ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ 2026 ಇದು ದಿನಾಂಕ 16 ಆಗಸ್ಟ್ 2026, ಭಾನುವಾರ ಶ್ರೀ ಭಾರತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮುಡಿಪು, ಮಂಗಳೂರು ಇಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ನಡೆಯಲಿದೆ.
ಈ ವೇಳೆ 15 ಕೃತಿಗಳ ಲೋಕಾರ್ಪಣೆ, ರಾಜ್ಯ ಪ್ರಶಸ್ತಿಗಳಾದ ಶಿಕ್ಷಕರತ್ನ, ಸೌರಭ ರತ್ನ, ಕನ್ನಡ ಶ್ರೀ, 'ಚೈತನ್ಯ ಶ್ರೀ' ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿಗಳು ನಡೆಯಲಿದ್ದು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಡಾ. ಸುರೇಶ ನೆಗಳಗುಳಿ ಅವರಿಗೆ 'ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಿಂಗಾರ ಪತ್ರಿಕೆಯ ರೇಮಂಡ್ ಡಿ ಕುನ್ಹ ಇವರಿಗೆ ಮಾಧ್ಯಮ ಸೇವೆಗಾಗಿ ಸೌರಭ ರತ್ನ ಪ್ರಶಸ್ತಿ ನೀಡಲಾಗಿದೆ.
ಇದಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಜಿಲ್ಲೆ ಸಹಯೋಗದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಾಮಾಜಿಕ ಕಳಕಳಿಯ "ಹಳ್ಳಿ ಶಿಕ್ಷಕ" ನಾಟಕದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಈ ನಾಟಕವು ಎಂ.ಡಿ. ಗೋಗೆರಿ, ಹುಬ್ಬಳ್ಳಿ ಅವರ ನಿರ್ದೇಶನದಲ್ಲಿ ನಡೆಯಲಿದ್ದು "ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸಿ, ಸರಕಾರಿ ಶಾಲೆ ಉಳಿಸಿ, ಕನ್ನಡ ಕಲಿಸಿ ಸರಕಾರಿ ಶಾಲೆ ಬೆಳೆಸಿ"ಎಂಬ ಸಂದೇಶ ಸಾರುತ್ತದೆ.
ಡಾ. ಸುರೇಶ ನೆಗಳಗುಳಿ ಸೇರಿದಂತೆ ಅನಿತಾ ಶೆಣೈ ಅಕೃತಿ ಭಟ್, ವಿಶ್ವನಾಥ ಶೆಟ್ಟಿ, ಕಸ್ತೂರಿ, ರೇಖಾ ಸುದೇಶ್ ರಾವ್, ಸುಲೋಚನಾ ಅಜಿತ್ ರಾವ್ ಗಿರೀಶ್ ಪೆರಿಯಡ್ಕ ಮುಂತಾದವರು ಇದರ ಭೂಮಿಕೆಯಲ್ಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

