ಅನೇಕ ಭಾಷೆಗಳನ್ನು ಬೆಳೆಸಿದ ಭಾಷೆ 'ಸಂಸ್ಕೃತ' - ಪ್ರಮೋದ್ ಕುಮಾರ್ ಬಿ.

Upayuktha
0


' ತನ್ನತನ ಕಳೆದುಕೊಳ್ಳದೆ ಸತ್ತ್ವಭರಿತವಾಗಿ ಬೆಳೆದುಕೊಂಡು ಬಂದ ಭಾಷೆಯೇ ಸಂಸ್ಕೃತವಾಗಿದೆ.  ಸಂಸ್ಕಾರ ಭರಿತ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳ ಮೇಲೆ ಹಿಡಿತ ಸಾಧಿಸದೆ ,  ದಾಷ್ಟ್ಯತೋರದೆ ಅನೇಕ ಭಾಷೆಗಳನ್ನು ಬೆಳೆಸಿದ ಭಾಷೆ ಇದ್ದರೆ ಅದು ಸಂಸ್ಕೃತ ' ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಅವರು ಹೇಳಿದರು.


ಇವರು ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಪದಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿದರು. 


ಕಾರ್ಯಕ್ರಮದ ಅಭ್ಯಾತರಾಗಿ ಆಗಮಿಸಿದ ಕನ್ಯಾಡಿಯ ಸಂಸ್ಕೃತ ವಿದ್ವಾಂಸರಾದ ಡಾ. ಶ್ರೀಕಾಂತ ಬಾಳ್ತಿಲ್ಲಾಯ ಅವರು ' ದೇಹ , ಮನಸ್ಸು ಹಾಗೂ ಮೆದುಳುಗಳ  ಕ್ರಿಯೆಗಳಿಗೆ ಪ್ರತಿಕ್ರಿಯೆಯಾಗಿ ಅಂತಃಕರಣ ಸ್ಪರ್ಶವು ಅಗತ್ಯವಾಗಿದೆ. ಇದಕ್ಕೆ ಸಂಸ್ಕೃತವು ಅಗತ್ಯ. ಇದರಿಂದ ಸಂಸ್ಕಾರ ಭರಿತ ಜೀವನ ನಮ್ಮದಾಗುತ್ತದೆ. ಅದೆಷ್ಟೋ ಸಂಸ್ಕೃತ ಮಂತ್ರಗಳು ಹಾಗೂ ಶ್ಲೋಕಗಳಿಂದ ನಮ್ಮ ಜೀವನ ಪರಿವರ್ತನೆಗೊಳಿಸಿಕೊಳ್ಳಲು ಸಾಧ್ಯ '  ಎಂದು ನುಡಿದರು.


ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. 


ಇದೇ ಸಂದರ್ಭದಲ್ಲಿ ಸಂಸ್ಕೃತ ಭಿತ್ತಿಪತ್ರಿಕೆ  ' ಸುಬೋಧಿನೀ '  ಹಾಗೂ ಪದಾಧಿಕಾರಿಗಳ ವಿವರದ ಡಿಜಿಟಲ್ ಪತ್ರಿಕೆಯನ್ನು ಅನಾವರಣ ಮಾಡಲಾಯಿತು. 


ಮನ್ವಿತಾ ಹಾಗೂ ಅಹಲ್ಯಾ ಪ್ರಾರ್ಥಿಸಿದರು.


ಸಂಸ್ಕೃತ ಸಂಘದ ಅಧ್ಯಕ್ಷೆ ಅಕ್ಷರ ಸ್ವಾಗತಿಸಿ , ಅನುಷಾ ಪರಿಚಯಿಸಿದರು. 


ಸಹ ಕಾರ್ಯದರ್ಶಿ ಟಿ.ಪಿ ಹಿತಾ ನಿರೂಪಿಸಿ , ಸಂಸ್ಕೃತ ಅಂತರಾಧ್ಯಯನ ವೃತ್ತಂ ಇದರ ಸಂಯೋಜಕಿ ಕವನಾ ಜೈನ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top