ಮಹೀಂದ್ರಾ ‘ಬ್ಲಾಜೊ ಐ-ಟಿಆರ್‌ಕೆ’ ವಾಣಿಜ್ಯ ವಾಹನ ಮಾರುಕಟ್ಟೆಗೆ ಬಿಡುಗಡೆ

Upayuktha
0

ಮಂಗಳೂರು: ಮಹೀಂದ್ರಾ ಟ್ರಕ್ ಮತ್ತು ಬಸ್, ಇಂದು ಹೊಚ್ಚ ಹೊಸ "ಬ್ಲಾಜೊ ಐ-ಟಿಆರ್‍ಕೆ" ಬೃಹತ್ ವಾಣಿಜ್ಯ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಿನೂತನ 'ಪ್ರಾಫಿಟ್ ಕಾ ರಾಕೆಟ್' ಸಾಗಣೆದಾರರು ಮತ್ತು ಫ್ಲೀಟ್ ಮಾಲೀಕರಿಗೆ ಲಾಭವಾಗುವಂತೆ ವಿನ್ಯಾಸಗೊಳಿಸಿದ ಹೊಸ ಪೀಳಿಗೆಯ ಭಾರಿ ವಾಣಿಜ್ಯ ವಾಹನವಾಗಿದೆ.



ಅತ್ಯುತ್ತಮ ಇಂಧನ ದಕ್ಷತೆ, ಉನ್ನತ- ಕಾರ್ಯಕ್ಷಮತೆಯ ಪವರ್‍ಟ್ರೇನ್, ಬುದ್ಧಿಮತ್ತೆ ಸಂಪರ್ಕಿತ ತಂತ್ರಜ್ಞಾನಗಳು ಮತ್ತು ಉದ್ಯಮ- ಪ್ರಮುಖ ಅಪ್‍ಟೈಮ್ ಗ್ಯಾರಂಟಿಯನ್ನು ಸಂಯೋಜಿಸುತ್ತದೆ. ಇದು ಗ್ರಾಹಕರ ಗಳಿಕೆಯನ್ನು ಗರಿಷ್ಠಗೊಳಿಸಲು, ಉತ್ಪಾದಕತೆಯನ್ನು ಸುಧಾರಿಸಲು, ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ತಮ್ಮ ಫ್ಲೀಟ್‍ನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಎಸ್‍ಎಂಎಲ್ ಮಹೀಂದ್ರಾದ ಎಕ್ಸಿಕ್ಯೂಟಿವ್ ಚೇರ್‍ಮನ್ ಹಾಗೂ ಟ್ರಕ್ಸ್ & ಬಸಸ್ ಅಧ್ಯಕ್ಷ ವಿನೋದ್ ಸಹಾಯ್ ಹೇಳಿದ್ದಾರೆ.


ಹೆಚ್ಚು ಗಳಿಕೆ, ಹೆಚ್ಚು ಚಾಲನೆ, ಅಧಿಕ ನಿಯಂತ್ರಣ ಹೀಗೆ "ಬ್ಲಾಜೊ ಐ-ಟಿಆರ್‍ಕೆ"ಯನ್ನು 3 ಪ್ರಬಲ ಗ್ರಾಹಕ ಭರವಸೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಮಹೀಂದ್ರಾ "ಬ್ಲಾಜೊ ಐ-ಟಿಆರ್‍ಕೆ" ಶ್ರೇಣಿಯು 3 ಬಣ್ಣಗಳಲ್ಲಿ ಲಭ್ಯವಿದ್ದು, ವಿವಿಧ ರೂಪಾಂತರಗಳು ಮತ್ತು ಅಪ್ಲಿಕೇಶನ್‍ಗಳಲ್ಲಿ ಲಭ್ಯವಿದೆ.


ಇದು ನಿಜವಾಗಿಯೂ 'ಪ್ರಾಫಿಟ್ ಕಾ ರಾಕೆಟ್' ಆಗಿದ್ದು, ಉದ್ಯಮದ ಇತರೆ ಟ್ರಕ್‍ಗಳಿಗೆ ಹೋಲಿಸಿದರೆ 5 ವರ್ಷಗಳಲ್ಲಿ ಪ್ರತಿ ಟ್ರಕ್‍ಗೆ 15 ಲಕ್ಷ ರೂ. ವರೆಗೆ ಲಾಭ ಹೆಚ್ಚಿಸುವ ಸಾಮಥ್ರ್ಯ ಹೊಂದಿದೆ. ಜತೆಗೆ ಉದ್ಯಮದಲ್ಲೇ ಮೊದಲ ಮತ್ತು ಸರಿಸಾಟಿಯಿಲ್ಲದ ಅಪ್‍ಟೈಮ್ ಗ್ಯಾರಂಟಿ ಹೊಂದಿದೆ ಎಂದು ವಿವರಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top