ಮಂಗಳೂರು: ಜನ ಫೈನಾನ್ಸ್ ಬ್ಯಾಂಕ್ ಶಾಖೆ ಉದ್ಘಾಟನೆ

Upayuktha
0

ಮಂಗಳೂರು: ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‍ನ 828ನೇ ಶಾಖೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.


ಔಪಚಾರಿಕ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಸೇವಾಜಾಲ ವಿಸ್ತರಿಸಲಾಗುತ್ತಿದ್ದು, ಹೊಸ ಶಾಖೆಯಲ್ಲಿ ಠೇವಣಿ ಮತ್ತು ಬ್ಯಾಂಕಿಂಗ್ ಹಣಕಾಸು ಉತ್ಪನ್ನಗಳು, ಚಿನ್ನದ ಸಾಲ, ವಾಹನ ಸಾಲ, ಗೃಹ ಸಾಲ, ವಾಣಿಜ್ಯ ಬ್ಯಾಂಕಿಂಗ್ ಸೇವೆಗಳು, ವಿಮೆ ಮತ್ತು ಸಂಪತ್ತು ನಿರ್ವಹಣಾ ಉತ್ಪನ್ನಗಳು ಲಭ್ಯ. ಬ್ಯಾಂಕಿಂಗ್ ಉತ್ಪನ್ನ ಶ್ರೇಣಿ ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳ ನೆರವಿನಿಂದ ಗ್ರಾಹಕರಿಗೆ ಒಂದೇ ಸೂರಿನಡಿ ವೈವಿಧ್ಯಮಯ ಸೌಲಭ್ಯಗಳು ಲಭ್ಯ ಎಂದು ಪ್ರಕಟಣೆ ಹೇಳಿದೆ.


ನೂತನ ಶಾಖೆಯು ಮಂಗಳೂರಿನ ಶಾರದಾ ಸ್ಕೂಲ್ ರಸ್ತೆಯಲ್ಲಿರುವ ಸೋಮಯಾಜಿ ಎಸ್ಟೇಟ್‍ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮುಖ್ಯ ಮಾರುಕಟ್ಟೆ ಅಧಿಕಾರಿ ಶ್ರೀನಿವಾಸ ಮೂರ್ತಿ, ಕ್ರಾಸ್-ಸೆಲ್ ವಿಭಾಗದ ಮುಖ್ಯಸ್ಥ ಸತೀಶ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top