" ಗಣಿತ ಕಷ್ಟವಲ್ಲ, ಧನಾತ್ಮಕ ಚಿಂತನೆಯಿಂದ ಸುಲಭ: ರಾಜೇಂದ್ರ ಬಿ. ಶೆಟ್ಟಿ "
ವಿದ್ಯಾರ್ಥಿಗಳು ಧನಾತ್ಮಕವಾಗಿ ಚಿಂತನೆ ನಡೆಸಬೇಕು. ಗಣಿತ ಕಷ್ಟವೆಂದು ಭಾವಿಸಿದರೆ ಕಷ್ಟ.ಸುಲಭವೆಂದು ಯೋಚಿಸಿದರೆ ಅದು ಸುಲಭವಾಗುತ್ತದೆ. ನಮ್ಮ ಯೋಚನೆ ಯಂತೆಯೇ ಕಾರ್ಯಗಳು ನಡೆಯುತ್ತವೆ ಎಂದು ಗಣಿತ ತಜ್ಞ ಮತ್ತು ಸಾಹಿತಿ ರಾಜೇಂದ್ರ ಬಿ. ಶೆಟ್ಟಿ ಹೆಜಮಾಡಿ, ಬೆಂಗಳೂರು ಅವರು ನುಡಿದರು.
ಮಧ್ಯ ಸರಕಾರಿ ಪ್ರೌಢ ಶಾಲೆಯಲ್ಲಿ ಸುರತ್ಕಲ್ ರೋಟರಿ ಕ್ಲಬ್ ಮತ್ತು ಸಿಂಗಾರ ಸುರತ್ಕಲ್ ಸಹಯೋಗದಲ್ಲಿ ನಡೆದ 'ಗಣಿತ ಬಲು ಸುಲಭ ' ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಂಕಲನ, ವ್ಯವಲಕನ, ಭಾಗಾಕಾರ, ಗುಣಾಕಾರ ದ ವಿಭಿನ್ನ ಸಮಸ್ಯೆಗಳನ್ನು ಸರಳವಾಗಿ ಬಿಡಿಸುವ ಮಾದರಿಗಳನ್ನು ಕಲಿಸಿಕೊಟ್ಟರು.
ಸುರತ್ಕಲ್ ರೋಟರಿ ಕ್ಲಬ್ ನ ಅಧ್ಯಕ್ಷ ಶ್ರೀಧರ್ ಟಿ. ಎನ್. ಮಾತನಾಡಿ ವಿದ್ಯಾರ್ಥಿಗಳು ಉನ್ನತ ಕನಸು ಕಾಣುವುದರೊಂದಿಗೆ ಪ್ರಯತ್ನ ಶೀಲರಾಗಬೇಕು ಎಂದರು.
ಸಿಂಗಾರ ಸುರತ್ಕಲ್ ನ ಕಾರ್ಯದರ್ಶಿ ಪ್ರೊ. ಕೃಷ್ಣ ಮೂರ್ತಿ ಅವರು ಕಠಿಣವೆಂದು ಬಿಂಬಿತವಾಗುತ್ತಿರುವ ಗಣಿತ ಬಲು ಸುಲಭ ವೆಂಬುದನ್ನು ತಿಳಿಸುವ ಪ್ರಯತ್ನವನ್ನು ಕಾರ್ಯಾಗಾರಗಳ ಮೂಲಕ ಮಾಡಲಾಗುತ್ತಿದೆ ಎಂದರು.
ರಾಜೇಂದ್ರ ಬಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
' ಗಣಿತ ಬಹಳ ಸುಲಭ ' ಕೃತಿ ಯನ್ನು ಹಾಗೂ ಇತರ ಕೃತಿ ಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು.
ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಮಧ್ಯ ಸ್ವಾಗತಿಸಿದರು.
ಮುಖ್ಯ ಶಿಕ್ಷಕಿ ಜೇನ್ ಡಿ ಸೋಜ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

