ಎಸ್‌ಐಆರ್ ಮಹಾ ಅಭಿಯಾನ: ಶಾಸಕ ಕಾಮತ್ ವಿವಿಧೆಡೆ ಭೇಟಿ

Upayuktha
0



ಮಂಗಳೂರು: ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ಕುರಿತು ಮಹಾ ಅಭಿಯಾನದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲ ವ್ಯಾಪ್ತಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ವಿವಿಧೆಡೆ ಭೇಟಿ ನೀಡಿದರು.


ದಕ್ಷಿಣ ಮಹಾಶಕ್ತಿ ಕೇಂದ್ರದ ವಾರ್ಡ್ ಸಂಖ್ಯೆ 48ರ ಕಂಕನಾಡಿ ವೆಲೆನ್ಸಿಯಾದ ಬೂತ್ ಸಂಖ್ಯೆ 187ರಲ್ಲಿ ಕಾರ್ಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಸ್‌ಐಆರ್ ಅಭಿಯಾನದ ಮಹತ್ವ ಹಾಗೂ ಉದ್ದೇಶದ ಕುರಿತು ಮಾಹಿತಿ ನೀಡಿದರು. ಎಲ್ಲಾ ಮತದಾರರು ಭರ್ತಿ ಮಾಡಿದ ಎನ್ಯುಮರೇಷನ್ ಫಾರಂಗಳನ್ನು ಅಂತಿಮ ದಿನಾಂಕದ ವರೆಗೆ ಕಾಯದೇ ಶೀಘ್ರವಾಗಿ ಸಲ್ಲಿಸಿ. ಫಾರಂ ಭರ್ತಿ ಮಾಡುವಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ನಮ್ಮ ಪಕ್ಷದ ಏಜೆಂಟರ ಸಹಾಯವನ್ನು ಪಡೆಯಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.


ಈ ವೇಳೆ ನಿಕಟಪೂರ್ವ ಪಾಲಿಕೆ ಸದಸ್ಯರಾದ ಸಂದೀಪ್ ಗರೋಡಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರವೀಣ್ ನಿಡ್ಡೇಲ್, ಶಕ್ತಿ ಕೇಂದ್ರ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಬಿಜೆಪಿ ಪ್ರಮುಖರಾದ ಕೃತಿಕ್ ಉಜ್ಜೋಡಿ, ರೂಪಾ, ದಯಾನಂದ, ರಾಮಚಂದ್ರ, ಗೀತಾ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top