ಹಲಗಲಿ ಬೇಡರು ಹೊತ್ತಿಸಿದ ಸ್ವಾತಂತ್ರ್ಯದ ಕಿಡಿ

Upayuktha
0

 



ಕೋಟೆನಾಡು ಎಂದೀಗ ಹೆಸರಾದ ಬಾಗಲಕೋಟ ಸ್ವಾತಂತ್ರ್ಯ ಸಂಗ್ರಾಮದದಲ್ಲಿ ಹೋರಾಟಗಳಿಗೆ ಧುಮುಕಿತ್ತು, ಹಲವು ದೇಶಭಕ್ತಿಯ ವೀರರನ್ನು ಹೋರಾಟಕ್ಕೆ ನುಗ್ಗುವಂತೆ ಮಾಡಿತ್ತು. ಅಲ್ಲದೆ ಇಂದು ಕೋಟೆನಗರಿ ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ, ಧಾರ್ಮಿಕವಾಗಿ ತನ್ನದೆಯಾದ ಪರಂಪರೆಯನ್ನು ಹೊಂದಿದೆ. ಅದರಲ್ಲೂ ಸ್ವಾತಂತ್ರ್ಯದ ಸಮಯದಲ್ಲಿ ಹಲಗಲಿ ಬೇಡರು ಹಚ್ಚಿದ ಕಿಚ್ಚು‌ ಇಂದಿಗೂ ಇತಿಹಾಸದಲ್ಲಿ ಅಜರಾಮರವಾಗಿ‌ ಭಾರತದ ಚರಿತ್ರೆಯಲ್ಲಿ ಅಚ್ಚಳಿಯದ ಗುರುತಾಗಿ‌ ದಾಖಲಾಗಿದೆ.


ಬಾಗಲಕೋಟೆಯ ಜನರು ತಮ್ಮ ತ್ಯಾಗ, ಧೈರ್ಯ ಮತ್ತು ದೇಶಪ್ರೇಮದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಹಲಗಲಿ ಬೇಡರ ದಂಗೆ ಕರ್ನಾಟಕದಷ್ಟೇ ಅಲ್ಲ, ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿಯೂ ಒಂದು ಮಹತ್ವದ ಅಧ್ಯಾಯವಾಗಿದೆ.

  

ವಿಶೇಷವಾಗಿ 1857ರ ಹಲಗಲಿ ಬೇಡರ ದಂಗೆ ಈ ಭಾಗದ ಐತಿಹಾಸಿಕ ಹೋರಾಟಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈ ದಂಗೆ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಧ್ಯಾಯಗಳಲ್ಲಿ ಒಂದು. ಬ್ರಿಟಿಷರು ಜಾರಿಗೆ ತಂದ ಭಾರತೀಯರು ಯಾವುದೇ ಆಯುಧವನ್ನು ಹೊಂದಿರಬಾರದು ಎನ್ನುವ ಕಾಯ್ದೆಯನ್ನು ವಿರೋಧಿಸದ ಇಗೀನ ಮುಧೋಳ‌ ತಾಲೂಕಿನ ಹಲಗಲಿ ಗ್ರಾಮದ ಬೇಡರ ಸಮುದಾಯದ ವೀರರು ಶಸ್ತ್ರ ಹಿಡಿದು  ಬ್ರಿಟಿಷರ ಬಲಿಷ್ಠ ಸೈನ್ಯದ ಎದುರು ಶೌರ್ಯದಿಂದ ಹೋರಾಡಿದರು. ಈ ಹೋರಾಟದಲ್ಲಿ ಅನೇಕ ವೀರರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿ, ಬಾಗಲಕೋಟೆ ಜಿಲ್ಲೆಗೆ ರಾಷ್ಟ್ರದ ಸ್ವಾತಂತ್ರ್ಯದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಅದರಲ್ಲೂ ಬಾಬಾಜಿ ನಿಂಬಾಳ್ಕರ್, ಜಡಿಯಪ್ಪ, ಬಾಲಪ್ಪ ಬ್ರಿಟಿಷರಿಗೆ ಜಗ್ಗದೆ ಹೋರಾಡಿದ ಹಲಗಲಿ ಬೇಡರಲ್ಲಿ ಪ್ರಮುಖರು.


