ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಹುವಚನಂ ಪುತ್ತೂರು ಇದರ ಮುಖ್ಯಸ್ಥ ಡಾ.ಶ್ರೀಶ ಕುಮಾರ್ ಎಂ.ಕೆ ಆಗಮಿಸಿ ದೀಪ ಪ್ರಜ್ವಲನೆಗೈದು, ಕಾರ್ಯಕ್ರಮ ಉದ್ಘಾಟಿಸಿ "ಜಲ ಯೋಧರಾಗೋಣ ಬನ್ನಿ" ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನೀಡಿದರು.
ನೀರಿನ ಮಹತ್ವವನ್ನು ಅರಿಯುವುದು ಮತ್ತು ಅದನ್ನು ಉಳಿಸುವುದು ಇವೆರಡರ ನಡುವೆ ದೊಡ್ಡ ಅಂತರವಿದೆ. ಇಂದು ನೀರಿನ ಕೊರತೆ ಕೇವಲ ಬರಪೀಡಿತ ಪ್ರದೇಶಗಳ ಸಮಸ್ಯೆಯಲ್ಲ ನಗರಗಳಲ್ಲಿಯೂ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಲ ಯೋಧರಾಗುವ ಅಗತ್ಯವಿದೆ ಎಂದು ತಿಳಿಸುತ್ತಾ ಹತ್ತು ವಿಧಾನಗಳ ಮೂಲಕ ಮಳೆನೀರು ಸಂರಕ್ಷಣೆಯ ಕುರಿತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಾಂಶುಪಾಲ ದೇವಿಚರಣ್ ರೈ ಎಂ. ವಹಿಸಿದ್ದರು. ಕಲಾ ಸಂಘದ ಸಂಯೋಜಕಿ ಮೊನೀಷಾ ಎನ್, ಅಧ್ಯಕ್ಷೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕ್ಷಮಾ ಪಿ ಸ್ವಾಗತಿಸಿ, ದೀಕ್ಷಾ ಎಂ. ಬಿ ನಿರೂಪಿಸಿ, ರಕ್ಷಿತಾ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


