ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಇವರ ನೇತೃತ್ವದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣದ ಕಾರ್ಯಕ್ರಮ ಕೆನರಾ ಶಾಲೆ, ಡೊಂಗರಕೇರಿಯಲ್ಲಿ ಇಂದು (ಜು.20) ನಡೆಯಿತು.
ಮುಖ್ಯ ಅತಿಥಿಯಾಗಿ ರೊಟೇರಿಯನ್ ಶಿವಾನಿ ಬಾಳಿಗಾ ಅವರು ಭಾಗವಹಿಸಿದ್ದರು. ಅದಲ್ಲದೆ ರೋಟರಿ ಕ್ಲಬ್ ಮಂಗಳೂರು ಮೆಟ್ರೊ ಇದರ ಅಧ್ಯಕ್ಷರಾದ ಶ್ಯಾಮ್ ಪ್ರಕಾಶ್, ಅಡ್ವೈಸರ್ ರೊಟೇರಿಯನ್ ಕೆ ಸುರೇಶ್ ಕಾಮತ್, ರೊಟೇರಿಯನ್ ರಜನಿ ಭಟ್ ಹಾಗೂ ಇತರರು ಭಾಗವಹಿಸಿದ್ದರು.
2026-27ನೇ ಸಾಲಿನ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷರಾಗಿ ಕುಮಾರಿ ಕ್ರಪಾ ಹಾಗೂ ಕಾರ್ಯದರ್ಶಿಯಾಗಿ ಕುಮಾರಿ ಭೂಮಿಕ ಆಯ್ಕೆಯಾದರು.
2027-28ನೇ ಸಾಲಿನ ಅಧ್ಯಕ್ಷೆಯಾಗಿ ಕುಮಾರಿ ನಿಷ್ಕಾ ಆಯ್ಕೆಗೊಂಡರು.
ಶಿಕ್ಷಕಿ ಸಂಯೋಜಕರಾದ ಶ್ರೀಮತಿ ಸುಜಾತ ಟಿ ಹಾಗೂ ಶ್ರೀಮತಿ ಪೂಜಾ ಅವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಾದ ಕುಮಾರಿ ವಂಶಿ ಡಿ. ಶೆಟ್ಟಿ, ಕುಮಾರಿ ನವ್ಯಶ್ರೀ, ಕುಮಾರಿ ಚಾರ್ವಿ ಚೊಕ್ಕವಾಗಿ, ಚೆನ್ನಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

