ಹಬ್ಬದ ಸಮಯ ಅಗತ್ಯ ಮುಂಜಾಗ್ರತಾ ಕ್ರಮ: ಅಧಿಕಾರಿಗಳಿಗೆ ಶಾಸಕ ಕಾಮತ್ ಪತ್ರ

Upayuktha
0


ಮಂಗಳೂರು: ಮುಂಬರುವ ಕೆಲವೇ ದಿನಗಳಲ್ಲಿ ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ ಮೊದಲಾದ ಸಾಲು ಸಾಲು ಹಬ್ಬ ಹರಿದಿನಗಳು ಬರಲಿದ್ದು, ಆ ಪ್ರಯುಕ್ತ ಮಂಗಳೂರು ನಗರ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಆದ್ಯತೆ ಮೇರೆಗೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಶಾಸಕ ವೇದವ್ಯಾಸ ಕಾಮತ್ ರವರು ಜಿಲ್ಲಾಧಿಕಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದರು. 


ಪ್ರಯುಕ್ತ ಸಂಪರ್ಕ ರಸ್ತೆಗಳ ಕಾಮಗಾರಿ, ಎಲ್ಲಾ ರಸ್ತೆಗಳ ದುರಸ್ತಿ, ಶೋಭಾ ಯಾತ್ರೆ ಸಾಗುವ ರಸ್ತೆಯ ವಿಭಜಕ ಮತ್ತು ಪುಟ್ಪಾತ್ ಗಳಿಗೆ ಬಣ್ಣ, ದಾರಿ ದೀಪ ವ್ಯವಸ್ಥೆ, ವಿದ್ಯುತ್ ದೀಪ ಅಲಂಕಾರ, ರಸ್ತೆಯ ಬದಿಯ ಕಸ-ಮಣ್ಣು ತೆರೆವುಗೊಳಿಸುವುದು, ಶೋಭಾಯಾತ್ರೆ ಸಾಗುವ ರಸ್ತೆಯ ಮರದ ಗೆಲ್ಲುಗಳನ್ನು ಅರಣ್ಯ ಇಲಾಖೆ ನಿಯಮದಂತೆ ತೆರವುಗೊಳಿಸುವುದು, ಹಬ್ಬ ಮುಗಿದ ನಂತರ ಅಂಗಡಿ ಮಳಿಗೆಯವರು ಬಿಟ್ಟು ಹೋಗುವ ಅನಗತ್ಯ ಸಾಮಾಗ್ರಿಗಳನ್ನು ತೆರವುಗೊಳಿಸುವುದು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ವ ಕಾರ್ಯಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಕೋರಿದರು.


ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಉರ್ವ, ಲಾಲ್ ಭಾಗ್, ಕೆಎಸ್‌ಆರ್‌ಟಿಸಿ ಜಂಕ್ಷನ್, ಕುದ್ರೋಳಿ ದೇವಸ್ಥಾನ ಪರಿಸರ, ಸೂಟರ್ ಪೇಟೆ, ಅಶೋಕ ನಗರ, ಗೋವಿಂದ ಪೈ ವೃತ್ತ, ಕಾರ್ ಸ್ಟ್ರೀಟ್, ಡೊಂಗರಕೇರಿ, ಮಂಗಳಾದೇವಿ, ಎಮ್ಮೆಕೆರೆ ಕ್ರಾಸ್, ಬೋಳಾರ, ದೇವರಪದವು-ಅಂಬೇಡ್ಕರ್ ಕಾಲೋನಿ, ಸೇರಿದಂತೆ ನಗರದ ಎಲ್ಲಾ ಪ್ರಮುಖ ಭಾಗಗಳಲ್ಲಿ ಶೀಘ್ರವಾಗಿ ಅಗತ್ಯ ಕ್ರಮವಾಗಬೇಕಿದೆ ಎಂದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top