ನಮ್ಮ ಆಸೆಗಳು ಚಿಕ್ಕದಾಗಿದ್ದರೂ ಪ್ರಯತ್ನಗಳು ದೊಡ್ಡದಾಗಿರುತ್ತದೆ. ನಡೆನುಡಿಯಲ್ಲಿ ಒಳ್ಳೆಯತನವಿರಬಹುದು ಆದರೆ ಮಾತಿನಲ್ಲಿ ಕೂಡ ಪ್ರೀತಿ ಇರಲು ಸಾಧ್ಯನಾ ಅನ್ನುವುದು ನನ್ನ ಮನಸ್ಸಿಗೆ ಇರುವ ಪ್ರಶ್ನೆ.
ಮನುಷ್ಯನಾದವನಿಗೆ ಆಸೆಗಳು ಸಾವಿರಾರು ಅದನ್ನು ನೆರವೇರಿಸಿಕೊಳ್ಳಲು ಬಹಳ ಕಷ್ಟ ಪಡುತ್ತೇವೆ. ಎಷ್ಟೊಂದು ಸಮಯವಿದ್ದರೂ ಮನುಷ್ಯರೂ ಉಪಯೋಗ ಮಾಡಿಕೊಳ್ಳುವುದಿಲ್ಲ.
ಇಂದಿನ ನಮ್ಮ ಸಣ್ಣ ಪ್ರಯತ್ನ ನಾಳೆಯ ದೊಡ್ಡ ಯಶಸ್ಸನ್ನು ಕಾಣಲು ಸಾಧ್ಯ. ಶಿಸ್ತು ಮತ್ತು ಪರಿಶ್ರಮವೇ ವಿದ್ಯಾರ್ಥಿಗಳು ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಪ್ರತಿ ದಿನವೂ ನಮ್ಮ ಮನಸ್ಸಿಗೆ ಹೊಸ ಆಲೋಚನೆಗಳು ಬರುತ್ತಾ ಇರುತ್ತವೆ. ಸಮಯ ಎಂಬುದು ಎಷ್ಟು ಅಮೂಲ್ಯ ಅದನ್ನು ನಾವು ಕಲಿಯುವುದಕ್ಕೆ ಬಳಸುವುದು ಉತ್ತಮ.
ನಾವು ನಮ್ಮ ಮನಸ್ಸಿನ ಮಾತನ್ನು ಕೇಳಿ ಮುಂದಿನ ಕೆಲಸಗಳಿಗೆ ಹೆಜ್ಜೆಇಡುತ್ತೇವೆ. ನಾವು ಕೆಲವೊಮ್ಮೆ ಗೆಳತಿಯರ ಮನಸ್ಸಿನ ಮಾತನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಅದರಲ್ಲಿ ಸಫಲತೆಯನ್ನು ಪಡೆಯುವಲ್ಲಿ ನಾವು ವಿಫಲರಾಗುತ್ತೇವೆ. ಮನಸ್ಸು ಎಂಬುದು ಕನ್ನಡಿ ಇದ್ದ ಹಾಗೆ ಅದು ಸೂಕ್ಷ್ಮವಾಗಿರುವಂತದ್ದು. ನಮ್ಮ ಜೀವನದಲ್ಲಿ ನಗುನಗುತ್ತಾ ಬಾಳುವುದು ಎಷ್ಟು ಮುಖ್ಯವೋ ಅಷ್ಟೇ ಇನ್ನೊಬ್ಬರನ್ನು ಸಾಧ್ಯವಾದರೆ ನಗಿಸಲು ಪ್ರಯತ್ನಿಸಬೇಕೆ ಹೊರತು ಅಳಿಸಲಿಕ್ಕಲ್ಲ. ಇನ್ನೊಬ್ಬರ ಮನಸ್ಸಿನ ಮಾತು ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
- ಶಿವಾನಿ ಕೊಡಂಗಾಯಿ
ದ್ವಿತೀಯ ಬಿ ಎ ಪತ್ರೀಕೋಧ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ) ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


