ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Upayuktha
0

 


ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ80ನೇ ಸ್ವಾತಂತ್ರ್ಯೋೀತ್ಸವ ಆಚರಿಸಲಾಯಿತು.


ಈ ಸಂದರ್ಭದಲ್ಲಿಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣಕನ್ನಡಜಿಲ್ಲಾ ಮಾಜಿ ಸೈನಿಕರ ಸಂಘ ಮಂಗಳೂರು ಇದರ ಮಾಜಿಅಧ್ಯಕ್ಷರಾದಎನ್ ಶರತ್ ಭಂಡಾರಿಅವರುಧ್ವಜಾರೋಹಣವನ್ನು ನೆರವೇರಿಸಿ, ನಂತರ ಮಾತನಾಡಿದಅವರು "ಸ್ವಾತಂತ್ರ್ಯ ನಮಗೆ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಸಾಕಷ್ಟುಜನರತ್ಯಾಗ ಬಲಿದಾನದ ಪ್ರತಿಫಲವಾಗಿ ಆಗಸ್ಟ್14ರಮಧ್ಯರಾತ್ರಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು. ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸ್ಮರಿಸಿಕೊಳ್ಳಬೇಕು. ಮಕ್ಕಳೇಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಭಾರತದಉತ್ತಮ ಪ್ರಜೆಗಳಾಗಿ, ಸಂವಿಧಾನದಲ್ಲಿ ನೀಡಿದ ನಾಗರೀಕ ಕರ್ತವ್ಯಗಳನ್ನು ನೀವೆಲ್ಲರೂ ಸರಿಯಾಗಿ ಪಾಲಿಸಿರಿ. 2047ರಲ್ಲಿ ನಮ್ಮ ಭಾರತಜಗತ್ತಿನ ಶ್ರೇಷ್ಠ ದೇಶ ಆಗಬೇಕು. ಹಾಗಾಗಬೇಕಾದರೆ ಇಂದಿನ ಯುವಕರು, ಮಕ್ಕಳು ವ್ಯಸನಗಳಿಗೆ ಬಲಿಯಾಗದೆ, ಸತ್ಸಂಗದಲ್ಲಿ ಬಾಳಿ ದೇಶಕಟ್ಟುವಲ್ಲಿಕಾರ್ಯ ಪ್ರವೃತ್ತರಾಗಬೇಕು. ತಂದೆತಾಯಿಯಯರಕನಸನ್ನುಈಡೇರಿಸುತ್ತ,ದೇಶದಉತ್ತಮ ನಾಗರೀಕರಾಗಿ ಬಾಳಿ ಎಂದು ಹೇಳುತ್ತಾ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. 


ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ ಸಾರುವ ಹಾಡು, ನೃತ್ಯ, ನಾಟಕಗಳನ್ನೊಳಗೊಂಡ ವಿವಿಧ ಸಾಂಸ್ಕøತಿಕಕಾರ್ಯಕ್ರಮಜರುಗಿತು. ದಿನದ ಪ್ರಾಮುಖ್ಯತೆಯನ್ನುಅಕ್ಷತಾ ವಾಚಿಸಿದರುಮತ್ತು ವಿದ್ಯಾರ್ಥಿ ಚಂದ್ರಮೋಹನ್‍ಕಣ್ಣು ಮುಚ್ಚಿಕೊಂಡು ವಿವಿಧ ಬಣ್ಣಗಳನ್ನು, ವಿವಿಧ ವಸ್ತುಗಳನ್ನು ಮತ್ತು ವಿವಿಧ ಆಕೃತಿಗಳನ್ನು ಗುರುತಿಸುವ ಮತ್ತು ದೂರವಾಣಿ ಸಂಖ್ಯೆಗಳನ್ನು ಹೇಳುವ ಮೂಲಕ ಗಾಂಧಾರಿ ವಿದ್ಯೆಯನ್ನು ಪ್ರದರ್ಶಿದನು.ಈ ಸಂದರ್ಭದಲ್ಲಿಗಾಂಧಾರಿ ವಿದ್ಯೆಯಲ್ಲಿಅತ್ಯುತ್ತಮ ಪ್ರದರ್ಶನ ಮಾಡಿರುದಕ್ಕೊಸ್ಕರ ಕಲಂ ವಲ್ಡ್‍ರೆಕಾರ್ಡ್ ಪ್ರಶಸ್ತಿಯನ್ನು ಸ್ವಿಕರಿಸಿದಕ್ಕೋಸ್ಕರ ವಿದ್ಯಾರ್ಥಿಯನ್ನು ವೇದಿಕೆಯಲ್ಲಿಅಭಿನಂದಿಸಲಾಯಿತು. 


ಈ ಸಂದರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದಡಾಕೆ. ಸಿ. ನಾೈಕ್‍ಶಕ್ತಿ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಶ್ರೀಮತಿ ಸಗುಣಸಿ. ನಾೈಕ್, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್‍ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಶ್ರೀಮತಿ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು. 


ಧೃತಿ ಕಾರ್ಯಕ್ರಮವನ್ನು ನಿರೂಪಿಸಿದರು. ಆದ್ಯ ಸ್ವಾಗತಿಸಿದರು, ಆದ್ಯ ಆರ್.ಧನ್ಯವಾದವನ್ನು ಸಲ್ಲಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top