ನವಜಾತ ಶಿಶುಗಳಿಗಾಗಿ ಹಿಮಾಲಯದ ಪ್ಯೂರ್ ಬಿಗಿನಿಂಗ್ಸ್ ಘೀ ಗಿಫ್ಟ್ ಪ್ಯಾಕ್ ಬಿಡುಗಡೆ: ಎಐ ಜಾಹೀರಾತು ಅನಾವರಣ

Upayuktha
0


ಮಂಗಳೂರು: ಮಕ್ಕಳ ಆರೈಕೆ ಉತ್ಪನ್ನಗಳ ಪ್ರಮುಖ ಸಂಸ್ಥೆ ಹಿಮಾಲಯ ಬೇಬಿಕೇರ್, ನವಜಾತ ಶಿಶುಗಳಿಗೆ ನೀಡುವ ಮೊದಲ ಉಡುಗೊರೆಯಾಗಿ ಹೊಚ್ಚಹೊಸ ಹಿಮಾಲಯ ಬೇಬಿ ಪ್ಯೂರ್ ಬಿಗಿನಿಂಗ್ಸ್ ಘೀ ಗಿಫ್ಟ್ ಪ್ಯಾಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ವಿಶೇಷ ಉಡುಗೊರೆ ಪ್ಯಾಕ್‌ ಗಾಗಿ ಎಐ ಆಧಾರಿತ ನೂತನ ಡಿಜಿಟಲ್ ವೀಡಿಯೊ ಜಾಹೀರಾತನ್ನು ಸಂಸ್ಥೆ ಅನಾವರಣಗೊಳಿಸಿದೆ.


ಭಾರತೀಯ ಸಂಪ್ರದಾಯದಲ್ಲಿ ಹಸುಗೂಸುಗಳಿಗೆ ನೀಡುವ ಉಡುಗೊರೆಗಳು ಕೇವಲ ವಸ್ತುವಾಗದೆ, ಮಮತೆ ಮತ್ತು ಆಶೀರ್ವಾದದ ಸಂಕೇತವಾಗಿರುತ್ತವೆ. ಈ ಸಾಂಪ್ರದಾಯಿಕ ಭಾವನೆಯನ್ನು ಆಧುನಿಕ ದೃಷ್ಟಿಕೋನದಲ್ಲಿ ಕಟ್ಟಿಕೊಡುವ ಉದ್ದೇಶದಿಂದ ಈ ಗಿಫ್ಟ್ ಪ್ಯಾಕ್ ಅನ್ನು ವಿನ್ಯಾಸಗೊಳಿಸಲಾಗಿದೆ.


ಮಕ್ಕಳ ತಜ್ಞರಿಂದ ದೃಢೀಕರಿಸಲ್ಪಟ್ಟ ಹಾಗೂ ಶುದ್ಧ ಹಸುವಿನ ತುಪ್ಪದ ಅಂಶಗಳನ್ನು ಒಳಗೊಂಡ ಐದು ಅಗತ್ಯ ಬೇಬಿಕೇರ್ ಉತ್ಪನ್ನಗಳು ಈ ಗಿಫ್ಟ್ ಪ್ಯಾಕ್‌ನಲ್ಲಿವೆ. ಅವುಗಳೆಂದರೆ: ಶುದ್ಧ ಹಸುವಿನ ತುಪ್ಪಯುಕ್ತ ಬೇಬಿ ಬಾರ್ (ಸೋಪ್), ಹೆಡ್ ಟು ಟೋ ಬೇಬಿ ವಾಶ್, ಬೇಬಿ ಲೋಷನ್, ಬೇಬಿ ಕ್ರೀಮ್, ಬೇಬಿ ರಾಶ್ ರಿಲೀಫ್ ಕ್ರೀಮ್. 


ಎಲ್ಲಾ ಉತ್ಪನ್ನಗಳು ಚರ್ಮರೋಗ ಪರೀಕ್ಷೆಗೆ ಒಳಪಟ್ಟಿದ್ದು, ಪ್ಯಾರಾಬೆನ್ ಮತ್ತು ಹಾನಿಕಾರಕ ರಾಸಾಯನಿಕಗಳಿಂದ ಸಂಪೂರ್ಣ ಮುಕ್ತವಾಗಿವೆ ಎಂದು ಕಂಪನಿ ತಿಳಿಸಿದೆ.


ಉತ್ಪನ್ನ ಬಿಡುಗಡೆ ಕುರಿತು ಮಾತನಾಡಿದ ಹಿಮಾಲಯ ವೆಲ್‌ ನೆಸ್ ಕಂಪನಿಯ ಬೇಬಿಕೇರ್ ವಿಭಾಗದ ನಿರ್ದೇಶಕ ಎನ್. ವಿ. ಚಕ್ರವರ್ತಿ ಅವರು, "ಮಗುವಿನ ಆಗಮನದ ಸಂದರ್ಭದಲ್ಲಿ ನೀಡುವ ಮೊದಲ ಉಡುಗೊರೆ ಪರಿಶುದ್ಧ ಹಾಗೂ ಅರ್ಥಪೂರ್ಣವಾಗಿರಬೇಕು ಎಂಬುದು ನಮ್ಮ ಆಶಯ. ನಮ್ಮ ಸಾಂಪ್ರದಾಯಿಕ ಮಹತ್ವವುಳ್ಳ ಹಸುವಿನ ತುಪ್ಪದ ಸತ್ವ ಮತ್ತು ಆಧುನಿಕ ಪೋಷಕರು ಬಯಸುವ ವಿಶ್ವಾಸಾರ್ಹ ಉತ್ಪನ್ನಗಳನ್ನು ಈ ಪ್ಯೂರ್ ಬಿಗಿನಿಂಗ್ಸ್ ಘೀ ಗಿಫ್ಟ್ ಪ್ಯಾಕ್ ನಲ್ಲಿ ಸಂಯೋಜಿಸಲಾಗಿದೆ" ಎಂದರು.


ನವಜಾತ ಶಿಶುಗಳ ಉಡುಗೊರೆ ವಿಭಾಗದಲ್ಲಿ ಜಾಗೃತಿ ಮೂಡಿಸಲು ಈ ಡಿವಿಸಿಯನ್ನು ಹಿಮಾಲಯ ಬೇಬಿಕೇರ್‌ ನ ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ ಗಳು, ರಿಟೇಲ್ ಮಳಿಗೆಗಳ ಪ್ರಚಾರ ಮತ್ತು ಉಡುಗೊರೆ ಕೇಂದ್ರಿತ ಸಂಯೋಜನೆಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗುವುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top