ಸುದಾನ ಶಾಲೆ: ಸುದಾನ ಇಂಟ್ಯಾರಾಕ್ಟ್ ಕ್ಲಬ್ "ಸ್ಪಂದನ" ಪದಗ್ರಹಣ ಸಮಾರಂಭ

Upayuktha
0

 



ಪುತ್ತೂರು: ಇಲ್ಲಿನ ಸುದಾನ ವಸತಿ ಶಾಲೆಯಲ್ಲಿ ಜುಲೈ 28‌, 2026 ರಂದು ರೋಟರಿ ಪುತ್ತೂರು ಎಲೈಟ್ ನ ಅಂಗ ಸಂಸ್ಥೆ ಸುದಾನ ಇಂಟ್ಯಾರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭ ನಡೆಯಿತು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಎಲೈಟ್ ನ ಅಧ್ಯಕ್ಷ ರೊ. ಮೊಹಮ್ಮದ್ ಶಕೀರ್ ಮಿತ್ತೂರು ಮಾತನಾಡುತ್ತಾ  "ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳೆಯಲು ಇಂಥ ಸಂಘಟನೆಗಳು ಉಪಯುಕ್ತ. ಸ್ವಕೇಂದ್ರಿತರಾಗಿ ಬೆಳೆಯುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಮತ್ತು ಸ್ಪಂದಿಸುವ ಗುಣವನ್ನು ಬೆಳೆಸುವ  ಹೊಣೆ ನಮ್ಮ ಮೇಲಿದೆ. ಇದಕ್ಕಾಗಿ ಈ ಸಂಘಟನೆಯು‌ ಸದಾ ಶ್ರಮಿಸುತ್ತದೆ"  ಎಂದು ನುಡಿದರು. 


ಮುಖ್ಯ ಅಭ್ಯಾಗತ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ  ಆಗಮಿಸಿದ್ದ ರೋಟರಿ ಎಲೈಟ್ ಅಸಿಸ್ಟೆಂಟ್ ಗವರ್ನರ್ ರೊ. ಅಬ್ದುಲ್ ರಜಾಕ್ ಕಬಕಕರ್ ವಿದ್ಯಾರ್ಥಿಗಳಲ್ಲಿ  ನಾಯಕತ್ವದ ಗುಣವನ್ನು ಬೆಳೆಸುವುದು  ವಿದ್ಯಾಭ್ಯಾಸದ ಗುರಿಯಾಗಬೇಕು. ಸಾಮಾಜಿಕ ತೊಂದರೆಗಳನ್ನು ಪ್ರಶ್ನಿಸುವ ಮತ್ತು‌ ಸರಿಪಡಿಸುವ ಧೈರ್ಯವಂತ ಯುವಜನರು ದೇಶದ ಅಭಿವೃದ್ದಿಗೆ ಕಾರಣರಾಗಬಲ್ಲರು ಎಂದು ಅಭಿಪ್ರಾಯಪಟ್ಟರು.    


ನೂತನ ಶೈಕ್ಷಣಿಕ ವರ್ಷದ ಸುದಾನ ಇಂಟ್ಯರಾಕ್ಟ್ ಕ್ಲಬ್ ನ ವಿದ್ಯಾರ್ಥಿ ಅಧ್ಯಕ್ಷೆ ಪ್ರಾಪ್ತಿ ಯು ಶೆಟ್ಟಿ(10ನೇ) ಮತ್ತು ಕಾರ್ಯದರ್ಶಿ  ಅನಘ(9ನೇ) ಮತ್ತು ಸದಸ್ಯರ ಪದಗ್ರಹಣ ಕಾರ್ಯಕ್ರಮವು ನಡೆಯಿತು. 


ನಿಕಟಪೂರ್ವ ಅಧ್ಯಕ್ಷೆ ಸಿಯೋನಾ ಅಸುಂತಾ ಲೋಬೋ ಸ್ವಾಗತಿಸಿ, ತಮ್ಮ ಸೇವಾನುಭವವನ್ನು ಹಂಚಿಕೊಂಡರು. ರೊ. ಆಸ್ಕರ್ ಆನಂದ್, ರೊ.ಸುಶಾಂತ್ ಹಾರ್ವಿನ್, ಮತ್ತು ರೊ.ಪದ್ಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


 ಇದೇ ಸಂದರ್ಭದಲ್ಲಿ  ಕಳೆದ ಶೈಕ್ಷಣಿಕ ವರ್ಷದಲ್ಲಿ ಎಂಟನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಸುದಾನ ಇಂಟ್ಯರಾಕ್ಟ್ ಸ್ಪಂದನ‌ದ ವಿದ್ಯಾರ್ಥಿ ಕಾರ್ಯದರ್ಶಿ‌  ಅನಘ ವಂದಿಸಿದರು. ವಿದ್ಯಾರ್ಥಿಗಳಾದ  ರೋಹನ್ ಸಿ ಸಿ (10)ಮತ್ತು ಚೈತಾಲಿ (10) ಅಭ್ಯಾಗತರನ್ನು ಪರಿಚಯಿಸಿದರು. ವಿದ್ಯಾರ್ಥಿ ಮಾನ್ ಶೆಟ್ಟಿ (10)ಕ್ಲಬ್ ವರದಿಯನ್ನು ಸಾದರಪಡಿಸಿದರು.  ವಿದ್ಯಾರ್ಥಿಗಳಾದ ಲೇಖನ್ (10),ಸಾರಾ ಸಲ್ವಾ(10) ಕಾರ್ಯಕ್ರಮವನ್ನು ನಿರೂಪಿಸಿದರು. ಸುದಾನ ಶಾಲೆಯ ಸ್ಪಂದನಾ ಇಂಟ್ಯರಾಕ್ಟ್ ಕ್ಲಬ್ ನ ನಿರ್ದೇಶಕಿ ಮತ್ತು ಉಪ ಮುಖ್ಯ ಶಿಕ್ಷಕಿ‌ ಲವೀನಾ ನವೀನ್ ಹನ್ಸ್, ಸದಸ್ಯರಾದ ಶ್ರೀಮತಿ ವಿನಯ ರೈ, ಶ್ರೀಮತಿ‌ ಆಶಾಲತಾ,  ಶ್ರೀಮತಿ‌ ಗ್ಲಾಡಿಸ್,  ರೊ. ರಂಜಿತ್‌ ಮಥಾಯಿಸ್‌, ಮತ್ತು ರೊ. ಬಾಲು ನಾಯ್ಕ್ ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top