ಪುತ್ತೂರು: ನಮ್ಮ ದೈನಂದಿನ ಬದುಕಿನಲ್ಲಿ ಸಂಭವಿಸುವ ಘಟನೆಗಳು ಮತ್ತು ವ್ಯಕ್ತಿಗಳಿಂದ ನಮಗೆ ಅರಿವಿಲ್ಲದಂತೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಬದುಕಿನಲ್ಲಿ ಯಾವ ಪರಿಸ್ಥಿತಿ ಎದುರಾದರೂ ನಾವು ನ್ಯಾಯದ ಹಾದಿಯಲ್ಲಿ ಸಾಗುವ ಮುಖೇನ ನಮ್ಮ ಭವಿಷ್ಯವನ್ನು ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ಎದುರಾಗುವ ಕಷ್ಟಗಳು ವ್ಯಕ್ತಿತ್ವಕ್ಕೆ ಧಕ್ಕೆ ತರದಂತೆ ನಮ್ಮ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿರ್ವಹಿಸಿ ಜೀವನ ನಡೆಸಬೇಕು ಎಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜೀ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ವಿವೇಕ ಸ್ಮೃತಿ ಸಂಚಿಕೆ-31 "ಭವಿಷ್ಯ ನಿರ್ಮಾಣಕ್ಕಾಗಿ ವ್ಯಕ್ತಿತ್ವ ನಿರ್ಮಾಣ" ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯರು ದುಡಿಮೆಯಲ್ಲಿ ಆಲಸ್ಯ ತೋರದೆ ವೃತ್ತಿ ಬದುಕಿನಲ್ಲಿ ಸಮಯದ ಪರಿಧಿಯನ್ನು ಮೀರಿ ದುಡಿಯಲು ಆರಂಭಿಸಿದಾಗ ಮಾತ್ರ ದೇಶ ಉನ್ನತಿಯತ್ತ ಸಾಗುತ್ತದೆ. ಮನುಷ್ಯ ಪ್ರಾಮಾಣಿಕತೆ, ಪಾವಿತ್ರತೆ, ಜವಾಬ್ದಾರಿ, ಆಶಾವಾದ ಮತ್ತು ಸಕಾರಾತ್ಮಕ ಚಿಂತನೆ ಈ ಐದು ಅಂಶಗಳನ್ನು ಅಳವಡಿಸಿಕೊಳ್ಳಬೇಕು. ದೈಹಿಕ ಆರೋಗ್ಯ ನಮ್ಮ ಮಾನಸಿಕ ಚಿಂತನೆಗಳನ್ನು ಪೋಷಿಸುತ್ತದೆ. ಈ ದಿಶೆಯಲ್ಲಿ ಮನುಷ್ಯನ ದಿನಚರಿಯ ಪ್ರತಿಯೊಂದು ಅಂಶವು ಆತನ ವ್ಯಕ್ತಿತ್ವದಲ್ಲಿ ಪ್ರಕಟಗೊಳ್ಳುತ್ತದೆ. ಮಾನಸಿಕವಾಗಿ ನಮ್ಮಲ್ಲಿ ಯಾವಾಗ ಪ್ರಾಮಾಣಿಕತೆ ಬರುತ್ತದೆಯೋ ಆಗ ನಿಜವಾದ ವ್ಯಕ್ತಿತ್ವದ ಸಾಧನೆ ಸಾಧ್ಯ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ.ಎನ್. ಮಾತನಾಡುತ್ತಾ, ಅನೇಕ ಮಹಾನ್ ವ್ಯಕ್ತಿಗಳನ್ನು ಕೊಡುಗೆ ನೀಡಿದ ಕೀರ್ತಿ ನಮ್ಮ ಭಾರತ ದೇಶದ್ದು, ಹಲವು ಮಂದಿಯ ಬಲಿದಾನ, ತ್ಯಾಗದಿಂದ ಇಂದು ನಮ್ಮ ಭಾರತ ದೇಶ ಬಲಿಷ್ಠ ರಾಷ್ಟçವಾಗಿ ಬೆಳೆದು ನಿಂತಿದೆ. ವಿವೇಕಾನಂದರ ಚಿಂತನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ವ್ಯಕ್ತಿತ್ವವು ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನಾ ಕೇಂದ್ರದ ಸಂಯೋಜಕಿ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಸ್ವಾಗತಿಸಿ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ವಂದಿಸಿದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಧನ್ಯಶ್ರೀ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


