ಕುಂದಾಪುರ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಆಗಸ್ಟ್ 16 ರಂದು ಭಾನುವಾರ ಕುಂದಾಪುರದ ಹಂಗಾರಕಟ್ಟೆ ಕೇಂದ್ರದ ಸಭಾಭವನದಲ್ಲಿ ಸಂಜೆ ಗಂಟೆಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ವಿರಚಿತ ಹೇಮಾದ್ರಿ ಗಿರಿಬಾಲೆ ಎಂಬ ಪ್ರಸಂಗದ ಪ್ರದರ್ಶನ ಆಯೋಜಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಸಂಗ ಬಿಡುಗಡೆ ಹಾಗೂ ದೀಪ ಪ್ರಜ್ಬಲನೆ ಮಾಡಲಿದ್ದಾರೆ. ಭಾಗವತ ಮೂಡುಬೆಳ್ಳೆ ಚಂದ್ರಕಾಂತ ರಾವ್ ಸಾರಥ್ಯದಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಮುಮ್ಮೇಳ ಕಲಾವಿದರಾಗಿ ಕ್ಯಾದಗಿ ಮಹಬಲೇಶ್ವರ ಭಟ್, ಪ್ರಸನ್ನ ಶೆಟ್ಟಿಗಾರ ಮಂದಾರ್ತಿ, ಪ್ರಕಾಶ ಕಿರಾಡಿ, ವಂಡಾರು ಗೋವಿಂದ, ಪ್ರಭಾಕರ ಬೇಳಂಜೆ, ಜಯಂತ್ ಸುರ್ಗೊಳಿ ಭಾಗವಹಿಸಲಿದ್ದಾರೆ. ಚೆಂಡೆಯಲ್ಲಿ ಎನ್. ಜಿ. ಹೆಗಡೆ ಹಾಗೂ ಮದ್ದಳೆಯಲ್ಲಿ ಮಂಗೇಶ್ ನಾಡಕರ್ಣಿ ಭಾಗವಹಿಸಲಿದ್ದಾರೆ. ಜನ್ಮಾಂತರಗಳಲ್ಲಿ ನಡೆಯುವ ದ್ವೇಷ, ಪ್ರೀತಿ, ಶಾಪ, ವರ, ಒಳ್ಳೆಯತನ ಹಾಗೂ ಧರ್ಮದ ವಿಜಯದ ಕುರಿತು ಆಖ್ಯಾನದಲ್ಲಿ ಪ್ರಸ್ತುತ ಪಡಿಸಲಾಗುವುದು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


