ಜಗಳವಿದ್ದರೂ ಕಡಿಮೆಯಾಗದ ಅತ್ತಿಗೆ–ನಾದಿನಿಯರ ಪ್ರೀತಿ

Upayuktha
0


 ಅತ್ತಿಗೆ–ನಾದಿನಿ ಸಂಬಂಧವೆಂದರೆ ಅದೊಂದು ವಿಶೇಷವಾದ, ಬಿಡಿಸಲಾಗದ ಬಂಧ. ಅತ್ತಿಗೆ ಎಂದರೆ ಕೇವಲ ಅತ್ತಿಗೆ ಅಲ್ಲ; ಕೆಲವೊಮ್ಮೆ ಅವಳು ತಾಯಿಯಂತೆ ಪ್ರೀತಿಸುತ್ತಾಳೆ, ಅಕ್ಕನಂತೆ ಕಾಳಜಿ ವಹಿಸುತ್ತಾಳೆ ಹಾಗೂ ಸ್ನೇಹಿತೆಯಂತೆ ನಮ್ಮೊಂದಿಗೆ ಬೆರೆಯುತ್ತಾಳೆ.


ಅತ್ತಿಗೆ ಯಾವಾಗಲೂ ನಾದಿನಿಯ ಕಾಳಜಿಯ ಬಗ್ಗೆ ಯೋಚಿಸುತ್ತಾಳೆ. ನಾದಿನಿಗೆ ಯಾವುದೇ ತೊಂದರೆ ಬಂದರೂ ಅವಳ ಜೊತೆಯಲ್ಲಿ ನಿಂತು ಧೈರ್ಯ ತುಂಬುತ್ತಾಳೆ. ನನಗೆ ನನ್ನ ಅತ್ತಿಗೆ ಅಕ್ಕನಂತೆಯೇ. ಅವಳು ನನ್ನೊಂದಿಗೆ ಯಾವಾಗಲೂ ಸಣ್ಣಪುಟ್ಟ ಜಗಳ ಮಾಡುತ್ತಾಳೆ, ಆದರೆ ಆ ಜಗಳದ ಹಿಂದೆಯೂ ಅಪಾರವಾದ ಪ್ರೀತಿ ಮತ್ತು ಕಾಳಜಿ ಇರುತ್ತದೆ.


ಇಂತಹ ಬಾಂಧವ್ಯವನ್ನು ಕಾಣುವ ಅಥವಾ ಅನುಭವಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಾನು ಅದೃಷ್ಟವಂತೆ; ಏಕೆಂದರೆ ಅಂತಹ ಪ್ರೀತಿಯ ಅತ್ತಿಗೆ ನನಗೆ ಸಿಕ್ಕಿದ್ದಾಳೆ. ಅವಳು ಯಾವಾಗಲೂ ನನ್ನ ಬಗ್ಗೆ, ವಿಶೇಷವಾಗಿ ನನ್ನ ಓದಿನ ಬಗ್ಗೆ ಕಾಳಜಿ ವಹಿಸುತ್ತಾಳೆ. ನಾನು ರಾತ್ರಿ ಎದ್ದು ಓದಬೇಕು ಎಂದುಕೊಂಡಾಗ, ನನ್ನನ್ನು ಒಬ್ಬಳನ್ನಾಗಿ ಬಿಡದೆ ಕೆಲವೊಮ್ಮೆ ತಾನೂ ಎದ್ದು ನನ್ನ ಜೊತೆಯಲ್ಲಿ ಕುಳಿತುಕೊಳ್ಳುತ್ತಾಳೆ.


