ಪ್ರಕೃತಿ ರೈತನಿಗೆ ಕೊಟ್ಟ ಅದ್ಭುತ ಮಿತ್ರ..

Upayuktha
0

                                  AI ಚಿತ್ರ

ಮ್ಮರೆಲ್ಲರಿಗೂ ಅನ್ನದಾತನೆ ರೈತ. ರೈತನ ಕಸಬು ಕೃಷಿ. ಮಣ್ಣು ಫಲವತ್ತಾಗಿದ್ದರೆ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ಕೃಷಿಯ ಮೂಲ ತತ್ವ. ಈ ಮಣ್ಣಿನ ಫಲವತ್ತತೆಯನ್ನು ನೈಸರ್ಗಿಕವಾಗಿ ಕಾಪಾಡುವಲ್ಲಿ ಎರೆಹುಳುಗಳು ಕೊಡುಗೆ ಅಪಾರವಾಗಿದೆ. 


ಸ್ನೇಹದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರೈತನಿಗೆ ಸಹಾಯ ಮಾಡುತ್ತೇವೆ. ಹಾಗೆಯೇ ಎರೆಹುಳು ಸಹ ಯಾವುದೇ ನಿರೀಕ್ಷೆಯಿಲ್ಲದೆ ಹಗಲಿರುಳು ರೈತನಿಗೆ ಸಹಾಯ ಮಾಡುವುದು. 


ಎರೆಹುಳುವನ್ನು ಜಗತ್ತಿನ ಅತ್ಯುತ್ತಮ ಬೂಗತ ಜೀವವಿಜ್ಞಾನಿ ಎಂದು ಕರೆಯಲಾಗುತ್ತದೆ. ಕಾರಣ ಈ ಹುಳುಗಳು ಭೂಮಿಯಲ್ಲಿ ಮಣ್ಣಿನ ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಸದಾ ಚಲಿಸುತ್ತಿರುತ್ತವೆ. ಹೀಗೆ ಚಲಿಸುವಾಗ ಮಣ್ಣಿನಲ್ಲಿ ಸಣ್ಣ ಸಣ್ಣ ರಂಧ್ರಗಳು ನಿರ್ಮಾಣವಾಗುತ್ತವೆ. 


ಈ ರಂಧ್ರಗಳ ಮೂಲಕ ಮಣ್ಣಿನ ಆಳಕ್ಕೆ ಸುಲಭವಾಗಿ ಆಮ್ಲಜನಕ ಹೋಗಲು ಮತ್ತು ಸಸ್ಯಗಳ ಬೇರುಗಳ ಉಸಿರಾಟಕ್ಕೆ ಸಹಾಯಕ ಹಾಗೂ ದೀರ್ಘಕಾಲದವರೆಗೆ ನೀರನ್ನು ಹಿಡಿಟ್ಟುಕೊಳ್ಳಲು ಮತ್ತು ಬೇರುಗಳು ಮುಕ್ತವಾಗಿ ಚಲಿಸಲು ಸಹಕರಿಯಾಗಿದೆ. 


ಪ್ರಕೃತಿ ರೈತನಿಗೆ ನೀಡಿದ ದೊಡ್ಡ ಉಡುಗರೆಯಾಗಿರುವ ಎರೆಹುಳು. ಇದು ಭೂಮಿಯಲ್ಲಿ ಒಣಗಿದ ಎಲೆ, ಇತರೆ ಕಸವನ್ನು ಸೇವಿಸಿ ಜೀರ್ಣಿಸಿಕೊಂಡು ಹೊರಹಾಕುವ ವಿಸರ್ಜಕವನ್ನು ರಾಸಾಯನಿಕ ಗೊಬ್ಬರವಾಗಿದೆ. ಇದು ಇಂದಿನ ರಾಸಾಯನಿಕ ಗೊಬ್ಬರಗಳಿಗಿಂತ ಹೆಚ್ಚು ಮಣ್ಣಿನ ಸಮತೋಲನ, ಬೆಳೆಗಳ ಗುಣಮಟ್ಟ, ಮಣ್ಣಿನ ಫಲವತ್ತತೆಯಲ್ಲಿ ತನ್ನ ಕಾರ್ಯವೈಖರಿಯನ್ನು ಗುಣಮಟ್ಟ ಪಡಿಸುವಲ್ಲಿ ಯಶಸ್ವಿಯಾಗಿದೆ. 


ಅಂತಹ ಅದ್ಭುತವಾದ ಸ್ನೇಹಿತನನ್ನು ಎಲ್ಲಾ ರೈತರರೂ ಬಳಸುತ್ತಿರುವವರು. ​ ರಾಸಾಯನಿಕಗಳ ಅತಿಯಾದ ಬಳಕೆ, ​ಟ್ರಾಕ್ಟರ್‌ಗಳ ಅತಿ ಬಳಕೆ ಮಾಡುವುದರಿಂದ ಇವುಗಳ ಅಸ್ತಿತ್ವವನ್ನು ನಾಶಮಾಡುತ್ತಿದ್ದೇವೆ. 


​ಈಗಿನ ರೈತರು ತಾಂತ್ರಿಕವಾಗಿ ಎಷ್ಟೇ ಮುನ್ನಡೆದರೂ ಎರೆಹುಳು ಮಾಡುವ ಕೆಲಸವನ್ನು ಯಾವುದೇ ಆಧುನಿಕ ತಂತ್ರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೃಷಿಯಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು, ಭೂಮಿಗೆ ದನದ ಸಗಣಿ ಮತ್ತು ಒಣ ಸೊಪ್ಪಿನ ಹೊದಿಕೆಯನ್ನು ನೀಡುವುದರ ಮೂಲಕ ಎರೆಹುಳುಗಳನ್ನು ಸಂರಕ್ಷಿಸಿಬೇಕು. 


ಎರೆಹುಳುಗಳನ್ನು ಉಳಿಸಿಕೊಳ್ಳುವುದು ಎಂದರೆ ನಮ್ಮ ಮಣ್ಣನ್ನು ಮತ್ತು ಕೃಷಿಯ ಭವಿಷ್ಯವನ್ನು ಉಳಿಸಿಕೊಂಡಂತೆ.


- ಸಾವಿತ್ರಿ ಬಸಪ್ಪ ಅಣ್ಣಿಗೇರಿ 
ಬಸವೇಶ್ವರ ಕಲಾ ಮಹಾವಿದ್ಯಾಲಯ,
ಪತ್ರಿಕೋದ್ಯಮ ವಿದ್ಯಾರ್ಥಿನಿ,
ಬಾಗಲಕೋಟ 




Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top