"Mangalore IAS – A School for Civil Services" ಉದ್ಘಾಟನಾ ಸಮಾರಂಭ

Upayuktha
0



ಮಂಗಳೂರು: ಇಲ್ಲಿನ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ "Mangalore IAS – A School for Civil Services" ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ , ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ವಂ. ಡಾ ಹೆನ್ರಿ ಡಿಸೋಜಾ ನೆರವೇರಿಸಿ ಆಶೀರ್ವಾದಿಸಿದರು. ವಿದ್ಯಾರ್ಥಿಗಳಿಗೆ ನಾವು ಎಲ್ಲಿ ಹುಟ್ಟಿದ್ದು ಮುಖ್ಯವಲ್ಲಾ ಎಲ್ಲಿಗೆ ಗುರಿ ಮುಟ್ಟುತ್ತೇವೆ ಏನೂ ಸಾಧನೆ ಮಾಡುತ್ತೇವೆ ಮತ್ತು ಎಷ್ಟು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ ಎಂದು ಸಲಹೆ ನೀಡಿದರು.


ನಂತರ  ರಾಮಕೃಷ್ಣ ಮಠದ ಯುಗಾನಂದ ಸ್ವಾಮೀಜಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದರು. ನಮ್ಮ ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಶಿಕ್ಷಣ ವಾಣಿಜ್ಯ ಬ್ಯಾಂಕಿಂಗ್ ಹಾಗೂ ವೈದಕೀಯ ಕ್ಷೆತ್ರದಲ್ಲಿ ಮುಂಚೂಣಿಯಲ್ಲಿ ಇದೆ. ರಾಷ್ಟ್ರೀಯ ಬ್ಯಾಂಕ್ ಗಳು ಇಲ್ಲಿಂದ ಆರಂಭ ಗೊಂಡಿದ್ದು ಕೆಲವರಿಗೂ ಈ ವಿಷಯ ಗೊತ್ತಿಲ್ಲ. ಈ ಜಿಲ್ಲೆಯಲ್ಲಿ ಐಎಎಸ್ ತರಬೇತಿಗೆ ಯಾವುದೇ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳು ಇಲ್ಲದ್ದು ತುಂಬಾ ಬೇಸರ ತಂದಿದೆ. ಇದನ್ನು ಅರಿತು ಈಗ ಈ ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಇಲ್ಲಿ ಆರಂಭಗೊಂಡಿದ್ದು ಸಂತೋಷದಾಯಕವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.



ಡೈಜಿ ವರ್ಲ್ಡ್ ನಿರ್ದೇಶಕ ವಾಲ್ಟರ್ ನಂದಲಿಕೆ ಮಾತನಾಡಿ ನನಗೂ ಪೊಲೀಸ್ ಇಲಾಖೆ ಗೆ ಸೇರಲು ಅಸೆ ಇತ್ತು ಅವಾಗ ನನಗೆ ಗೈಡ್ ಮಾಡಲು ಯಾರು ಇರಲಿಲ್ಲ. ಈಗ ಎಷ್ಟೋ ತರಬೇತಿ ಕೇಂದ್ರಗಳು ಇವೆ ಯಾವ ಮಾಹಿತಿ ಬೇಕಾದರೂ ಸುಲಭ ರೀತಿಯಲ್ಲಿ ತಿಳಿಯಬಹುದು. ಇಲ್ಲಿ ಹುಡುಗಿಯರ ಸಂಖ್ಯೆ ನೋಡುವಾಗ ತುಂಬಾ ಖುಷಿಯಾಗುತ್ತದೆ, ಯಾಕೆಂದರೆ ಅವರನ್ನು ಅಧಿಕಾರಿಗಳ ಸಮವಸ್ತ್ರದಲ್ಲಿ ನೋಡಲು ಮತ್ತು ಗೌರವ ಕೊಡಲು ಖುಷಿಯಾಗುತ್ತದೆ. ನಾನು ಇಂತಹ ತರಬೇತಿ ಕೇಂದ್ರ ನಮ್ಮ ಜಿಲ್ಲೆಯಲ್ಲಿ ಆಗಬೇಕು ಎಂದು ಹಲವು ಬಾರಿ ಪ್ರಯತ್ನ ಮಾಡಿದ್ದು, ಈಗ ಇಲ್ಲಿ ಈ ಕೇಂದ್ರ ಆರಂಭವಾಗಿದ್ದು ಇದರ ಸದುಪಯೋಗ ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸಲಿ ಎಂದು ಶುಭ ಹಾರೈಸಿದರು.

ಸಂದೇಶ ಫೌಂಡೇಶನ್ ನಿರ್ದೇಶಕ ವಂ. ರೋಷನ್ ರೋಸಾರಿಯೋ ಸ್ವಾಗತಿಸಿ, Mangalore IAS ಸಂಸ್ಥೆಯ ಸಂಸ್ಥಾಪಕ ಸಂತೋಷ್ ರಾವ್ ಸಂಸ್ಥೆಯ ಉದ್ದೇಶ ಹಾಗೂ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು. ಸಂದೇಶ ಸಂಸ್ಥೆಯ ಟ್ರಸ್ಟಿ ರೊಯ್ ಕ್ಯಾಸ್ಟಲಿನೋ ವಂದಿಸಿ, ಜಾಸ್ಮಿನ್ ಜೇನಿಫರ್ ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top