ಪುತ್ತೂರು: ಶಿಕ್ಷಣ ಎಂದರೆ ಕೇವಲ ಪ್ರಮಾಣ ಪತ್ರಗಳು ಮತ್ತು ಪದವಿಗಳನ್ನು ಪಡೆಯುವುದಲ್ಲ, ಬದಲಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದಾಗಿದೆ. ಕಚ್ಚಾ ವಸ್ತುಗಳು ಮೌಲ್ಯಯುತವಾಗಿರುವುದಿಲ್ಲ, ಆದರೆ ಅವುಗಳನ್ನು ಉತ್ತಮ ಉತ್ಪನ್ನಗಳಾಗಿ ಸಂಸ್ಕರಿಸಿದ ನಂತರ ಮೌಲ್ಯಪಡೆಯುವವು. ಹಾಗೆಯೇ ವಿದ್ಯಾರ್ಥಿಗಳು ಕೂಡ ತಮ್ಮನ್ನು ತಾವು ಸಂದರ್ಶನಗಳಲ್ಲಿ ಉತ್ತಮವಾಗಿ ಪ್ರಸ್ತುತ ಪಡೆಸಿಕೊಂಡಾಗ ಮಾತ್ರ ಅವರ ಕೌಶಲಗಳಿಗೆ ಹೆಚ್ಚಿನ ಮೌಲ್ಯ ಸಿಗುವುದು ಎಂದು ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು ಇದರ ಉದ್ಯೋಗ ಮತ್ತು ತರಬೇತಿ ಕೋಶ, ಐಕ್ಯೂಎಸಿ ಘಟಕ ಹಾಗೂ 1999 ರ ಸಾಲಿನ ಬಿಬಿಎಂ ಬ್ಯಾಚ್ ನ ಜಂಟಿ ಆಶ್ರಯದಲ್ಲಿ ನಡೆದ ವಿದ್ಯಾವಾರಿಧಿ ತರಬೇತಿ ಕಾರ್ಯಕ್ರಮ 2.0 ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಇದರ ಎಂಐಎಸ್ ವಿಭಾಗದ ಮ್ಯಾನೇಜರ್ ಶ್ರೀ ಕೃಷ್ಣರಾಜ ಅದಲ ಆಶಯದ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕಿ ಡಾ.ರವಿಕಲಾ, ಅರ್ನ್ಸ್ಟ್ - ಯಂಗ್ ಬೆಂಗಳೂರು ಕಾರ್ಯನಿರ್ವಾಹಕ, ನಿರ್ದೇಶಕ ಕಾರ್ಯಪ್ಪ ಎಂ ಸಿ, ಫ್ರಿಂಕ್ಸ್ ಎಐಸಿಎಫ್ಓ ಗಿರೀಶ್ ಕುಮಾರ್, ಅಜಂತಾ ಫಾರ್ಮಾ ಮುಂಬೈ ಯ ದಕ್ಷಿಣ ಭಾರತದ ಮುಖ್ಯಸ್ಥರು ಶಿವನಾರಾಯಣ ಭಟ್,ಕರಾಟೆ ಮತ್ತು ಕಿಕ್‌ಬಾಕ್ಸಿಂಗ್ ತರಬೇತುದಾರ ಅಶೋಕ್ ಎಂ.ಸಿ, ಸೀನಿಯರ್ ಪ್ರೊಸೆಸ್ ಎಕ್ಸಿಕ್ಯೂಟಿವ್,ಇನ್ಫೋಸಿಸ್, ಬಿಪಿಎಂ ಲಿಮಿಟೆಡ್ ಇದರ ಕುಮಾರಿ ನಿಶಾ ಪಿ ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ, ಆಡಳಿತ ಮನಮೋಹನ ಎಂ ಸ್ವಾಗತಿಸಿ, ಪ್ರಸ್ತಾವನೆಗೈದರು. ಉದ್ಯೋಗ ಮತ್ತು ತರಬೇತಿ ಕೋಶದ ಸಂಯೋಜಕಿ ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್ ವಂದಿಸಿ, ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಡಾ. ನಿಶಿತಾ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


