ಸುದಾನ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರೋತ್ಸವದ ಸಡಗರ

Upayuktha
0

 


ಪುತ್ತೂರು: ಪುತ್ತೂರಿನ ಸುದಾನ ವಿದ್ಯಾಸಂಸ್ಥೆಗಳು ಸುದಾನ ಕ್ರೀಡಾಂಗಣದಲ್ಲಿ 80 ನೇ ವರ್ಷದ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಿದವು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರೊ. ಮಹಮ್ಮದ್ ಶಕೀರ್ ರವರು ಧ್ವಜಾರೋಹಣ ಮಾಡಿ, ಧ್ವಜವಂದನೆಯನ್ನು ಸಲ್ಲಿಸಿ ಮಾತನಾಡುತ್ತಾ "ಹಿರಿಯರ ತ್ಯಾಗ ಬಲಿದಾನಗಳನ್ನು ಮರೆಯಬಾರದು. ಪ್ರಪಂಚದಲ್ಲೆ ಅಮೋಘವಾದ ಸಂವಿಧಾನವು ನಮ್ಮದು. ಭಾರತದಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳಲು ವಿದ್ಯಾರ್ಥಿಗಳು ತಮ್ಮ ಕರ್ತವ್ಯವನ್ನು ಅರಿತು ಶ್ರಮಿಸಬೇಕು"ಎಂದು ನುಡಿದರು.


ಸುದಾನ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಎಂ ಜಿ ರಫೀಕ್ ರವರು ಮಾತನಾಡುತ್ತಾ “ಆಧುನಿಕ ಯುಗದಲ್ಲಿರುವ ಯುವಜನತೆ ಇಂದಿನ ಸಮೃದ್ಧ ಬಾಳಿಗೆ ಕಾರಣರಾದವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವ ಸುದಾನ ವಿದ್ಯಾಸಂಸ್ಥೆಗಳ ಕಾರ್ಯವು ಶ್ಲಾಘನರ್ಹ” ಎಂದು ಅಭಿಪ್ರಾಯಪಟ್ಟರು.


“ಸ್ವಾತಂತ್ರ್ಯ ಎಂದರೆ ಸ್ವಚ್ಛಂದವಲ್ಲ . ತಮ್ಮ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತಿಳಿದು ಅನುಸರಿಸುವುದು. 'ಮೊದಲು ದೇಶ ಆನಂತರ ಬದುಕುʼ ಎನ್ನುವ ದೇಶಾಭಿಮಾನವು ನಮ್ಮೆಲ್ಲರಲ್ಲಿರಬೇಕು “ ಎಂದು ಸುದಾನ ಪದವಿಪೂರ್ವ ಕಾಲೇಜಿನ ಸಂಚಾಲಕರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಅಭಿಪ್ರಾಯ ಪಟ್ಟರು.


ಇದೇ ಸಂದರ್ಭದಲ್ಲಿ ಸ್ಕೌಟ್ಸ್ -ಗೈಡ್ಸ್ನ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೀಡಿದರು. ಶಾಲೆಯ ಸ್ಕೌಟ್ಸ್-ಗೈಡ್ಸ್‌ ವಿದ್ಯಾರ್ಥಿಗಳು ʼದೇಶಭಕ್ತಿ ಗೀತಾ ಗಾಯನʼ ವನ್ನು ನಡೆಸಿಕೊಟ್ಟರು.


ರೋಟರಿ ಇಲೈಟ್ ನ ಸದಸ್ಯರಾದ ರೊ. ಮೌನೇಶ್ ವಿಶ್ವಕರ್ಮ, ರೊ. ಜಾನ್ಸನ್, ಆಡಳಿತ ಮಂಡಳಿಯ ಕೋಶಾಧಿಕಾರಿ ಆಸ್ಕರ್ ಆನಂದ್, ಆಡಳಿತಾಧಿಕಾರಿ  ಸುಶಾಂತ್ ಹಾರ್ವಿನ್, ಸುದಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ ಸಿ , ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ಉಪಮುಖ್ಯ ಶಿಕ್ಷಕಿ ಲವೀನಾ ಹನ್ಸ್, ಸಂಯೋಜಕಾರದ ಶ್ರೀಮತಿ ಪ್ರತಿಮಾ, ಶ್ರೀಮತಿ ಗಾಯತ್ರಿ, ಶ್ರೀಮತಿ ಅಮೃತವಾಣಿ, ಸುದಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಾಯಕರಾದ ಆದಿ ಶಂಕರ್ ಮತ್ತು ಗ್ರಿಮಾ ಹಝೆಲ್ ವೇಗಸ್ , ಖದೀಜತ್ ಅಸೀಮ ಸನೂಫ, ಸುದಾನ ವಸತಿ ಶಾಲೆಯ ವಿದ್ಯಾರ್ಥಿ ನಾಯಕರಾದ ಅನೀಶ್ ಎಲ್ ರೈ, ದೇವಮುರಾರಿ ಗುಂಜನ್, ಎಸ್ಟಾವಿಯೋ ವೋನ್ ಜೋಸೆಫ್, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಶೇಖ್ ಮೊಹಮ್ಮದ್ ಅರ್ಹನ್ ದಿನದ ಮಹತ್ತ್ವವನ್ನು ತಿಳಿಸಿದರು. ವಿದ್ಯಾರ್ಥಿನಿ ಸಂಖ್ಯಾ ಸುಖೇಶ್ ಅಭ್ಯಾಗತರನ್ನು ಪರಿಚಯಿಸಿದರು.


ವಿದ್ಯಾರ್ಥಿ ಪ್ರದ್ಯುಮ್ನ ಡಿ ಆಚಾರ್ಯ ಸ್ವಾಗತಿಸಿ, ವಿದ್ಯಾರ್ಥಿನಿ ನಫೀಸತ್ ಇನ್ಶಾ ವಂದಿಸಿದರು.


ವಿದ್ಯಾರ್ಥಿಗಳಾದ ಭಗತ್ ಕೃಷ್ಣ ಮತ್ತು ರಿಯೋನಾ ವೆನಿಶಾ ವೇಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಸೋಶಿಯಲ್ ಕ್ಲಬ್ ನಿರ್ದೇಶಕಿ ಹರ್ಷಿತಾ ನಾೈಕ್ ಯೋಗಿತಾ ಎ ಹಾಗೂ ಇತರ ಸದಸ್ಯರು ಸಹಕರಿಸಿದರು.


ಜಾಗೃತಿ ಸೋಶಿಯಲ್ ಕ್ಲಬ್ ಮತ್ತು ಶಾಲಾ ಕ್ರೀಡಾ ಸಂಘ ಶಕ್ತಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top