ಕನಸೇ ಕನಸೇ
ನೀ ಬರುವಾಗ
ಕಣ್ಮುಚ್ಚಿ ನೋಡುತ್ತಿರುವ
ಈ ಸಮಯ ಆನಂದಮಯ
ಮುನ್ನುಡಿ ಆರಂಭವಷ್ಟೇ
ತುಸು ಹೊತ್ತು ದೂರದಲ್ಲಿ
ಕಣ್ತೆರೆಯಲು ಭಯವಾಗಿದೆ
ಕನಸೇ ನಿನ್ನ ಮತ್ತೆ ಕರೆವುದೇ..
ಅಲ್ಲ ಮೌನವಾಗಿದ್ದು ಬಿಡುವುದೆ?
ಕಣ್ತೆರೆಯದೆ ಇರುವುದೆ?
ಮನಸ್ಸೇ ಕೇಳುತ್ತಿಲ್ಲ ಕನಸೇ....
ಮತ್ತೇ ನಿನ್ನನ್ನು ಹುಡುಕಲು
ಧೈರ್ಯವಿಲ್ಲ ಈ ಕಂಗಳಿಗೆ
ಕನಸೇ ಯಾಕೇ ನೀ ಹೀಗೆ
ಬದುಕಿನ ಮೌನದಲ್ಲಿ
ಖುಷಿಯ ರಂಗು ಚೆಲ್ಲಬಾರದೇ
ನೋವನ್ನು ಹಾಗೇ ಒರೆಸಬಾರದೇ..
ನೀನೇ ಹೇಳು
ಕಣ್ತೆರೆಯುವುದೇ ಕಣ್ಮುಚ್ಚುವುದೇ
ಮತ್ತೇ ನೀ ಬರುವೆಯಾ?
ಈ ಪ್ರಶ್ನೆಗಳ ನಡುವೆ..
ಸಂಧ್ಯಾ ಎನ್, ಮಣಿನಾಲ್ಕೂರು

