ಸಿನಿಮಾಸಿರಿಯ ನೂತನ ಅಧ್ಯಕ್ಷರಾಗಿ ಸುರಭಿ ಶಿವಮೂರ್ತಿ ಆಯ್ಕೆ

Upayuktha
0

 


ದಾವಣಗೆರೆ: ಇಲ್ಲಿನ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ”ಯ ದಾವಣಗೆರೆಯ ಶಿವಯೋಗಿ ಮಂದಿರದ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಂಸ್ಥೆಯ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಿನಿಮಾ ಸಿರಿಯ ನೂತನ ಅಧ್ಯಕ್ಷರಾಗಿ ಸುರಭಿ ಶಿವಮೂರ್ತಿಯವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 


ಸಿನಿಮಾಸಿರಿಯ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಇತ್ತೀಚಿಗೆ ಸ್ವರ್ಗಸ್ಥರಾದ ಖ್ಯಾತ ಗಾನ ಕೋಗಿಲೆ ಎಸ್.ಜಾನಕಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಿನಿಮಾಸಿರಿಯ ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಿ ಶಿವಕುಮಾರ್, ಖಜಾಂಚಿಯಾಗಿ ಮಲ್ಲಿಕಾರ್ಜುನ ಗಾಂಧಿ, ಪರಿಕಲ್ಪನಾ ನಿರ್ದೇಶಕರಾಗಿ ಹೆಚ್.ವಿ.ಮಂಜುನಾಥಸ್ವಾಮಿ, ಗೌರವ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣ, ಟಿ.ಎಂ.ಪಂಚಣ್ಣ, ಸಮಿತಿ ಸದಸ್ಯರಾಗಿ ಉಮೇಶ್ ಗುಜ್ಜಾರ್, ಕಣಕುಪ್ಪಿ ಮುರುಗೇಶಪ್ಪ, ಆರ್.ಟಿ.ಮೃತುಂಜಯ,  ನರಸಿಂಹ ಬಂಡಿವಾಡ, ಕೆ.ಹೆಚ್.ಮಂಜುನಾಥ್, ಭಾವನ್ನಾರಾಯಣ, ಜೆ.ಆರ್.ನಿಂಗೋಜಿರಾವ್ ಗುಜ್ಜಾರ್, ಸವಣೂರು ಬಾಬು, ಶ್ರೀಮತಿ ಗೀತಾ ಬದರಿನಾಥ್ ನೇಮಕ ಮಾಡಲಾಗಿದೆ.

ಖ್ಯಾತ ಗಾಯಕ ಆರ್.ಟಿ.ಮೃತುಂಜಯರವರು ಸ್ವಾಗತಿಸಿ, ವಂದಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top