ಜಿರಳೆಗಳನ್ನು ರಕ್ಷಣೆ ಮಾಡುವ ಹೆಸರಿನಲ್ಲಿ ಪೇೂಲಿಸರ ನೈತಿಕತೆ ಕುಂದಿಸಬೇಡಿ

Upayuktha
0


ನೀಟ್ ಎಂಬ ಪರೀಕ್ಷೆಯ ನೆಪವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳ ಮುಖವಾಡ ಹಾಕಿಕೊಂಡು ಸಾವಿರಾರು ಮಂದಿ ರಾಷ್ಟ್ರ ವಿರೇೂಧಿ ಶಕ್ತಿಗಳು ಕೆಲವೊಂದು ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಜಂತರ್ ಮಂತರ್ ಸ್ಥಳವನ್ನು ರಾತ್ರಿ ಬೆಳಗಾಗುವುದರೊಳಗೆ ಆಕ್ರಮಿಸಿಕೊಂಡು ಸಂಸತ್ತು ಭವನಕ್ಕೆ  ನುಗ್ಗುವ ಪ್ರಯತ್ನ ಮಾಡಿದ್ದನ್ನು ನಾವು ನೇೂಡಿದ್ದೇವೆ. ಸಾವಿರಾರು ಮಂದಿ ಪುಂಡ ಪೋಕರಿಗಳು ದೆಹಲಿ ಮೆಟ್ರೋ ಸ್ಟೇಷನ್ ಮುರಿದು ಕೊಂಡು ನುಗ್ಗಿ ಬಂದಿದ್ದನ್ನು ನಾವು ಕಣ್ಣಾರೆ ನೇೂಡಿದ್ದೇವೆ.


ಇಂತಹ ಮನಸ್ಥಿತಿಯ ಯುವಕರನ್ನು ಯುವತಿಯರನ್ನು ಹಾಗೂ ವಯಸ್ಸು ಮೀರಿದ ಅನೇಕ ಜನರು ನುಗ್ಗಿ ಒಳಗೆ ಬರುವಾಗ ಪೇೂಲಿಸರಿಗೆ ಕಂಬಗಳಂತೆ ನಿಂತು ತಡೆಯುವುದು ಸುಲಭವಾಗಿರಲಿಲ್ಲ. ಸಾವ೯ಜನಿಕ ಆಸ್ತಿಗಳನ್ನು ಹಾಳು ಮಾಡಿ ರಕ್ಷಣೆಗಾಗಿ ನಿಂತ ಪೇೂಲಿಸರ ಮೇಲು ಹಲ್ಲೆ ಮಾಡಿ; ಮಾಧ್ಯಮದವರನ್ನು ತಳ್ಳಿಕೊಂಡು ತಡೆಗೋಡೆಯನ್ನು ಮುರಿದು ಹಾರಿಕೊಂಡು ಬರುವ ಪ್ರಕ್ಷುಬ್ಧ ಸಂದರ್ಭದಲ್ಲೂ ನಮ್ಮ ಪೇೂಲಿಸರು ಕೈಕಟ್ಟಿ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕಿತ್ತಾ? ದೀಪ ಹರಿವಾಣ ಹಿಡಿದು ಸ್ವಾಗತಿಸಬೇಕಿತ್ತಾ?


ಸಂಭಾವಿತರೆನ್ನಿಸಿಕೊಂಡ ಜಿರಳೆಗಳು ಜಂತರ್ ಮಂತರ್ ನೆಲದ ಮೇಲೆ ಕುಳಿತುಕೊಂಡು ನಿಂತುಕೊಂಡು ಪ್ರತಿಭಟನೆ ಮಾಡುತ್ತಿದ್ದರೆ ಪೇೂಲಿಸರು ಶಾಂತರೀತಿಯಲ್ಲಿ ಅವರನ್ನು ಸುತ್ತುವರಿದು ನಿಲ್ಲಬಹುದಿತ್ತು. ಪರಿಸ್ಥಿತಿ ಹಾಗಿರಲಿಲ್ಲ; ವಿದ್ಯಾರ್ಥಿಗಳ ಮುಖವಾಡ ಧರಿಸಿಕೊಂಡು ಭಯೇೂತ್ಪಾದಕರ ರೀತಿಯಲ್ಲಿ ವತಿ೯ಸುವ ಸಂದರ್ಭದಲ್ಲಿ ನಮ್ಮ ಪೇೂಲಿಸರು ಲಾಠಿ ಬೀಸಿದ್ದು ತಪ್ಪಾ? ಈ ಪರಿಸ್ಥಿತಿಯ ಸಂದರ್ಭದಲ್ಲಿ ನಾವೇ ನಿಂತಿದ್ದರೆ ನಾವೇನು ಮಾಡುತ್ತಿದ್ದೇವೆ ಅನ್ನುವುದು ಪ್ರತಿಯೊಬ್ಬರು ಸ್ವಲ್ಪ ವಾಸ್ತವಿಕತೆಯ ದೃಷ್ಟಿಯಿಂದ ಆತ್ಮವಿಮಶೆ೯ ಮಾಡಿಕೊಳ್ಳಬೇಕು. ಇದೇ ವಿಕ್ಷಿಪ್ತ ಶಕ್ತಿ ಸುಪ್ರೀಂ  ಪೀಠದತ್ತ ನುಗ್ಗಿ ಬಂದಿದ್ದರೆ ಅನ್ನುವುದನ್ನು ಸುಪ್ರೀಂ ಪೀಠದಲ್ಲಿ ಕುಳಿತ ನ್ಯಾಯಾಧೀಶರು ಸ್ವಲ್ಪ ಪರಿಸ್ಥಿತಿಯ ಕಡೆಗೆ ಪರಾಂಬರಿಸಿ ನೇೂಡಲಿ ಅನ್ನುವುದು ನಮ್ಮ ನಿವೇದನೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳೆಂಬ ನೆಲೆಯಲ್ಲಿ ಸಹಾನುಭೂತಿ ತೇೂರಿಸುವವರು ನಡೆದ ಪರಿಸ್ಥಿತಿಯ ಕುರಿತಾಗಿ ಗಂಭೀರವಾಗಿ ಚಿಂತನೆ ಮಾಡಬೇಕು.


ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ದೆಹಲಿ ಪೇೂಲಿಸ್ ಇಲಾಖೆ ನಡೆದುಕೊಂಡ ರೀತಿಯನ್ನು ದೇಶದ ಭದ್ರತಾ ದೃಷ್ಟಿಯಿಂದ  ಪ್ರಜಾ ದೇಗುಲ ಸಂಸತ್ತಿನ ಗೌರವದ ಸಂರಕ್ಷಣಾ ದೃಷ್ಟಿಯಿಂದ ಪ್ರತಿಯೊಬ್ಬರು ನಮ್ಮ ಪೇೂಲಿಸರ ಕರ್ತವ್ಯವನ್ನು ಶ್ಲಾಘಿಸಲೇ ಬೇಕು. ದೇಶದ ಮಯಾ೯ದೆಯನ್ನು ಕಾಪಾಡುವಲ್ಲಿ ಪಕ್ಷದ ಹಿತಾಸಕ್ತಿಯನ್ನು ಮೀರಿ ನಿಲ್ಲಬೇಕಾದದ್ದು ನಮ್ಮೆಲ್ಲರ ಸಂವಿಧಾನ ಬದ್ದ ಕತ೯ವ್ಯ ಅನ್ನುವುದನ್ನು ಮರೆಯುವಂತಿಲ್ಲ.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top