ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯ: ಅರ್ಥಪೂರ್ಣವಾಗಿ ಜರುಗಿದ ‘ಆಟಿಡೊಂಜಿ ದಿನ- ಬಿರುವೆರೆ ಕೂಟ’

Upayuktha
0

 

ಮುಡಿಪು: ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯ (ರಿ.) ಸಂಸ್ಥೆಯ ಆಶ್ರಯದಲ್ಲಿ ಮುಡಿಪುವಿನ ಕಾಯರಗೋಳಿ ಸೂರ್ಯ ಆಡಿಟೋರಿಯಂನಲ್ಲಿ ‘ಆಟಿಡೊಂಜಿ ದಿನ - ಬಿರುವೆರೆ ಕೂಟ’ ಕಾರ್ಯಕ್ರಮ ಜರುಗಿತು.


ಚಲನಚಿತ್ರ ನಟ, ಬಂದಲೆ ಪಚ್ಚನಾಡಿ ಶ್ರೀಮಂತ ರಾಜಗುಳಿಗ ಕ್ಷೇತ್ರದ ಧರ್ಮದರ್ಶಿ ಸತೀಶ್ ಬಂದಲೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.


ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು ವಲಯದ ಅಧ್ಯಕ್ಷ ಲೋಕೇಶ್ ಕೂಟತ್ತಜೆ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಸಾಹಿತಿ ಹಾಗೂ ಸಮಾಜ ಸೇವಕರಾದ ಶ್ರೀ ಇರಾ ನೇಮು ಪೂಜಾರಿ, ಶ್ರೀ ಕೆ. ಟಿ. ಸುವರ್ಣ ಮತ್ತು ಶ್ರೀ ಮೋಹನ್ ದಾಸ್ ಎ. ಸೇರಿದಂತೆ ಹಲವು ಪ್ರಮುಖ ಗಣ್ಯರು ಭಾಗವಹಿಸಿ ಶುಭಹಾರೈಸಿದರು.


‘ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು’ ಸಂಸ್ಥೆಯ ಕಲಾವಿದರಿಂದ ‘ಸಾಂಸ್ಕೃತಿಕ ಕಲಾ ವೈಭವ - ಕಲಾವಿದರ ಕಲರವ’ ರಂಗೇರಿತು. ಗುರುರಾಜ್ ಕಾಸರಗೋಡು ಸಂಯೋಜನೆ ಮತ್ತು ನಿರೂಪಣೆಯಲ್ಲಿ ಮೂಡಿಬಂದ ಈ ಸಾಂಸ್ಕೃತಿಕ ವೈಭವವು ವೈವಿಧ್ಯಮಯ ಪ್ರದರ್ಶನಗಳ ಮೂಲಕ ನೆರೆದಿದ್ದ ಕಲಾಪ್ರೇಮಿಗಳ ಮನಸೂರೆಗೊಂಡಿತು.


ವರ್ಷಾ ಶೆಟ್ಟಿ, ಆನ್ಮೇತಾ ಶೆಟ್ಟಿ ಕೋಡಿಜಲ್, ನವ್ಯಶ್ರೀ ಕುಲಾಲ್, ಭಾನ್ವಿ ಕುಲಾಲ್, ಪ್ರಕೃತಿ ಪಿ. ಶೆಟ್ಟಿ, ತ್ರಿಷಾ ಅಡಕಲಕಟ್ಟೆ, ರಮ್ಯಾ ಶಿವರಾಜ್, ಅರ್ಚನಾ ಹೆರೂರ್, ಸ್ವಾತಿ ರೈ, ಸಾಯಿ ಪ್ರಣಮ್ಯ, ಸಾಧನಾ ಎಸ್. ಶೆಟ್ಟಿ, ತೇಜುಷಾ, ಜೀವಿಕಾ ಜೆ. ಶೆಟ್ಟಿ, ಅಪೂರ್ವ ಕೆ. ಎಸ್., ತನ್ಮಯಿ ಲಕ್ಷ್ಮಿ, ಮೈತ್ರಿ ಎಸ್., ನಿಧಿ ಶೆಟ್ಟಿ, ಆಧ್ಯ ಎಸ್., ಯಾಶಿಕಾ ರೈ, ರಿಷಿಕಾ, ಹರ್ಷಾ ಕುಲಾಲ್, ವೃದ್ಧಿ, ಸ್ಪಂದನಾ ಎಸ್. ಶೆಟ್ಟಿ, ದಿಶಾ, ತನುಶ್ರೀ, ವೈಷ್ಣವಿ, ಹರಿನಂದನ, ಲಿಖಿತ್ ಶೆಟ್ಟಿ, ಮನೀಶ್ ಶೆಟ್ಟಿ, ಪ್ರತೀಕ್ ಪೂಜಾರಿ, ಸಾಯಿ ಪ್ರಣಾಮ್, ಸಾತ್ವಿಕ್, ನೂತನ್ ಶೆಟ್ಟಿ, ಕಾರುಣ್ಯ ಆರ್. ರೈ, ಮನ್ವಿತಾ ಶೆಟ್ಟಿ, ಅಕ್ಷಿತಾ, ಲಾಸ್ಯ, ವಂಶಿಕಾ ಆರ್. ಎಸ್., ಲಕ್ಷ್ಯ, ದ್ರಿಷಾ ಸೇರಿದಂತೆ ಹಲವಾರು ಉದಯೋನ್ಮುಖ ಕಲಾವಿದರು ಭಾಗವಹಿಸಿ ತಮ್ಮ ಅಪೂರ್ವ ಅಭಿನಯ ಹಾಗೂ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.


ಸಾಂಸ್ಕೃತಿಕ ತಂಡದ ಕಲಾವಿದರಿಗೆ ಆಯೋಜಕರ ವತಿಯಿಂದ ಸಾಂಪ್ರದಾಯಿಕ ತುಳು ಶಾಲು ಹೊದಿಸಿ ಗೌರವಿಸಲಾಯಿತು. ಅಂತೆಯೇ, ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ದಿವಾಕರ ಪೂಜಾರಿ ಮುಡಿಪು ಸ್ವಾಗತಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top