ನವದೆಹಲಿ: ಇಲ್ಲಿ ನಡೆಯುತ್ತಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ 2026ರ ಚಾತುರ್ಮಾಸ್ಯ ವ್ರತ ಸತ್ರದ ಶ್ರಾವಣ ಶುಕ್ರವಾರದ ಪವಿತ್ರ ದಿನದಂದು ಹಲವು ಪ್ರಮುಖ ಗಣ್ಯರು ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಶ್ರೀ ಹಯಗ್ರೀವ ಜಯಂತಿ, ಸಂಸ್ಕೃತ ದಿನಾಚರಣೆ ಹಾಗೂ ರಕ್ಷಾಬಂಧನದ ತ್ರಿವೇಣಿ ಸಂಗಮದ ಈ ಪವಿತ್ರ ದಿನದಂದು ಚಾತುರ್ಮಾಸ್ಯ ಸತ್ರದ ಮಾರ್ಗದರ್ಶಕರೂ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿಗಳೂ ಆಗಿರುವ ಬಿ.ಎಲ್. ಸಂತೋಷ್, ದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ (ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ), ಶಾಸಕ ಅನಿಲ್ ಶರ್ಮಾ ಹಾಗೂ ಬಿಜೆಪಿಯ ಈಶಾನ್ಯ ಭಾರತ ಸಂಯೋಜಕ ಉದ್ಯಮಿ ರಾಜ್ ಬಬ್ಬರ್ ಅವರು ನವದೆಹಲಿಯ ವೇದವ್ಯಾಸ ಗುರುಕುಲಕ್ಕೆ ಆಗಮಿಸಿದ್ದರು.
ಗುರುಕುಲದ ಆವರಣದಲ್ಲಿ ಶ್ರೀ ಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನ ಪಡೆದ ಗಣ್ಯರು, ಬಳಿಕ ಪೂಜ್ಯ ಶ್ರೀ ಪೇಜಾವರ ಶ್ರೀಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಅನುಗ್ರಹ ಪ್ರಸಾದ ಸ್ವೀಕರಿಸಿದರು.
ವಿಶೇಷವಾಗಿ, ರಕ್ಷಾಬಂಧನದ ಪ್ರಯುಕ್ತ ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರು ಪೂಜ್ಯ ಸ್ವಾಮೀಜಿಯವರಿಗೆ ರಕ್ಷೆಯನ್ನು ಕಟ್ಟಿ ಧಾನ್ಯ-ಫಲ ಮಂತ್ರಾಕ್ಷತೆ ಆಶೀರ್ವಾದ ಪಡೆದುಕೊಂಡರು. ಚಾತುರ್ಮಾಸ್ಯ ಸತ್ರದಲ್ಲಿ ಪ್ರತಿದಿನವೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ಜರುಗುತ್ತಿದ್ದು, ಹಲವಾರು ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

