ಅಕ್ಷಯ ಪದವಿ ಕಾಲೇಜು: "ಮನದ ಮಾತು ಕವಿತೆಯ ಹಾದಿ" ಕವನ ಕಮ್ಮಟ ಯಶಸ್ವಿ

Upayuktha
0

 


ಪುತ್ತೂರು: ಇತ್ತೀಚೆಗೆ ಇಲ್ಲಿನ ಅಕ್ಷಯ ಪದವಿ ಕಾಲೇಜು ಸಂಆಂಗಣದಲ್ಲಿ "ಮನದ ಮಾತು ಕವಿತೆಯ ಹಾದಿ" ಕವನ ಕಮ್ಮಟ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ  ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ ಹಳೆಗನ್ನಡ, ಚಂಪೂ ಕಾವ್ಯ ಮತ್ತು ನವ ಸಾಹಿತ್ಯದ ಸವಿಸ್ತಾರ ವಿವರಣೆಯೊಂದಿಗೆ ಬರಹದ ಪ್ರಾಮುಖ್ಯತೆಯನ್ನು ತಿಳಿಸಿದರು.


ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಬರಹವನ್ನು ಬರೆಯಬೇಕು ಆಗ ಜ್ಞಾನದ ವೃದ್ಧಿ ಆಗುವುದು. ಕೇವಲ ಪಠ್ಯಕ್ಕೆ ಮಾತ್ರವಲ್ಲದೆ ನೀವು ಜೀವನಪರ್ಯಂತ ಬರಹವನ್ನು ಮೈಗೂಡಿಸಿ ಎಂದು ಹೇಳಿ ಶುಭಹಾರೈಸಿದರು.

 

ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ಮಾತನಾಡಿ ಮನುಷ್ಯ ಬದುಕಿನಲ್ಲಿ ನೋವು-  ನಲಿವುಗಳನ್ನು ಬರಹದ ಮೂಲಕ ಸಾದರಪಡಿಸಿದಾಗ ಅದು ಸಾಹಿತ್ಯವಾಗುತ್ತದೆ. ಕವನವನ್ನು ನಾವು ಹೇಗೆ ಹುಟ್ಟು ಹಾಕುವುದು ಎಂಬ ವಿಚಾರಗಳನ್ನು ನಿಮಗೆ ತಲುಪಿಸಲು ಕಾರ್ಯಾಗಾರವು ನೂರಕ್ಕೆ ನೂರು ಶೇಕಡ ನಿಮಗೆ ಉಪಯೋಗವಾಗುತ್ತದೆ. ನೀವು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ ಬದುಕಿನುದ್ದಕ್ಕೂ  ಸಾಹಿತ್ಯ ಎನ್ನುವುದು ನಮ್ಮಲ್ಲಿ ಅಂತರ್ಗತವಾಗಿರುವ ದೀಪ್ತಿ.  ಇಂತಹ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಂಡಾಗ ಪ್ರತಿಭೆಗಳು ಅನಾವರಣವಾಗುತ್ತದೆ ಎಂದು ಶುಭಹಾರೈಸಿದರು.


ಇದೇ ವೇಳೆ ಕವನ ರಚನೆ ಮತ್ತು ಅನುಭವ ಕಥನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.

 

ವೇದಿಕೆಯಲ್ಲಿ ಆಂತರಿಕ ಭರವಸೆ ಗುಣಮಟ್ಟ ಕೋಶದ ಸಂಯೋಜಕಿ ರಶ್ಮಿ, ಅದ್ವಯ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿ ದಾಮಿನಿ ಉಪಸ್ಥಿತರಿದ್ದರು.

 

ಕನ್ನಡ ಭಾಷಾ ವಿಭಾಗ ಮುಖ್ಯಸ್ಥ ಹರಿಸ್ಚಂದ್ರ ಸಿ ಪ್ರಸ್ತಾವನೆ ಮಾಡಿ, ವಿದ್ಯಾರ್ಥಿನಿಯರಾದ ವೀಕ್ಷಾ ದ್ವಿತೀಯ ಬಿಸಿಎ ಮತ್ತು ಸೃಷ್ಟಿ ತೃತೀಯ ಬಿಸಿಎ ಪ್ರಾರ್ಥನೆ ಹಾಡಿ, ಹರಿಪ್ರಸಾದ್ ತೃತೀಯ ಬಿಎ ಅತಿಥಿಗಳ ಪರಿಚಯ ಮಾಡಿದರು, ಕನ್ನಡ ಉಪನ್ಯಾಸಕಿ ರಶ್ಮಿತಾ ಸ್ವಾಗತಿಸಿ, ಬಹುಮಾನಿತರ ಪಟ್ಟಿ ವಾಚಿಸಿದರು. ಅಮೃತ್ ರಾಜ್ ವಂದಿಸಿ, ಗ್ರೀಷ್ಮ  ದ್ವಿತೀಯ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top