ಮಂಗಳೂರು: ಈರೋಡಿನ ರೆನಾಟಸ್ ಗ್ರೂಪ್ ನ ಪ್ರಮುಖ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬ್ರಾಂಡ್ ರೆನಾಕಾನ್ ಕರ್ನಾಟಕದಲ್ಲಿ ರೆನಾಫ್ಲೆಕ್ಸ್ ಫೈಬರ್ ಸಿಮೆಂಟ್ ಬೋರ್ಡ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿರ್ಮಾಣ ಮಾರುಕಟ್ಟೆಗಳಲ್ಲಿ ಒಂದಾದ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ.
₹350 ಕೋಟಿ ಹೂಡಿಕೆಯ ಅತ್ಯಾಧುನಿಕ ತಯಾರಿಕಾ ಮೂಲಸೌಕರ್ಯದ ಬೆಂಬಲದೊಂದಿಗೆ, ಈ ಬಿಡುಗಡೆಯು ರಾಜ್ಯದ ವಿಸ್ತರಿಸುತ್ತಿರುವ ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಬೆಂಬಲವಾಗಿ ಜಾಗತಿಕ ಮಟ್ಟದ, ಸುಸ್ಥಿರ ಕಟ್ಟಡ ನಿರ್ಮಾಣಪರಿಹಾರಗಳನ್ನು ತರಲಿದೆ. ಆಂಧ್ರಪ್ರದೇಶದ ನಾಯ್ಡುಪೇಟೆಯಲ್ಲಿರುವ ರೆನಾಕಾನ್ ನ ಸಮಗ್ರ ಹಸಿರು ಕಟ್ಟಡ ನಿರ್ಮಾಣ ಸಾಮಗ್ರಿಗಳ ಘಟಕದಲ್ಲಿ ಉತ್ಪಾದಿಸಲಾಗುವ ರೆನಾಫ್ಲೆಕ್ಸ್ ಫೈಬರ್ ಸಿಮೆಂಟ್ ಬೋರ್ಡ್‌ಗಳನ್ನು ಅತ್ಯಾಧುನಿಕ ಲ್ಯಾಮಿನಾರ್ ಫ್ಲೋ ತಂತ್ರಜ್ಞಾನ ಬಳಸಿ ತಯಾರಿಸಲಾಗುತ್ತದೆ. ಇದು ಉನ್ನತ ಸಾಮರ್ಥ್ಯ, ಬಾಳಿಕೆ, ನಿಖರತೆ ಮತ್ತು ಸುಸ್ಥಿರತೆಯನ್ನು ಒದಗಿಸುವುದಲ್ಲದೆ, ವೇಗವಾದ, ಸುರಕ್ಷಿತವಾದ ಮತ್ತು ಹೆಚ್ಚು ಪರಿಸರ ಸ್ನೇಹಿ ನಿರ್ಮಾಣಕ್ಕೆ ನೆರವಾಗುತ್ತದೆ.
ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರೆನಾಟಸ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ. ಸೆಲ್ವ ಸುಂದರಂ ಅವರು ರಾಜ್ಯದಲ್ಲಿ ರೆನಾಫ್ಲೆಕ್ಸ್ ಬಿಡುಗಡೆಯು ಸಂಪೂರ್ಣ ಕಟ್ಟಡ ನಿರ್ಮಾಣ ಪರಿಹಾರಗಳ ಪೂರೈಕೆದಾರರಾಗುವ ನಮ್ಮ ಪಯಣದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ ಎಂದರು.


