ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರ ಪುನಶ್ಚೇತನಾ ಕಾರ್ಯಾಗಾರ

Upayuktha
0


ಪುತ್ತೂರು: ತಂತ್ರಜ್ಞಾನವು ಅಪರಿಮಿತ ವೇಗದಲ್ಲಿ ಬದಲಾವಣೆಯಾಗುತ್ತಿದೆ. ಪ್ರತಿ ಕ್ಷೇತ್ರದಲ್ಲಿಯೂ ಅಗಾಧವಾದ ಬದಲಾವಣೆಗಳಾಗುತ್ತಿದೆ. ಇದರಿಂದಾಗಿ ಬೊಧಕರು ತಾವೂ ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದು ಅಮೆರಿಕಾದ ವ್ರೈಟ್ ಸ್ಟೇಟ್ ಯುನಿವರ್ಸಿಟಿ, ಡೇಟನ್ ಒಹಿಯೋ ಇಲ್ಲಿನ ಬಯಾಲಾಜಿಕಲ್ ಸೈನ್ಸ್ನ ಪ್ರೊಫೆಸರ್ ಡಾ.ವಿಲಿಯಂ  ರೊಮೈನ್ ಹೇಳಿದರು. 


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗಗಳ ಆಶ್ರಯದಲ್ಲಿ ನಡೆದ ಸಮಕಾಲೀನ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ ಸಬಲೀಕರಣ ಎನ್ನುವ ವಿಷಯದ ಬಗ್ಗೆ ಏರ್ಪಡಿಸಲಾದ 5 ದಿನಗಳ ಉಪನ್ಯಾಸಕರ ಪುನಶ್ಚೇತನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತಾಡಿದರು. 


ತಾಂತ್ರಿಕತೆಯ ಬೆಳವಣಿಗೆಯಿಂದ ಜಗತ್ತಿನಲ್ಲಿ ಸವಾಲುಗಳು ಅಧಿಕವಾಗುತ್ತಿವೆ. ಇದನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ಪುನಶ್ಚೇತನಾ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ ಎಂದರು. ಕೃತಕ ಬುದ್ದಿಮತ್ತೆಯಿಂದ ಜಗತ್ತಿನಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದ್ದು, ಇದರ ಒಳಿತು ಕೆಡುಕುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಶಿಕ್ಷಕರು ಎಲ್ಲವನ್ನೂ ತಿಳಿದುಕೊಂಡವರು ಎಂದು ವಿದ್ಯಾರ್ಥಿಗಳು ಭಾವಿಸಿರುತ್ತಾರೆ. ಇದರಿಂದ ತಮ್ಮ ಸಂದೇಹಕ್ಕೆ ಸೂಕ್ತ ಪರಿಹಾರವನ್ನು ನಿರೀಕ್ಷಿಸುತ್ತಾರೆ. ಅವರ ಆಶಯವನ್ನು ಪೂರೈಸುವುದಕ್ಕಾಗಿ ಶಿಕ್ಷಕರು ತಿಳುವಳಿಕೆ ಹೊಂದುವುದು ಆವಶ್ಯಕ ಎಂದರು. ಐದು ದಿನಗಳ ಅವಧಿಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳೊಂದಿಗಿನ ಸಂವಾದ ನಿಮಗೆ ಹೆಚ್ಚಿನ ಜ್ಞಾನವನ್ನು ಒದಗಿಸಬಲ್ಲದು ಎಂದರು.


ಗೌರವ ಅತಿಥಿಗಳಾಗಿದ್ದ ಅಮೆರಿಕಾದ ವ್ರೈಟ್ ಸ್ಟೇಟ್ ಯುನಿವರ್ಸಿಟಿ, ಡೇಟನ್ ಒಹಿಯೋ ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ತನ್ವಿ ಬ್ಯಾನರ್ಜಿ, ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಶ್ರೀಕಾಂತ್ ರಾವ್, ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ, ಕಾರ್ಯಕ್ರಮ ಸಂಯೋಜಕಾರಾದ ಡಾ.ಅಜಿತ್ ಹೆಬ್ಬಾರ್ ಹಾಗೂ ಪ್ರೊ.ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ.ಅಜಿತ್ ಹೆಬ್ಬಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರೊ.ಪ್ರಭಾ.ಜಿ.ಎಸ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಶಿವಪ್ರಸಾದ್ ವಂದಿಸಿದರು. ಪ್ರೊ.ನಿಶಾ.ಜಿ.ಆರ್ ಕಾರ್ಯಕ್ರಮ ನಿರ್ವಹಿಸಿದರು.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top