ನನಗೆ ಹುಷಾರಿಲ್ಲದಿದ್ದಾಗ ನನ್ನ ಪಾದಗಳಿಗೆ ಎಣ್ಣೆ ಹಚ್ಚುತ್ತಾಳೆ. ತಲೆನೋವಿನಿಂದ ಒದ್ದಾಡುತ್ತಿದ್ದರೆ ನನ್ನ ತಲೆಯನ್ನು ಒತ್ತಿ, ತಾಯಿಯಷ್ಟೇ ಅಕ್ಕರೆಯಿಂದ ನೋಡಿಕೊಳ್ಳುತ್ತಾಳೆ. ಅವಳ ಈ ಕಾಳಜಿ ನನಗೆ ಯಾವಾಗಲೂ ತಾಯಿಯ ಪ್ರೀತಿಯನ್ನು ನೆನಪಿಸುತ್ತದೆ.


ಇಷ್ಟೆಲ್ಲಾ ಕಾಳಜಿ ಮಾಡುವ ಅತ್ತಿಗೆಯೊಂದಿಗೆ ಕೆಲವೊಮ್ಮೆ ಸಣ್ಣಪುಟ್ಟ ಕಾರಣಗಳಿಗೆ ಜಗಳವಾಗುವುದು ಸಹಜ. ಒಂದು ದಿನ ನಮ್ಮಿಬ್ಬರ ನಡುವೆ ಸಣ್ಣ ಕಾರಣಕ್ಕೆ ಜಗಳವಾಯಿತು. ಮಾತು ಬಿಡುವಷ್ಟು ಜಗಳವಾದರೂ, ಹೆಚ್ಚು ಸಮಯ ಕೋಪದಿಂದ ಇರಲು ಅವಳಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಅವಳೇ ಬಂದು ನನ್ನೊಂದಿಗೆ ಮಾತನಾಡಿದಳು. ಇದೇ ನಮ್ಮ ಸಂಬಂಧದ ವಿಶೇಷತೆ.


ಅತ್ತಿಗೆಗೆ ನಾದಿನಿ ಎಂದರೆ ಒಂದು ಪುಟ್ಟ ಮಗುವಿನಂತೆ. ನಾದಿನಿಗೂ ಅತ್ತಿಗೆ ಎಂದರೆ ಅಕ್ಕನಂತೆ. ಇಬ್ಬರೂ ಅಕ್ಕ–ತಂಗಿಯರಂತೆ ಮನೆಯಲ್ಲಿ ಸಣ್ಣಪುಟ್ಟ ಜಗಳಗಳನ್ನು ಮಾಡುತ್ತಾ, ಮತ್ತೆ ಒಂದಾಗಿ ನಗುತ್ತಾ ಸಂತೋಷದಿಂದ ಇರುತ್ತಾರೆ.


ಜೀವನದಲ್ಲಿ ಇಂತಹ ಪ್ರೀತಿಯ ಸಂಬಂಧಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರಿಗೆ ಅದು ನಿಜಕ್ಕೂ ಪುಣ್ಯ. ಆದರೆ ಸಿಕ್ಕಿರುವ ಸಂಬಂಧಗಳ ಮೌಲ್ಯವನ್ನು ಅರ್ಥಮಾಡಿಕೊಂಡು, ಅವುಗಳನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯ.


ನನ್ನ ಪಾಲಿಗೆ ಅತ್ತಿಗೆ–ನಾದಿನಿ ಸಂಬಂಧವೆಂದರೆ ಕೇವಲ ಒಂದು ಸಂಬಂಧವಲ್ಲ; ಅದು ಪ್ರೀತಿ, ಕಾಳಜಿ, ಜಗಳ, ನಗು, ಆತ್ಮೀಯತೆ ಮತ್ತು ಭಾವನೆಗಳಿಂದ ಕೂಡಿದ ಒಂದು ಸುಂದರ ಬಂಧ.



- ನೀಲಮ್ಮ ಪುಂಡಪ್ಪ ಬನಕಾರ,

ಪತ್ರಿಕೋದ್ಯಮ ವಿಭಾಗ, ಬಸವೇಶ್ವರ ಕಲಾ ಮಹಾವಿದ್ಯಾಲಯ 

ಬಾಗಲಕೋಟೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top