ನಾನೊಂದು ಹೂವಾಗಿದ್ದರೆ...

Upayuktha
0

 



ಹೂವು ಪ್ರಕೃತಿಯ ಅದ್ಭುತ ಸೃಷ್ಟಿ. ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ನಿಸರ್ಗದ ಸೃಷ್ಠಿಯ ಮುಂದೆ ಶರಣಾಗಲೇಬೇಕು. ಕೃತಕ ಕಲರ್ ಪುಲ್ ಜಗತ್ತು ಅದೆಷ್ಟೇ ಸುಂದರವಾಗಿ ಕಂಡರೂ ಪ್ರಕೃತಿ ಕೊಟ್ಟ ಸೌಂದರ್ಯ ಎಲ್ಲವನ್ನು ಮರೆಯುವಂತೆ ಮಾಡುತ್ತದೆ. ಅಂತವುಗಳಲ್ಲಿ ಹೂವು ಆಕರ್ಷಣೆಯಲ್ಲೂ ಮತ್ತು ಸುಗಂಧದಲ್ಲೂ ತನ್ನದೇ ಆದ ಅಗ್ರಸ್ಥಾನ ಪಡೆದುಕೊಂಡಿದೆ.


ಮನುಷ್ಯ ಎಷ್ಟೇ ಮುಂದುವರೆದರೂ ಹೂವಿನ ಸೌಂದರ್ಯ, ಪರಿಮಳ ಮತ್ತು ಜೀವಂತಿಕೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಹೂವನ್ನು ಇಷ್ಟಪಡದವರು ಬಹಳ ವಿರಳ. ಅದರಲ್ಲೂ ಮಹಿಳೆಯರಿಗೆ ಹೂವು ಎಂದರೆ ಹೇಳಲಾರದ ಆತ್ಮೀಯತೆ ಭಾವ ಹುಟ್ಟಿಕೊಳ್ಳುತ್ತದೆ‌. ಪ್ರತಿಯೊಂದು ಹೂವೂ ತನ್ನದೇ ಆದ ಬಣ್ಣ, ರೂಪ ಮತ್ತು ಪರಿಮಳದ ಮೂಲಕ ಜನರ ಮನದಲ್ಲಿ ಸಂತೋಷವನ್ನು ಅರಳಿಸುತ್ತದೆ. ಹೂವಿಗೆ ಯಾವುದೇ ಜಾತಿ, ಧರ್ಮ, ಬಡತನ ಅಥವಾ ಶ್ರೀಮಂತಿಕೆಯ ಭೇದವಿಲ್ಲ. ಅದು ತನ್ನ ಪರಿಮಳದಿಂದ ಎಲ್ಲರಿಗೂ ಸಮಾನವಾಗಿ ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರ ಜೀವನದಲ್ಲೂ ಹೂವಿಗೆ ವಿಶೇಷ ಸ್ಥಾನವಿದೆ. 


ಪ್ರತಿಯೊಬ್ಬರೂ ಹೂವನ್ನು ಒಂದೇ ರೀತಿಯಲ್ಲಿ ನೋಡುವುದಿಲ್ಲ. ಅವರವರ ಭಾವನೆ, ಅನುಭವ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಅದರ ಮಹತ್ವ ಬದಲಾಗುತ್ತದೆ. ಮನುಷ್ಯರಾಗಿ ಹುಟ್ಟಿದ ನಾವು ಕೆಲವೊಮ್ಮೆ ಅಸೂಯೆ, ದ್ವೇಷ ಮತ್ತು ಸ್ವಾರ್ಥದ ನಡುವೆ ಬದುಬೆಳೆಸುತ್ತಾರೆಕುತ್ತೇವೆ. ಆದರೆ ನಾನು ಒಂದು ಹೂವಾಗಿದ್ದರೆ, ನಗುತ್ತಾ ಅರಳಿ, ನನ್ನ ಸುತ್ತಲಿನವರ ಮುಖದಲ್ಲೂ ನಗುವನ್ನು ಮೂಡಿಸಿ, ನನ್ನ ಅಲ್ಪಾಯುಷ್ಯದಲ್ಲಿಯೇ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದೆ.


