ಚೇತನಾ ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Upayuktha
0

 


ಮಂಗಳೂರು: ಸೇವಾ ಭಾರತಿ (ರಿ) ಇದರ ಅಂಗ ಸಂಸ್ಧೆಯಾದ ಚೇತನಾ ಬಾಲ ವಿಕಾಸ ಕೇಂದ್ರ, ವಿ.ಟಿ. ರೋಡ್, ಮಂಗಳೂರು ಇಲ್ಲಿ ಇಂದು (ಆ.28) ವಿಶೇಷ ಮಕ್ಕಳಿಂದ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಮಕ್ಕಳು ಪರಸ್ಪರ ರಾಖಿ ಕಟ್ಟಿ ಸಂಭ್ರಮಿಸಿದರು. ನಂತರ ಶಿಕ್ಷಕಿಯರು ಎಲ್ಲಾ ಮಕ್ಕಳಿಗೆ ಆರತಿ ಬೆಳಗಿ, ತಿಲಕ ಇಟ್ಟು ರಕ್ಷೆಯ ದಾರ ಕಟ್ಟಿದರು. ತದನಂತರ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.

 

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಪ್ರೀತಾ ಅವರು ಶುಭ ಹಾರೈಸಿದರು. ಸೇವಾ ಭಾರತಿ ಸಂಸ್ಧೆಯ ವಿಶ್ವಸ್ಧರು, ಸ್ವಯಂ ಸೇವಕರು, ಮಕ್ಕಳು, ಪೋಷಕರು, ಶಿಕ್ಷಕರು, ಶಿಕ್ಷಕೇತರರು ಹಾಗೂ ಕಚೇರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top