ಪೇಜಾವರ ಶ್ರೀಗಳ ನವದೆಹಲಿ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ಜ್ಞಾನ ಸತ್ರ ಸರಣಿಯ ಅಂಗವಾಗಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದ ಸಹಯೋಗದಲ್ಲಿ 15 ದಿನಗಳ ಶಾಸ್ತ್ರಾರ್ಥ ವಿಚಾರ ಗೋಷ್ಠಿಗಳ ಉದ್ಘಾಟನೋತ್ಸವ ನೆರವೇರಿತು.
ಶ್ರೀ ವಿಶ್ವಪ್ರಸನ್ನ ತೀರ್ಥರು ಸಾನ್ನಿಧ್ಯ ವಹಿಸಿದ್ದರು.
ವಿವಿ ಉಪಕುಲಪತಿ ಪ್ರೊ ಶ್ರೀನಿವಾಸ ವರಖೇಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉಜ್ಜಿಯಿನಿಯ ಮಹರ್ಷಿ ಪಾಣಿನಿ ಸಂಸ್ಕೃತ ಮತ್ತು ವೇದ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಪತಿ ಪ್ರೊ ಮಿಥಿಲಾ ಪ್ರಸಾದ ತ್ರಿಪಾಠಿ ಹಾಗೂ ಅತಿಥಿಗಳಾಗಿ ಪ್ರೊ ಲಲಿತ್ ಕುಮಾರ್ ತ್ರಿಪಾಠಿ ಪ್ರೊ ಶ್ರೀಧರ ಮಿಶ್ರಾ ಪ್ರೊಸನಂದನ ಕುಮಾರ ತ್ರಿಪಾಠಿ ಮೊದಲಾದವರು ಭಾಗವಹಿಸಿದ್ದರು .
ಸಂಸ್ಕೃತ ವಿವಿ ರಿಜಿಸ್ಟ್ರಾರ್ ಆರ್ ಜಿ ಮುರಳೀಕೃಷ್ಣ , ಸಂಯೋಜಕರಾದ ಪ್ರೊ ಗಣೇಶ ಟಿ ಪಂಡಿತ್ ಈ ಗೋಷ್ಠಿಗಳ ಸಂಯೋಜಕ ಮಾರ್ಗದರ್ಶಕರಾಗಿದ್ದಾರೆ.
ಪೇಜಾವರ ಶ್ರೀಗಳ ನವದೆಹಲಿ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಸಂಜೆ ರಷ್ಯಾದ ಇಸ್ಕಾನ್ ಭಕ್ತರಿಂದ ಭಜನಾ ಸತ್ಸಂಗ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

