ಕಷ್ಟಪಟ್ಟು ಮಾಡುವ ಕರ್ಮಕ್ಕೆ ಬೆಲೆಯುಂಟು..

Upayuktha
0

 



ರೈತನು ಫಲವತ್ತಾದ ಭೂಮಿಯಲ್ಲಿ ಉತ್ತಮ ಬೀಜ ಬಿತ್ತಿದರೆ ಉತ್ತಮ ಬೆಳೆ ಪಡೆಯುವಂತೆ, ಮನುಷ್ಯನು ಧರ್ಮದ ಮಾರ್ಗದಲ್ಲಿ ನಡೆದು ಸತ್ಕರ್ಮಗಳನ್ನು ಮಾಡಿದರೆ ಜೀವನದಲ್ಲಿ ಯಶಸ್ಸು, ಗೌರವ ಮತ್ತು ನೆಮ್ಮದಿಯನ್ನು ಪಡೆಯಬಹುದು. ಧರ್ಮ ಮತ್ತು ಕರ್ಮ ಒಂದಕ್ಕೊಂದು ಪೂರಕವಾಗಿದ್ದು, ಧರ್ಮವಿಲ್ಲದ ಕರ್ಮಕ್ಕೆ ಮೌಲ್ಯವಿಲ್ಲ. ಆಧುನಿಕ ಯುಗದಲ್ಲಿಂದು  ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಮಾನವೀಯ ಮೌಲ್ಯಗಳು ಕುಸಿಯುತ್ತಲೆ ಇವೇ.ಈ ಸಂದರ್ಭದಲ್ಲಿ ಧರ್ಮದ ಮಾರ್ಗವನ್ನು ಅನುಸರಿಸುವುದು  ಯುವ ಪೀಳಿಗೆಗೆ,  ಹಿರಿಯ ಕಿರಿಯರಿಗೂ ಅತ್ಯಂತ ಅಗತ್ಯ. 


ಪೂರ್ಣಚಂದ್ರ ತೇಜಸ್ವಿಯವರು ಹೆಳಿದಂತೆ ನಾವು ಪರಿಸರದ ಒಂದು ಭಾಗ. ಇಂದು ಅದರ ಸಂರಕ್ಷಣೆಯೂ ಧರ್ಮದ ಒಂದು ಭಾಗವೂ ಹೌದು. ಸಸಿಗಳನ್ನ  ನೆಡುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕ್ರಮೇಣ ಕಡಿಮೆಗೊಳಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡುತ್ತಾ ಅದನ್ನಾ ಮುಂದಿನ ಪೀಳಿಗೆಗೆ ನಾವು ಸುರಕ್ಷಿತವಾಗಿ  ನೀಡುವುದು ಅಮೂಲ್ಯ. ಇಂತಹ ಸತ್ಕರ್ಮಗಳೇ ಭವಿಷ್ಯವನ್ನು ಸುಂದರಗೊಳಿಸುತ್ತವೆ.


ನಮ್ಮ ಜೀವನದಲ್ಲಿ ಮಾಡಿದ ಪ್ರತಿಯೊಂದು ಕರ್ಮಕ್ಕೂ ಫಲವಿರುತ್ತದೆ. ನಾವು ಮಾಡುವ ಕೆಲಸಕ್ಕೆ  ಒಳ್ಳೆಯ ಫಲವನ್ನು ಸಿಕ್ಕರೆ, ಕೆಟ್ಟ ಕರ್ಮ ದುಃಖಕ್ಕೆ ಮೂಲವಾಗುತ್ತದೆ. ಮನುಷ್ಯರಾದ ನಾವುಗಳು‌ ಇದನ್ನಾ ಅರ್ಥ ಮಾಡಿಕೊಳ್ಳದೆ ಸ್ವಾರ್ಥದ ಬದಕಿನತ್ತ ಹೆಜ್ಜೆ ಹಾಕುತ್ತಿದ್ದೇವೆ. ಆರೋಗ್ಯಕರ ಚಿಂತನೆ, ಮಾತು ಮತ್ತು ಕಾರ್ಯಗಳಲ್ಲಿ ಧರ್ಮವನ್ನು ಅಳವಡಿಸಿಕೊಂಡು ಬದುಕಬೇಕು. ನಿಷ್ಠುರತೆ ಇಂದ ನಡೆಯುವನು  ಮಾರ್ಗದಲ್ಲಿ ಎಡವಿ ಬಿದ್ದರೂ, ತಾತ್ಕಾಲಿಕವಾಗಿ ಕಷ್ಟಗಳು ಎದುರಾದರೂ ಅಂತಿಮವಾಗಿ ವಿಜಯ ಮತ್ತು ಗೌರವ ಸಿಗುತ್ತದೆ. ಬದುಕಿನಲ್ಲಿ ಧರ್ಮವನ್ನು ಮಳೆಯಾಗಿ ಸುರಿಸಿ, ಸತ್ಕರ್ಮಗಳನ್ನು ಬೆಳೆಯಾಗಿ ಬೆಳೆಸಿದಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ.

- ಮಂಜುಳಾ ಹಳ್ಳೂರ

ಬಸವೇಶ್ವರ ಕಲಾ ಮಹಾವಿದ್ಯಾಲಯ 

ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ,ಬಾಗಲಕೋಟ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top