ಇದರ ಜೊತೆಗೆ ಈ‌ ನಾಡಿನ ಜನ 1920ರ ಅಸಹಕಾರ ಚಳವಳಿ, 1930ರ ಉಪ್ಪಿನ ಸತ್ಯಾಗ್ರಹ, 1932ರ ನಾಗರಿಕ ಅಸಹಕಾರ ಚಳವಳಿ ಹಾಗೂ 1942ರ ಭಾರತ ಬಿಡಿ ಚಳವಳಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿ‌  ಸ್ವದೇಶಿ ವಸ್ತುಗಳ ಬಳಕೆ, ಖಾದಿ ಪ್ರಚಾರ, ವಿದೇಶಿ ಬಟ್ಟೆಗಳ ದಹನ, ಬ್ರಿಟಿಷರ ಕಚೇರಿಗಳ ವಿರುದ್ಧ ಪ್ರತಿಭಟನೆ, ಸಾರ್ವಜನಿಕ ಸಭೆಗಳು ಹಾಗೂ ಮೆರವಣಿಗೆಗಳ ಮೂಲಕ ರಾಷ್ಟ್ರೀಯ ಚಳುವಳಿ ಮತ್ತು ಗಾಂಧೀಜಿಯವರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸ್ಥಳೀಯ ನಾಯಕರು, ಸಮಾಜಸೇವಕರು ಮಹತ್ವದ ಬೆಂಬಲ ನೀಡಿದರು. ಇದರಿಂದ ಜನರು ಬ್ರಿಟಿಷರ ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ಜನರಲ್ಲಿ ಹೋರಾಟದ ಮನೋಭಾವ ಮತ್ತಷ್ಟು ಬಲವಾಯಿತು. ಹಲಗಲಿಯ ಬೇಡರ ದಂಗೆಯನ್ನು ಕರ್ನಾಟಕದ ಮೊದಲ ಸ್ವಾತಂತ್ರ್ಯ ಹೋರಾಟಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಅದರಿಂದ ಇದನ್ನು ಭಾರತದ ಸ್ವಾತಂತ್ರ್ಯ ಚಳವಳಿಯ ಅವಿಭಾಜ್ಯ ಅಂಗವಾಗಿ ಇತಿಹಾಸದಲ್ಲಿ ದಾಖಲಾಗಿದೆ.


ಜಿಲ್ಲೆಯಲ್ಲಿರುವ ಹಲಗಲಿ ಬೇಡರ ದಂಗೆಯ ಪ್ರತೀಕವಾಗಿ ಸ್ಮಾರಕಗಳನ್ನು ನಿರ್ಮಿಸಲಾಗಿದೆ, ಸ್ವಾತಂತ್ರ್ಯೊತ್ಸವದಲ್ಲಿ ಅಷ್ಟೇ ಅಲ್ಲದೆ ನಮ್ಮ‌ ಇಂದಿಗಾಗಿ ಅಂದು ಪ್ರಾಣತೆತ್ತ ವೀರರ ನಿರಂತರವಾದ ಸ್ಮರಣಿಸಬೇಕು, ವೀರರ ತ್ಯಾಗವನ್ನು ಗೌರವಿಸಬೇಕು, ಅವರ ಧೈರ್ಯ, ದೇಶಪ್ರೇಮ ಮತ್ತು ತ್ಯಾಗ ಇಂದಿನ ಯುವಜನತೆಗೆ ಸ್ಫೂರ್ತಿಯಾಗುವುದರ ಜೊತೆಗೆ ಮುಂದಿನ ಪೀಳಿಗೆಗೂ ದೇಶಭಕ್ತಿಯ ಸಂದೇಶವನ್ನು ಸಾರುವಂತಾಗಬೇಕು, ಹಲಗಲಿಯಲ್ಲಿ ಹೊತ್ತಿಸಿದ ಸಣ್ಣ ಕಿಡಿ ಮುಂದೆ‌ ಸ್ವಾತಂತ್ರ್ಯದ ಕಿಚ್ಚಾಗಿ‌ ಮುಂದೆ ರಾಷ್ಟ್ರವ್ಯಾಪಿ ಸ್ವಾತಂತ್ರ್ಯದ ಜ್ವಾಲೆಯಾಗಿ ರೂಪುಗೊಂಡಿತು ಎಂಬುದು ಬಾಗಲಕೋಟೆಯ ಹೆಮ್ಮೆಯ ಸಂಗತಿ. 



- ಮಂಜುಳಾ ಹಳ್ಳೂರ

ಬಸವೇಶ್ವರ ಕಲಾ ಮಹಾವಿದ್ಯಾಲಯ 

ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ, ಬಾಗಲಕೋಟ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top