ಮನುಷ್ಯನಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ಇನ್ನೊಬ್ಬರನ್ನು ನೋಯಿಸುತ್ತಾ ಬದುಕುವುದಕ್ಕಿಂತ, ಒಂದು ಹೂವಾಗಿ ಬೆಳಿಗ್ಗೆ ಅರಳಿ ಎಲ್ಲರ ಮನದಲ್ಲಿ ಸಂತೋಷ ಮೂಡಿಸಿ, ಸಂಜೆ ಬಾಡಿದರೂ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಇಂದಿನ ಸಮಾಜದಲ್ಲಿ ಮನುಷ್ಯನ ಮೌಲ್ಯವೇ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಪ್ರತಿದಿನ ಒಳ್ಳೆಯ ಕೆಲಸಗಳ ಬದಲು ಕೆಟ್ಟ ಚಿಂತನೆಗಳು ಮತ್ತು ವರ್ತನೆಗಳ ನಡುವೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.


ನಾನು ಹೂವಾಗಿದ್ದರೆ, ಜನರು ತಮ್ಮ ಮನಸ್ಸಿನ ನೋವು, ಸಂತೋಷ ಮತ್ತು ಹೇಳಲಾಗದ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಕೆಲವರಿಗೆ ಹೂವಿನೊಂದಿಗೆ ಒಂದು ಆತ್ಮೀಯ ಬಾಂಧವ್ಯವೇ ಇರುತ್ತದೆ. ಪ್ರತಿದಿನ ಅದನ್ನು ನೋಡದೆ, ಅದರೊಂದಿಗೆ ಮಾತನಾಡದೆ ಇರಲು ಸಾಧ್ಯವಾಗದಷ್ಟು ಪ್ರೀತಿಯನ್ನು ಬೆಸೆದುಕೊಂಡಿರುತ್ತಾರೆ. ಇಂತಹ ನಿಸ್ವಾರ್ಥ ಸಂಬಂಧವನ್ನು ಎಲ್ಲ ಮನುಷ್ಯರ ನಡುವೆ ಕಾಣುವುದು ಕಷ್ಟವೆ.


ಹೂವಾಗಿದ್ದರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸ್ಥಾನವನ್ನು ಪಡೆಯಬಹುದು. ಹಬ್ಬದ ದಿನಗಳಲ್ಲಿ ಮನೆಗಳನ್ನು ಅಲಂಕರಿಸುತ್ತಿದ್ದೆ, ಹೆಣ್ಣುಮಕ್ಕಳ ಮುಡಿಯನ್ನು ಶೃಂಗರಿಸುತ್ತಿದ್ದೆ, ಶುಭ ಸಮಾರಂಭಗಳ ಸೌಂದರ್ಯವನ್ನು ಹೆಚ್ಚಿಸುತ್ತಿದ್ದೆ. ಕೊನೆಗೆ ದೇವರ ಪಾದಾರವಿಂದವನ್ನು ಅಲಂಕರಿಸಿ ನನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದೆ. ಅಷ್ಟೊಂದು ಸಣ್ಣ ಆಯುಷ್ಯ ಇದ್ದರೂ ನನ್ನ ಬದುಕು ಅರ್ಥಪೂರ್ಣವಾಗಿರುತ್ತಿತ್ತು. ಆದರೆ ಮನುಷ್ಯನಾಗಿ ಹುಟ್ಟಿದ ನಾವು ಜೀವನದ ಅಮೂಲ್ಯತೆಯನ್ನು ಮರೆತು, ಕೆಲವೊಮ್ಮೆ ಜೀವನವೇ ಸಾಕೆನ್ನುವ ಸ್ಥಿತಿಗೆ ತಲುಪುತ್ತೇವೆ.


ಆದ್ದರಿಂದ, ನಾನು ಹೂವಾಗಿದ್ದರೆ ನನ್ನ ಬದುಕು ಚಿಕ್ಕದಾಗಿದ್ದರೂ, ನನ್ನ ಪರಿಮಳ, ಸೌಂದರ್ಯ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಅನೇಕ ಹೃದಯಗಳಲ್ಲಿ ಶಾಶ್ವತವಾಗಿ ಅರಳುತ್ತಿದ್ದೆ. ಜೀವನದ ನಿಜವಾದ ಸಾರ್ಥಕತೆ ಹೆಚ್ಚು ಕಾಲ ಬದುಕುವುದರಲ್ಲಿ ಅಲ್ಲ, ಇತರರ ಬದುಕಿನಲ್ಲಿ ಸಂತೋಷದ ಪರಿಮಳ ಹರಡುವುದರಲ್ಲಿದೆ.




- ಕಾಜಲ್ ಕಾಜಿ 

ಬಸವೇಶ್ವರ ಕಲಾ ಮಹಾವಿದ್ಯಾಲಯದ 

ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ, ಬಾಗಲಕೋಟ

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top