ವರ್ಲ್ಡ್ ಪ್ಯಾಡೆಲ್ ಲೀಗ್; ಮೊದಲ ದಿನವೇ ಗೆಲುವಿನ ನಗೆ ಬೀರಿದ ವೇದಾಂತ ಲಿಯೋಪರ್ಡ್ಸ್ ಮತ್ತು ಪ್ಯಾಂಥರ್ಸ್!

Upayuktha
0

 


ಸ್ಪೈಸ್ ಜೆಟ್ ಪ್ರಾಯೋಜಕತ್ವದಲ್ಲಿ ಆರಂಭವಾಗಿರುವ ಅಕ್ಸೆಲ್ ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ರ ಮೊದಲ ದಿನವೇ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತು. ಕಳೆದ ಬಾರಿಯ ರನ್ನರ್-ಅಪ್ ವೇದಾಂತ ಲಿಯೋಪರ್ಡ್ಸ್ ತಂಡವು ಆಸಿ ಮೇವರಿಕ್ಸ್ ಜಾಗುವಾರ್ಸ್ ವಿರುದ್ಧ 18-16 ಅಂತರದಿಂದ ರೋಚಕ ಜಯ ಸಾಧಿಸಿತು.


ಪಂದ್ಯ 1: ಆಸಿ ಮೇವರಿಕ್ಸ್ ಜಾಗುವಾರ್ಸ್ ವಿರುದ್ಧ ವೇದಾಂತ ಲಿಯೋಪರ್ಡ್ಸ್

ದಿನದ ಮೊದಲ ಪಂದ್ಯದಲ್ಲಿ ಜಾಗುವಾರ್ಸ್‌ನ ಅಲೆಜಾಂಡ್ರಾ ಅಲೋನ್ಸೊ ಮತ್ತು ಕ್ಲೌಡಿಯಾ ಜೆನ್ಸೆನ್ ಜೋಡಿಯು, ಲಿಯೋಪರ್ಡ್ಸ್‌ನ ಮಾರ್ತಾ ಒರ್ಟೆಗಾ ಮತ್ತು ವೆರೋನಿಕಾ ವಿರ್ಸೆಡಾ ಅವರನ್ನು ಎದುರಿಸಿತು. ತೀವ್ರ ಪೈಪೋಟಿಯಿಂದ ಕೂಡಿದ ಮಹಿಳಾ ಡಬಲ್ಸ್‌ನಲ್ಲಿ ಜಾಗುವಾರ್ಸ್ 7-5 ಅಂತರದಿಂದ ಮೊದಲ ಸೆಟ್ ಗೆದ್ದುಕೊಂಡಿತು.


ಎರಡನೇ ಸೆಟ್‌ನಲ್ಲಿ ಪ್ರಸಕ್ತ ಸೀಸನ್‌ನ ಮೊದಲ ಟೈ-ಬ್ರೇಕ್ ರೋಚಕತೆ ಕಂಡುಬಂತು. ಈ ಹಂತದಲ್ಲಿ ಇಗ್ನಾಸಿಯೋ ಪಿಯೊಟ್ಟೊ ಮತ್ತು ಎಂಜೊ ಜೆನ್ಸೆನ್ ಜೋಡಿಯು ಡಿಯಸ್ ಸಹೋದರರಾದ ಮಿಗುಯೆಲ್ ಹಾಗೂ ನುನೊ ಅವರನ್ನು ಎದುರಿಸಿತು. ಅತ್ಯಂತ ಎಚ್ಚರಿಕೆಯ ಆಟಪ್ರದರ್ಶಿಸಿದ ಲಿಯೋಪರ್ಡ್ಸ್ ಆಟಗಾರರು 7-6 ಅಂತರದಿಂದ ಈ ಸೆಟ್ ಅನ್ನು ವಶಪಡಿಸಿಕೊಂಡರು.


ಅಂತಿಮ ಹಾಗೂ ನಿರ್ಣಾಯಕ ಪುರುಷರ ಡಬಲ್ಸ್‌ನಲ್ಲಿ ಜಾಗುವಾರ್ಸ್‌ನ ಪಾಲ್ ಹೆರ್ನಾಂಡೆಜ್ ಮತ್ತು ಗುಿಲ್ಲೆ ಕೊಲ್ಲಾಡೊ ಜೋಡಿಯು, ಲಿಯೋಪರ್ಡ್ಸ್‌ನ ಫ್ರಾನ್ ಗೆರೆರೊ ಹಾಗೂ ಜಾವಿ ರೂಯಿಜ್ ಅವರ ವಿರುದ್ಧ ಸೆಣಸಾಡಿತು. ಈ ನಿರ್ಣಾಯಕ ಸೆಟ್‌ನಲ್ಲಿ 6-3 ಅಂತರದಿಂದ ಭರ್ಜರಿ ಜಯ ಸಾಧಿಸಿದ ಲಿಯೋಪರ್ಡ್ಸ್, ಒಟ್ಟಾರೆ 18-16 ಅಂತರದೊಂದಿಗೆ ಅದ್ಭುತ ಪುನರಾಗಮನದ ಜಯವನ್ನು ತನ್ನದಾಗಿಸಿಕೊಂಡಿತು.


