ಶಾಪಿಂಗ್ ಅಂದ್ರೆ ಖರ್ಚಲ್ಲ, ಸಂತೋಷದ ಹಬ್ಬ

Upayuktha
0

  


"ಶಾಪಿಂಗ್" ಎಂಬ ಪದ ಕೇಳಿದರೆ ಕೆಲವರ ಮುಖದಲ್ಲಿ ನಗು ಮೂಡುತ್ತದೆ, ಮತ್ತೆ ಕೆಲವರ ಪರ್ಸ್ ಮಾತ್ರ ನಡುಗಲು ಶುರುವಾಗುತ್ತದೆ. ಶಾಪಿಂಗೆ ಹೋದಾಗ ಪ್ರತಿಯೊಂದು ಅಂಗಡಿಗಳು ನಮ್ಮ ಕಣ್ಣುಗಳನ್ನು ಸೆಳೆತ್ತವೆ. ಬಟ್ಟೆ ಅಂಗಡಿ, ಐಸ್ ಕ್ರೀಮ್ ಅಂಗಡಿ, ಆಟಿಕೆ ಅಂಗಡಿ ಹೀಗೆ ನಾನಾ ತರಹದ ಅಂಗಡಿಗಳು ನಮ್ಮ ಗಮನ ಸೆಳೆಯುತ್ತವೆ. ಕೆಲವರು ಅಗತ್ಯಕ್ಕಾಗಿ ಶಾಪಿಂಗ್ ಮಾಡಿದರೆ, ಕೆಲವರು ಮನಸ್ಸಿಗೆ ಸಂತೋಷ ಸಿಗಲೆಂದು ಶಾಪಿಂಗ್ ಮಾಡುತ್ತಾರೆ.

"ನಾನು ಕೇವಲ ನೋಡಲು ಬಂದಿದ್ದೇನೆ" ಎಂದು ಅಂಗಡಿಗೆ ಕಾಲಿಟ್ಟ ಪ್ರತಿಯೊಬ್ಬರೂ ಕೊನೆಗೆ ಎರಡು ಬ್ಯಾಗ್ ಹಿಡಿದು ಹೊರ ಬರುವುದು ಜಗತ್ತಿನ ದೊಡ್ಡ ಸತ್ಯ ಅಲ್ವಾ? 

ಶಾಪಿಂಗ್ ಎಂಬುದು ಒಂದು ವಿಚಿತ್ರ ಕಾಯಿಲೆ. ಹಣ ಇರುವವನು ಖರೀದಿಸುತ್ತಾನೆ, ಹಣ ಇಲ್ಲದವನು "ಆಫರ್ ಇದೆ ಅಲ್ವಾ!" ಎಂದು ಸಾಲ ಮಾಡಿ ಖರೀದಿಸುತ್ತಾನೆ. ಅಂಗಡಿಯವರು "ಇದು ಲಾಸ್ಟ್ ಪೀಸ್" ಎಂದಾಕ್ಷಣ, ಆ ವಸ್ತು ಜಗತ್ತಿನಲ್ಲೇ ಅತ್ಯಂತ ಅಮೂಲ್ಯವಾದಂತೆ ಕಾಣುತ್ತದೆ. ಅಂಗಡಿಗೆ ಹೋಗುವಾಗ, "ಐದು ನಿಮಿಷದಲ್ಲಿ ಬರುತ್ತೇನೆ" ಎನ್ನುವವರು, ಎರಡು ಗಂಟೆಯ ನಂತರ "ಇನ್ನೊಂದು ಅಂಗಡಿ ಮಾತ್ರ ಬಾಕಿ ಇದೆ" ಎಂದು ಹೇಳುತ್ತಾರೆ. ಶಾಪಿಂಗ್‌ಗೆ ಹೋದವರ ಮುಖದಲ್ಲಿ ನಗು ಹೆಚ್ಚಾಗುತ್ತದೆ, ಆದರೆ ಅವರ ಜೊತೆಗೆ ಬಂದವರ ಮುಖದಲ್ಲಿ ತಾಳ್ಮೆ ಕಡಿಮೆಯಾಗುತ್ತದೆ. ಕೊನೆಗೆ ಖರೀದಿಸಿದ ವಸ್ತುಗಳಿಗಿಂತ ಬಿಲ್ಲೇ ದೊಡ್ಡ ಸರ್ಪ್ರೈಸ್ ಆಗಿರುತ್ತದೆ. 

ಶಾಪಿಂಗ್‌ಗೆ ಹೋದಾಗ ಬೇಕಿದ್ದ ವಸ್ತು ಮಾತ್ರ ಸಿಗುವುದಿಲ್ಲ. ಹಾಲು ತರಲು ಹೋದವನು ಚಾಕೊಲೇಟ್, ಚಿಪ್ಸ್, ಟೀ-ಶರ್ಟ್, ಸುಗಂಧ ದ್ರವ್ಯ ಎಲ್ಲವನ್ನೂ ತರುತ್ತಾನೆ. ಮನೆಗೆ ಬಂದ ಮೇಲೆ ಮಾತ್ರ ನೆನಪಾಗುತ್ತದೆ "ಅಯ್ಯೋ! ಹಾಲೇ ಮರೆತುಬಿಟ್ಟೆ!" ಆನ್‌ಲೈನ್ ಶಾಪಿಂಗ್ ಇನ್ನೂ ಮಜಾ. ಫೋಟೋದಲ್ಲಿ ನೋಡಿದರೆ ಸಿನಿಮಾ ಹೀರೋ ತರ ಕಾಣುವ ಡ್ರೆಸ್, ಮನೆಗೆ ಬಂದ ಮೇಲೆ ಕನ್ನಡಿಯ ಮುಂದೆ ನಿಂತರೆ "ಇದು ನಾನೇ ಆರ್ಡರ್ ಮಾಡಿದ್ದೇನಾ?" ಎನ್ನುವ ಅನುಮಾನ ಬರುತ್ತದೆ!
ಕೊನೆಗೆ ಒಂದು ಸತ್ಯ ಶಾಪಿಂಗ್ ಮುಗಿದ ಮೇಲೆ ಬ್ಯಾಗ್‌ಗಳು ತುಂಬಿರುತ್ತವೆ, ಆದರೆ ಪರ್ಸ್ ಮಾತ್ರ ಖಾಲಿ ಆಗಿರುತ್ತೆ.

ಕೊನೆಗೆ, ಶಾಪಿಂಗ್ ನಮ್ಮ ಜೇಬನ್ನು ಹಗುರ ಮಾಡಬಹುದು, ಆದರೆ ಮನಸ್ಸನ್ನು ಮಾತ್ರ ತುಂಬಿಸುತ್ತದೆ. ಆದ್ದರಿಂದ ಶಾಪಿಂಗ್ ಮಾಡಿ... ಆದರೆ ಬಿಲ್ ನೋಡುವ ಧೈರ್ಯವೂ ಇರಲಿ.  ಸಂತೋಷವನ್ನು ಹಂಚಿಕೊಳ್ಳೋಣ; ಆದರೆ ಪರ್ಸ್‌ನ ಆರೋಗ್ಯವನ್ನೂ ಕಾಪಾಡಿಕೊಳ್ಳೋಣ.



- ಪ್ರಣೀತ,
ಎಸ್.ಡಿ.ಎಂ.ಕಾಲೇಜು, ಉಜಿರೆ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top