ಅವರು ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಡಾ.ಎವಿ ರಾವ್ ಸಭಾಂಗಣದಲ್ಲಿ ಆಯೋಜಿಸಿದ "ಆಟಿಡೊಂಜಿ ದಿನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಧಾರ್ಮಿಕ, ಆಧ್ಯಾತ್ಮಿಕ ಆಚರಣೆಯ ಸಂಪ್ರದಾಯವನ್ನು ಉಳಿಸಿ, ಬೆಳೆಸಿ ಮುಂದುವರಿಸುವ ಗುರುತರ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಆದರೆ ಯುವ ಜನಾಂಗ ಈ ಆಚರಣೆಯನ್ನು ನಿರ್ಲಕ್ಷಿಸುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತುಳು ಭಾಷಾ ವಿದ್ವಾಂಸ ಕೆ.ಕೆ. ಪೇಜಾವರ ಆಟಿ ಆಚರಣೆಯ ಪ್ರಾಮುಖ್ಯತೆ, ನೈಜ ಉದ್ದೇಶ, ಮಹತ್ವ, ಆಚಾರ- ವಿಚಾರ, ಎದುರಾಗುತ್ತಿರುವ ಕಠಿಣ ಸವಾಲುಗಳು, ಔಷದ ಗುಣ ಅಂಶಗಳುಳ್ಳ ರೋಗ ನಿರೋಧಕ ಶಕ್ತಿಯುಳ್ಳ ವಿಶಿಷ್ಟ ನೈಸರ್ಗಿಕ ಖಾದ್ಯ, ತಿಂಡಿ ತಿನಿಸುಗಳು, ಪಾನಕ ಪಾನೀಯಗಳು, ಪಾಯಸ, ಕಷಾಯಗಳ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡ ಭಾಷಾ ವಿದ್ವಾನ್ ದಾಮೋದರ್ ಶರ್ಮ ಮಾತನಾಡಿ, ಆಟಿ ಮಾಸದಲ್ಲಿ ಪ್ರಕೃತಿ ಆರಾಧನೆ, ಭೂತಾರಾಧನೆ, ದೈವಾರಾಧನೆ, ನಾಗದೇವತಾರಾಧನೆಯನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು. ಈ ಆಚರಣೆಯಿಂದ ಕುಟುಂಬದ ಒಗ್ಗಟ್ಟು, ಬಾಂಧವ್ಯ ವೃದ್ಧಿಯಾಗುತ್ತಿತ್ತು. ಜಾತಿ- ಮತ ಭೇದವಿಲ್ಲದೆ ಸಾಮಾಜಿಕ ಸೌಹಾರ್ದತೆ ಸಾಧ್ಯವಾಗಿತ್ತು ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು ಎಂದು ನುಡಿದರು.
ವೇದಿಕೆಯಲ್ಲಿ ಚುನಾಯಿತ ಅಧ್ಯಕ್ಷ ಡಾ.ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ. ಜ್ಯುಲಿಯನ್ ಸಲ್ದಾನಾ ಉಪಸ್ಥಿತರಿದ್ದರು. ಮನರಂಜನಾ ಕಾರ್ಯಕ್ರಮದ ಅಂಗವಾಗಿ "ಸು ಫ್ರಮ್ ಸೋ" ಕನ್ನಡ ಚಲನಚಿತ್ರ ತಂಡದ ಕಲಾವಿದರಾದ ಜೆಪಿ ತುಮಿನಾಡ್, ಪುಷ್ಪರಾಜ್ ಬಲ್ಲಾಳ್, ಶನಿಲ್ ಗೌತಮ್ ಸಭಿಕರೊಂದಿಗೆ ಸಂವಾದ ನಡೆಸಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಅಕ್ಷತಾ ಮತ್ತು ಯತೀಶ್ ಬೈಕಂಪಾಡಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