ಪಂದ್ಯ 2: ವಿಬಿ ರಿಯಾಲ್ಟಿ ಚೀತರ್ಸ್ ವಿರುದ್ಧ ಹಬ್‌ಟೌನ್ ಪನೋರಮಾ ಪಂಥರ್ಸ್

ವಿಬಿ ರಿಯಾಲ್ಟಿ ಚೀತರ್ಸ್ ವಿರುದ್ಧ ಹಬ್‌ಟೌನ್ ಪನೋರಮಾ ಪ್ಯಾಂಥರ್ಸ್ ತಂಡವು ಸಂಪೂರ್ಣ ಆಧಿಪತ್ಯ ಮೆರೆದು 16-9 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯದ ಆರಂಭದಲ್ಲಿ ಮೊದಲ ಸೆಟ್ ಅನ್ನು 4-6 ಅಂತರದಿಂದ ಕಳೆದುಕೊಂಡರೂ, ಬಳಿಕ ಅದ್ಭುತವಾಗಿ ಚೇತರಿಸಿಕೊಂಡ ಪ್ಯಾಂಥರ್ಸ್ ತಂಡವು ಮುಂದಿನ ಎರಡು ಸೆಟ್‌ಗಳಲ್ಲಿ 6-1 ಮತ್ತು 6-2 ಅಂತರದ ಭರ್ಜರಿ ಜಯದೊಂದಿಗೆ ಪಂದ್ಯವನ್ನು ತನ್ನದಾಗಿಸಿಕೊಂಡಿತು.


ಪಂದ್ಯದ ಆರಂಭಿಕ ಸೆಟ್‌ನಲ್ಲಿ ಪಂಥರ್ಸ್‌ನ ಜುವಾನ್ ಟೆಲ್ಲೋ ಮತ್ತು ಎಡ್ವರ್ಡೊ ಅಲೋನ್ಸೊ ಜೋಡಿಯು, ಚೀತರ್ಸ್‌ನ ಲೂಚೊ ಕಪ್ರಾ ಹಾಗೂ ಜೀಸಸ್ ಮೋಯಾ ಅವರನ್ನು ಎದುರಿಸಿತು. ತೀವ್ರ ಹೋರಾಟದ ಬಳಿಕ ಚೀತರ್ಸ್ 6-4 ಅಂತರದಿಂದ ಈ ಸೆಟ್ ಗೆದ್ದುಕೊಂಡಿತು. ನಂತರ ಮಹಿಳಾ ಡಬಲ್ಸ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಪಂಥರ್ಸ್‌ನ ಮಾರ್ತಾ ಕಪಾರೋಸ್ ಮತ್ತು ಮಾರ್ತಾ ಬರೆರಾ ಜೋಡಿಯು, ಅರಾನ್ಜಾಜು ಒಸೊರೊ ಹಾಗೂ ಜುಲಿಯೆಟಾ ಬಿಡಹೊರಿಯಾ ವಿರುದ್ಧ 6-1 ಅಂತರದ ಭರ್ಜರಿ ಜಯ ಸಾಧಿಸಿ ತಂಡಕ್ಕೆ ನಿರ್ಣಾಯಕ ಮುನ್ನಡೆ ತಂದುಕೊಟ್ಟಿತು.


ಪಂದ್ಯದ ಅಂತಿಮ ಹಂತದಲ್ಲಿ ಎನ್‌್ರಿಕ್ ಗೊಯೆಗಾ ಮತ್ತು ರಾಮಾ ವೆಂಕೆಲುಜಾ ಜೋಡಿಯು ಕೋಕಿ ನಿಎಟೊ ಹಾಗೂ ಜಾನ್ ಸಂಜ್ ವಿರುದ್ಧ 6-2 ಅಂತರದ ಅಮೋಘ ಜಯ ಸಾಧಿಸಿ, ಪಂಥರ್ಸ್ ತಂಡಕ್ಕೆ ಒಟ್ಟಾರೆ 16-9 ಅಂತರದ ಸ್ಪಷ್ಟ ಜಯ ತಂದುಕೊಟ್ಟಿತು.


ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ರ ಎರಡನೇ ದಿನವಾದ ಇಂದು ರೋಚಕ ಪಂದ್ಯಗಳು ಮುಂದುವರಿಯಲಿವೆ. ಸಂಜೆ 4:00 ಗಂಟೆಗೆ ಗೇಮ್ ಚೇಂಜರ್ಸ್ ಲಯನ್ಸ್ ಮತ್ತು ಹಬ್‌ಟೌನ್ ಪನೋರಮಾ ಪಂಥರ್ಸ್ ಮುಖಾಮುಖಿಯಾಗಲಿದ್ದು, ಸಂಜೆ 6:30 ಗಂಟೆಗೆ ಖಾನ್ ಟೈಗರ್ಸ್ ಮತ್ತು ವೇದಾಂತ ಲಿಯೋಪರ್ಡ್ಸ್ ಸೆಣಸಾಡಲಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top