ಕಾಸರಗೋಡು: ಡಾ. ವಾಮನ್ ರಾವ್ ಬೇಕಲ್ ಅವರ ನೇತೃತ್ವದ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ (ಕೇರಳ) ಇದರ ಜಂಟಿ ಆಶ್ರಯದಲ್ಲಿ, ಕನ್ನಡ ಭವನದ ರಜತ ಸಂಭ್ರಮದ ಸಮಾರೋಪದ ಪ್ರಯುಕ್ತ 'ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ 2026' ಕನ್ನಡ ಭವನದ ವೇದಿಕೆಯಲ್ಲಿ ನಡೆಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನವು ನೆರವೇರಿತು. ಗಡಿನಾಡ ಹಾಗೂ ಕರ್ನಾಟಕದ ಹಲವಾರು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಮತ್ತು ಮಹನೀಯರನ್ನು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಣ್ಮನ ಸೆಳೆದ 'ಸಾಂಸ್ಕೃತಿಕ ಕಲಾ ವೈಭವ':
ಕಾರ್ಯಕ್ರಮದ ಸಾಂಸ್ಕೃತಿಕ ಅಂಗವಾಗಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ) ಕಾಸರಗೋಡು ಸಂಸ್ಥೆಯ ಅಭಿನಯದ 'ಸಾಂಸ್ಕೃತಿಕ ಕಲಾ ವೈಭವ - ಕಲಾವಿದರ ಕಲರವ' ಪ್ರದರ್ಶನಗೊಂಡಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರ ಸುಂದರ ಸಂಯೋಜನೆ ಹಾಗೂ ನಿರೂಪಣೆಯಲ್ಲಿ ನಡೆದ ಈ ಕಲಾ ವೈಭವದಲ್ಲಿ ಬಾಲ ಕಲಾವಿದರು ಸೇರಿದಂತೆ ಸಂಸ್ಥೆಯ ಅಪ್ರತಿಮ ಕಲಾವಿದರು ಬಹುವಿಧ ಕಲಾ ಪ್ರಸ್ತುತಿಯ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಕಲಾ ವೈಭವವನ್ನು ಯಶಸ್ವಿಯಾಗಿ ಸಂಘಟಿಸಿದ ಗುರುರಾಜ್ ಕಾಸರಗೋಡು ಅವರನ್ನು ಕನ್ನಡ ಭವನದ ವತಿಯಿಂದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆತ್ತೋಡಿ, ಧಾರ್ಮಿಕ ಮುಂದಾಳು ಹಾಗೂ 'ಗಡಿನಾಡ ಶ್ರೇಷ್ಠ ಸಮಾಜ ಸೇವಾ ರತ್ನ' ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ, ಸಾಹಿತಿ ವಿರಾಜ್ ಅಡೂರ್, ನಿವೃತ್ತ ಪ್ರಾಧ್ಯಾಪಕ ವಿಶಾಲಾಕ್ಷ ಪುತ್ರಕಳ ಹಾಗೂ ಪತ್ರಕರ್ತ ಪ್ರದೀಪ್ ಬೇಕಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಸ್ಥೆಯ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ಗೌರವ ಸ್ಮರಣಿಕೆ ಹಾಗೂ ಕನ್ನಡ ಭವನದ ವತಿಯಿಂದ ಕನ್ನಡ ಶಾಲು ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


