವರು ತೃತೀಯ ಸ್ಥಾನ ಪಡೆದಿದ್ದಾರೆ.


ನಾಲ್ಕರಿಂದ ಹತ್ತನೇ ಸ್ಥಾನವನ್ನು ಕ್ರಮವಾಗಿ ನಿಶಾಂತ್ ಡಿಸೋಜಾ (ಡಾ. ಬಿ ಬಿ ಹೆಗಡೆ ಕಾಲೇಜು ಕುಂದಾಪುರ), ಶ್ರೇಯಸ್ ಆಚಾರ್ಯ (ಎಂಜಿಎಂ ಕಾಲೇಜು ಉಡುಪಿ), ಶ್ರೇಯಸ್ ಎಂ ಎಸ್ (ಎಸ್ ಡಿ ಎಂ ಕಾಲೇಜು ಉಜಿರೆ), ಅಂಕಿತ್ ಜೆ ಶೆಟ್ಟಿ (ಎಸ್.ಡಿ .ಎಂ ಕಾಲೇಜು ಉಜಿರೆ), ನಿತ್ಯಂತ ಎಚ್ (ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್), ಭಾಸ್ಕರ್ (ಎಸ್ ಡಿ ಎಂ ಕಾಲೇಜು ಉಜಿರೆ) ಹಾಗೂ ಗಗನ್ ಸ್ವರ್ಣ (ಜಿ .ಎಫ್ .ಜೆ ಸಿ, ಹಳೆಯಂಗಡಿ). ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಸಮನ್ವಿತ (ಎಸ್.ಡಿ.ಎಂ ಕಾಲೇಜು ಉಜಿರೆ), ಸಹನಾ ಕೆ.(ವಿವೇಕಾನಂದ ಕಾಲೇಜು ಪುತ್ತೂರು) ಮತ್ತು ನಿಶಾ ಆರ್ ಎಸ್ (ವಿವೇಕಾನಂದ ಕಾಲೇಜು ಪುತ್ತೂರು) ಇವರು ಪಡೆದುಕೊಂಡಿದ್ದಾರೆ. ಪಂದ್ಯಾಟದ ಮುಖ್ಯ ತೀರ್ಪುಗಾರರಾಗಿ ಮಂಗಳೂರಿನ ರಾಷ್ಟ್ರೀಯ ತೀರ್ಪುಗಾರ ಕೌಶಿಕ್ ನಡೆಸಿಕೊಟ್ಟರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಪಂದ್ಯಕೂಟವನ್ನು ಸಂಯೋಜಿಸಿದರು.


ಕಾರ್ಯಕ್ರಮವನ್ನು ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ರಶ್ಮಿತಾ ಸ್ವಾಗತಿಸಿ, ತೃತೀಯ ಬಿ.ಎ. ವಿದ್ಯಾರ್ಥಿನಿ ಹೇಮಲತಾ ವಂದಿಸಿ, ಭೂಮಿಕಾ ಮತ್ತು ಕೃತಿಕಾ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top