ಬಿಡುವಿಲ್ಲದ ತಾಯಿಗೆ ಆಕೆಯ ಪುಟ್ಟ ಪ್ರಪಂಚವೇ ಅಸ್ತಿಪಾಸ್ತಿ..

Upayuktha
0

 



ಮ್ಮ..! ಅಕ್ಕರೆಯ ಮುಗ್ಧ ಹೃದಯಿ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ಆಕೆ ಪಾತ್ರ ನಿರ್ವಹಿಸುತ್ತಾಳೆ. ಅಮ್ಮ ಈ ಒಂದು ಪದದಲ್ಲಿ ಪ್ರೀತಿ, ತ್ಯಾಗ, ಕಾಳಜಿ, ಸಹನೆ, ಮತ್ತು ಅಪಾರವಾದ ಮಮತೆ ಎಲ್ಲವೂ ಸೇರಿಕೊಂಡಿವೆ, ಅದೇ ಆ ತಾಯಿಗೆ ಇರೋ ಶಕ್ತಿ. ತನ್ನ ಎಲ್ಲ ನೋವು ಕಷ್ಟವನ್ನು ತನ್ನ ಸಂಸಾರಕ್ಕೆ ತಾಕಬಾರದು ಎಂದು ಸದಾ ಕಷ್ಟ ಪಡುತ್ತಾಳೆ. ಅಮ್ಮ ನಮ್ಮ ಜೀವನದ ಮೊದಲ ಗುರು. ಮಾತನಾಡುವುದನ್ನು, ನಡೆಯುವುದನ್ನು, ಸರಿ-ತಪ್ಪನ್ನು ತಿಳಿಯುವುದನ್ನು ಅಮ್ಮನೇ ಕಲಿಸುತ್ತಾಳೆ, ಅದು ಆಕೆಯ ಹಕ್ಕು

ಹೇಳಬೇಕಾದರೆ ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ಇಷ್ಟ ಅನ್ನೋದು ಸತ್ಯ. ನನಗೂ ಸಹ ಅಮ್ಮನಿಗಿಂತ ಅಪ್ಪ ತುಂಬಾ ಇಷ್ಟ. ಆದರೂ ಕೆಲವು ತಮಾಷೆ ಪದ ಮಾತನಾಡಲು ಅಮ್ಮನೇ ಬೇಕು. ಅಪ್ಪ ಕೆಲಸಕ್ಕೆ ಹೋದರೆ ಅಮ್ಮ ಹೊರಗಿನ ಕೆಲಸದಲ್ಲಿ ಇರುತ್ತಾಳೆ, ಆಗ ಒಂದು ಗಂಜಿ ಮಾಡಿ ಇಟ್ಟರೆ ಉಪ್ಪಿನಕಾಯಿ ಅಲ್ಲೇ ಊಟ. ಪದಾರ್ಥದ ಸುದ್ದಿಯೇ ಇರುವುದಿಲ್ಲ. ಅಪ್ಪ ಮನೇಲಿ ಇದ್ದರೆ ಕೆಲಸಗಳು ಬೇಗ ಆಗುತ್ತದೆ, ಆದರೆ ನಾನು ನನ್ನ ಅಮ್ಮ ಇಬ್ಬರೇ ಇದ್ದರೆ ಕೆಲಸ ಕಮ್ಮಿ ಮಾತುಕತೆ ಹೆಚ್ಚೇ ಇರುತ್ತದೆ. ನಿನ್ನೆಯ ಪದಾರ್ಥವನ್ನೇ ಊಟ ಮಾಡಿ ಬಿಡುತಿದ್ದೆವು.

