ಮತ್ತೊಂದು ಅಕ್ರಮ ಅಡಿಕೆ ಆಮದು: ಇಂತಹ ಪ್ರಕರಣಗಳಿಗೆ ಶಿಕ್ಷೆ ಏನು?

Upayuktha
0

NEET ಪರೀಕ್ಷೆ ಅಕ್ರಮಕ್ಕೆ ಅಕೌಂಟಬಿಲಿಟಿ (ಜವಾಬ್ದಾರಿ) ಪ್ರಶ್ನೆ ಕೇಳಲಾಯ್ತು. ವಿದೇಶಿ ಅಕ್ರಮ ಅಡಿಕೆ ಆಮದಿಗೆ ಅಕೌಂಟಬಿಲಿಟಿ ಯಾರು?


ಅಡಿಕೆ ಬೆಳೆಗಾರರೆ ಕಪ್ಪೆ ಜನತಾ ಪಕ್ಷ, ಏಡಿ ಜನತಾ ಪಕ್ಷ ಅಂತ ಸಂಘಟನೆ ಮಾಡಿಕೊಂಡು ಜಂತರ್ ಮಂತರ್‌ನಲ್ಲಿ ಧರಣಿ ಕೂರಬೇಕಾಂತ!!?



ಹಾಗೆ ಕೂರುವುದಾದರೆ ಮೂರು ಬೇಡಿಕೆಗಳು:


1) ಅಡಿಕೆ ಆಮದು ಸಂಬಂಧಿತ ಕೇಂದ್ರ ಮಂತ್ರಿ ರಾಜಿನಾಮೆ ಕೊಡಬೇಕು.


2) ಇನ್ನು ಮುಂದೆ ಅಕ್ರಮ ಅಡಿಕೆ ಆಮದು ಆಗದಂತೆ ಬಿಗಿ ಕಾನೂನು ಕ್ರಮ, ದಂಡ, ಶಿಕ್ಷೆಗಳಿರುವ ವಿದೇಶಿ ಅಕ್ರಮ ಆಮದು ತಡೆ ಕಾಯ್ದೆ, 2026 Prevention of Unfair Areca Import Act, 2026 ಜಾರಿಗೆ ತರಬೇಕು.


3) ಈಗಾಗಲೆ ಸರಾಸರಿ ದಿನಕ್ಕೊಂದು ವಿದೇಶಿ ಅಕ್ರಮ ಅಡಿಕೆ ಆಮದು ಪ್ರಕರಣ ನೆಡೆದು, ಅಡಿಕೆ ದಾರಣೆಯಲ್ಲಿ ತೀವ್ರ ಕುಸಿತ ಉಂಟಾಗಿರುವುದರಿಂದ, ದೇಶದ ಎಲ್ಲ ಅಡಿಕೆ ಬೆಳೆಗಾರರಿಗೆ ಗುಂಟೆಗೆ ₹.1,000 ದಂತೆ ಗರಿಷ್ಠ ಎರಡು ಹೆಕ್ಟೇರ್‌ ಮಿತಿಗೊಳಿಸಿ, ಸರಕಾರ ಪರಿಹಾರ ಕೊಡಬೇಕು.


ಹೇಗೆ ಧರಣಿ ಮಾಡೋಣ್ವಾ!!?


ಮೇಲ್ನೋಟಕ್ಕೆ ಇದು ತಮಾಷೆಯಾಗಿ ಕಾಣಬಹುದು. ಮಲೆನಾಡಿನ ರೈತರು ಧರಣಿಗೆ ಮುನ್ನುಗ್ಗದೇ ಇರಬಹುದು.  ಆದರೆ, ಇದೇ ರೀತಿ ವಿದೇಶಿ ಅಕ್ರಮ ಅಡಿಕೆ ಆಮದು ಮುಂದುವರಿದು, ಅಡಿಕೆ ಧಾರಣೆ ಪಾತಾಳಕ್ಕೆ ಕುಸಿದರೆ... ಬಯಲು ಸೀಮೆ ಅಡಿಕೆ ಬೆಳೆಗಾರರು ಖಂಡಿತವಾಗಿ ಹೊಸ ಸಂಘಟನೆಯೊಂದಿಗೆ ದೆಹಲಿಯ ಜಂತರ್ ಮಂತರ್ ಅಂಗಳಕ್ಕೆ ಹೋಗುವ ರೈಲು ಹತ್ತುತ್ತಾರೆ.


ನಿರಂತರ ವಿದೇಶಿ ಅಕ್ರಮ ಅಡಿಕೆ ಆಮದು ಆಗ್ತಾ ಇದ್ದರೂ ಯಾಕೆ ಅಡಿಕೆ ಬೆಳೆಯುವ ಪ್ರದೇಶದ ಸಂಸದರು, ಶಾಸಕರು, ಮಂತ್ರಿಗಳು ದೊಡ್ಡ ಧ್ವನಿ ಎತ್ತುತ್ತಿಲ್ಲ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.  


ವಿದೇಶಿ ಅಕ್ರಮ ಅಡಿಕೆ ಆಮದು ಕೇವಲ ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಪ್ರಕರಣಗಳಲ್ಲ, ದೇಶದ ಭದ್ರತೆಗೂ ಸಂಬಂಧಿಸಿದ ವಿಚಾರ ಅಲ್ವಾ?


ಅಕ್ರಮ ಅಡಿಕೆ ಆಮದನ್ನು ನಿಯಂತ್ರಿಸಲಾಗದಿದ್ದರೆ, ಅಕ್ರಮ ಅಡಿಕೆ ಬಂದ ದಾರಿಯಲ್ಲಿ ನಾಳೆ ಬೇರೆ ಏನಾದರು ಬರಬಹುದಲ್ವಾ?  


ದಯವಿಟ್ಟು ನಮ್ಮೆಲ್ಲ ಜನಪ್ರತಿನಿಧಿಗಳು, ಅಡಿಕೆ ಸಹಕಾರಿ ಸಂಸ್ಥೆಗಳು ವಿದೇಶಿ ಅಕ್ರಮ ಅಡಿಕೆ ಆಮದನ್ನು ಕಂಪ್ಲೀಟ್ ಬಂದ್ ಆಗುವಂತೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಿ.  


ಕೇಂದ್ರ ಕೃಷಿ ಮಂತ್ರಿಗೆ ಮನವಿ ಕೊಟ್ಟು, ಅದನ್ನು ಪ್ರೆಸ್ ಮೀಟ್ ಮಾಡಿ ಸುದ್ಧಿ ಮಾಡಿ, ವಿಮಾನ ಹತ್ತಿಕೊಂಡು ವಾಪಾಸ್ ಬಂದ್ರೆ ಸಾಕಾಗುವುದಿಲ್ಲ ಅನಿಸುತ್ತೆ!?


- ಅರವಿಂದ ಸಿಗದಾಳ್, ಮೇಲುಕೊಪ್ಪ

     9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top