ಫೋನ್‌ಪೇ ಮ್ಯೂಚುವಲ್ ಫಂಡ್ಸ್‌

Upayuktha
0




ಮಂಗಳೂರು: ರಿಟೇಲ್ ಹೂಡಿಕೆ ಪಯಣವು ಈಗ ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಇಲ್ಲಿ ಸಂಪತ್ತು ಸೃಷ್ಟಿಸುವುದು ದೈನಂದಿನ ಹವ್ಯಾಸವಾಗಿ ಬದಲಾಗುತ್ತಿದೆ. ಮೊದಲ ಬಾರಿಗೆ ಹೂಡಿಕೆ ಮಾಡುವ ಅನೇಕರು ಶಿಸ್ತುಬದ್ಧ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ.

ಹೀಗಾಗಿ, ದೀರ್ಘಾವಧಿಯ ಸಂಪತ್ತನ್ನು ನಿರ್ಮಿಸಲು ದೈನಂದಿನ ಎಸ್‌ಐಪಿಗಳು ಪರಿಣಾಮಕಾರಿ ಮಾರ್ಗವಾಗಿ ಹೊರಹೊಮ್ಮುತ್ತಿವೆ. ದಿನಕ್ಕೆ ಕೇವಲ ₹10 ರಷ್ಟಿರುವ ಮೈಕ್ರೋ-ಇನ್ವೆಸ್ಟ್‌ಮೆಂಟ್‌ಗಳ ಮೂಲಕ ಫೋನ್‌ಪೇ ಮ್ಯೂಚುವಲ್ ಫಂಡ್ಸ್ ಹೂಡಿಕೆಗೆ ಸುಲಭ ಅವಕಾಶ ನೀಡಿದೆ. ಇದರ ಜೊತೆಗೆ ಮಾರುಕಟ್ಟೆ ಸಮಯಕ್ಕಿಂತ ಸ್ಥಿರ ಹೂಡಿಕೆ ಹೆಚ್ಚು ಮುಖ್ಯ ಎಂಬ ಹೂಡಿಕೆಯ ಅತ್ಯಂತ ಮೂಲಭೂತ ತತ್ವ ಸಾರಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಫೋನ್‌ಪೇ ಮ್ಯೂಚುವಲ್ ಫಂಡ್ಸ್‌ನ ದೈನಂದಿನ ಎಸ್‌ಐಪಿ ಡೇಟಾವು ಹೂಡಿಕೆದಾರರ ಈ ಬದಲಾಗುತ್ತಿರುವ ನಡವಳಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಡಿ.2025 ರಲ್ಲಿ ಈ ಫೀಚರ್ ಲಾಂಚ್ ಆದಾಗಿನಿಂದ, ಪ್ಲಾಟ್‌ಫಾರ್ಮ್ 5 ಲಕ್ಷಕ್ಕೂ ಹೆಚ್ಚು ವಿಶಿಷ್ಟ ದೈನಂದಿನ ಎಸ್‌ಐಪಿ ಹೂಡಿಕೆದಾರರನ್ನು ಆನ್‌ಬೋರ್ಡ್ ಮಾಡಿದೆ. ಇದು ಸಣ್ಣ ಮೊತ್ತದ, ನಿರಂತರ ಹೂಡಿಕೆಯ ಬಗ್ಗೆ ಜನರಿಗಿರುವ ಹೆಚ್ಚುತ್ತಿರುವ ಆಸಕ್ತಿಯನ್ನು ತೋರಿಸುತ್ತದೆ.ಈ ವರ್ಷ ಬೆಳವಣಿಗೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಜನವರಿಯಿಂದ ಜೂನ್ ತಿಂಗಳವರೆಗೆ ದೈನಂದಿನ ಎಸ್‌ಐಪಿ ವಹಿವಾಟುಗಳಲ್ಲಿ ಬರೋಬ್ಬರಿ 5 ಪಟ್ಟು ಏರಿಕೆ ಕಂಡುಬಂದಿದೆ. 

ಕೇವಲ ₹50ರ ಸರಾಸರಿ ಹೂಡಿಕೆಯೊಂದಿಗೆ ಸಾಮಾನ್ಯ ಜನರೂ ಸಹ ದೀರ್ಘಾವಧಿಯ ಸಂಪತ್ತು ಸೃಷ್ಟಿಯತ್ತ ಮುಖ ಮಾಡುತ್ತಿದ್ದಾರೆ. ದೈನಂದಿನ ಎಸ್‌ಐಪಿ ಈಗ ಕೇವಲ ಹೂಡಿಕೆಯಾಗಿ ಉಳಿದಿಲ್ಲ, ಬದಲಾಗಿ ಅದೊಂದು ಲಾಭದಾಯಕ ಹವ್ಯಾಸವಾಗಿ ಮಾರ್ಪಟ್ಟಿದೆ. ಈ ಹೂಡಿಕೆಯ ಟ್ರೆಂಡ್ ದೇಶದ ಮೆಟ್ರೋ ನಗರಗಳನ್ನು ಮೀರಿ ವಿಸ್ತರಿಸುತ್ತಿರುವುದನ್ನು ಡೇಟಾ ಎತ್ತಿತೋರಿಸುತ್ತದೆ. ದೈನಂದಿನ ಎಸ್‌ಐಪಿ ಹೂಡಿಕೆದಾರರ ಪೈಕಿ 77% ರಷ್ಟು ಮಂದಿ ಬಿ30 ನಗರಗಳಿಂದಲೇ (ಟೈಯರ್ 2 ಮತ್ತು 3 ಮಾರುಕಟ್ಟೆಗಳು) ಬಂದಿದ್ದಾರೆ ಎಂದು  ಸಂಸ್ಥೆಯ  ಮುಖ್ಯಸ್ಥ ನಿಲೇಶ್ ಡಿ. ನಾಯ್ಕ್ ತಿಳಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top