ಮೊದಲು ಅಮ್ಮನ ಕೈ ಇಂದ ಎಷ್ಟೋ ಪೆಟ್ಟು ತಿಂದಿದ್ದೇವೆ, ಆದರೆ ಅದು ಕೊನೆಗೆ ಅವಳಿಗೆ ಬೇಸರ ಉಂಟಾಗುತ್ತದೆ. ನಮ್ಮ ಕೂಗಿನಲ್ಲೂ ಆಕೆಯ ಕಣ್ಣೀರು ಸಹ ಜೋಡಣೆ ಆಗುತ್ತದೆ. ಅಪ್ಪನ ಜೊತೆ ಹಣ ಕೇಳಲು ಭಯ ಪಟ್ಟರೆ ಅವಳು ಕೂಡಿಟ್ಟ ಹಣ ನಮಗೆ ಕೊಡುತ್ತಾಳೆ. ಮಧ್ಯಾಹ್ನ ಶಾಲೆಯಲ್ಲಿ ಉಪವಾಸ ಕೂರಬಾರದೆಂದು ಬೆಳ್ಳಿಗೆ ಬೇಗ ಎದ್ದು ನಮಗೆ ತಿಂಡಿ ಊಟ ಸಿದ್ದ ಮಾಡುತ್ತಾಳೆ. ಆದರೆ ಅದು ನಮ್ಮ ನಾಲಿಗೆಗೆ ರುಚಿ ಹಿಡಿಯದೆ ಹೋದರೆ ನಾವು ಆಕೆಗೆ ಬೇಸರ ಮಾಡಿ ಹೋಗುತ್ತೇವೆ. ಆದರೆ ಅದನ್ನು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೇ ನಮ್ಮ ಬರುವಿಕೆಗಾಗಿ ಕಾಯುತ್ತಾ ಇರುತ್ತಾಳೆ.



ಅಮ್ಮ ನಿಗೆ ಎಲ್ಲದರಲ್ಲೂ ಸಲಾಂ. ಅಮ್ಮ ಇಲ್ಲದ ಜೀವನವು ತುಂಬಾ ಖಾಲಿಯಾಗಿರುತ್ತದೆ. ನನ್ನ ತಾಯಿಯು ಆಕೆಯ ಅಮ್ಮನನ್ನು ಕಳೆದುಕೊಂಡು 4 ವರ್ಷ ಕಳೆಯಿತು, ತಾಯಿ ಕಳೆದುಕೊಂಡ ನೋವು ಅನುಭವಿಸಿದವರಿಗೆ ಗೊತ್ತು ಎಂದು ಅಮ್ಮ ಹೇಳುತ್ತಾಳೆ “ನನ್ನ ಅಮ್ಮ ಇದರೆ ಆ ಮನೆಗೆ ಒಂದು ಲಕ್ಷಣ, ನಾನು ಹೋದಾಗ ನನ್ನ ಕಾಳಜಿ ಮಾಡಿ ಬೇಕಾದ ಅಡಿಗೆ ಮಾಡಿ ಮಾತುಕತೆ ಮಾಡಿ ತಲೆಗೆ ಎಣ್ಣೆ ಹಚ್ಚಿ ಬಿಡುತಿದ್ದಳು” ಎಂದು ಹೇಳಿ ಭಾವುಕಳಾಗುತ್ತಾಳೆ.


ನಾನು ಒಳ್ಳೆ ಅಂಕ ತೆಗೆದರೆ ಖುಷಿ ಪಡುವವಳು ಅಮ್ಮ, ಪತ್ರಿಕೆಯಲ್ಲಿ ಆರ್ಟಿಕಲ್ ಬಂದರು ಎಲ್ಲರ ಜೊತೆ ಹೇಳಿ ಖುಷಿ ಪಡುವವಳು ಅಮ್ಮ. ನಮಗೆ ರಜೆ ಇದ್ದರು ಆಕೆಗೆ ಯಾರು ತಾನೇ ರಜೆ ಕೊಡುತ್ತಾರೆ ಅಲ್ವಾ..? ಅಮ್ಮ ನಮ್ಮ ಜೀವನದ ಅಮೂಲ್ಯವಾದ ಆಸ್ತಿ. ಅವಳ ಪ್ರೀತಿ ಅಳಿಯದದ್ದು, ಅವಳ ತ್ಯಾಗ ಅಸಮಾನವಾದದ್ದು. ಈ ಜಗತ್ತಿನಲ್ಲಿ ದೇವರನ್ನು ನೋಡಲು ಸಾಧ್ಯವಿಲ್ಲದಿದ್ದರೂ, ಅಮ್ಮನ ರೂಪದಲ್ಲಿ ಆಕೆಯನ್ನು ಕಾಣಬಹುದು.



- ಅಂಜಲಿ ಮುಂಡಾಜೆ
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ 
ಎಸ್ ಡಿ ಯಂ ಕಾಲೇಜು ಉಜಿರೆ 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top