ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜು: ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Upayuktha
0

 


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ  ಚಟುವಟಿಕೆಗಳ ಉದ್ಘಾಟನೆ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು. ಕಾರ್ಯ ಚಟುವಟಿಕೆಗಳನ್ನು ಮಡಂತ್ಯಾರ್ ಸೇಕ್ರೆಟ್ ಹಾರ್ಟ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರಶಾಂತ್ ಬಿ ಉದ್ಘಾಟಿಸಿದರು. 


ನಂತರ ಮಾತನಾಡಿದ ಅವರು ಎನ್‌ಎಸ್‌ಎಸ್‌ ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಎನ್ ಎಸ್ ಎಸ್ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿ ಪಾಲ್ಗೊಂಡಾಗ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ. ಸಮಾಜದೊಂದಿಗೆ ಬೆರೆತು ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಬದು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಚಾರ್ಯರಾದ ಪ್ರಮೋದ್ ಕುಮಾರ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಸದೃಢ ಯುವ ಜನತೆಯಯನ್ನು ಸೃಷ್ಟಿಸುತ್ತದೆ. ಅರೋಗ್ಯವಂತ ರಾಷ್ಟ ನಿರ್ಮಾಣ ಮಾಡುವಲ್ಲಿ ಎನ್ ಎಸ್ ಎಸ್ ಅತ್ಯವಶ್ಯಕ. ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಸ್ವಯಂ ಸೇವಕರು ಪಡೆವ ಅನುಭವ ಮುಂದಿನ ಜೀವನಕ್ಕೆ ಉತ್ತಮ ಅಡಿಪಾಯ ಎಂದು ಹೇಳಿದರು.


ಇದೇ ಸಂದರ್ಭ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ್ದ ಹಿರಿಯ ಸ್ವಯಂಸೇವಕ ಸುದರ್ಶನ್ ನಾಯಕ್ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 586 ಅಂಕಗಳನ್ನು ಪಡೆದ ಸ್ವಯಂಸೇವಕಿ ಗ್ರಂಥ ಇವರನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಸದಸ್ಯರಾದ ನಾಗರಾಜ್ ಭಂಡಾರಿ, ಪ್ರಸನ್ನ ಕುಮಾರ್ ಐತಾಳ್, ಕನ್ನಡ ಉಪನ್ಯಾಸಕ ಸುಭಾಸ್ ರಾವ್ ಬೋಳೂರು ಉಪಸ್ಥಿತರಿದ್ದರು. ಸ್ವಯಂಸೇವಕಿ ಅನ್ವಿತಾ ನಿರೂಪಿಸಿ  ಘಟಕ ನಾಯಕಿ ನವನೀತು ಸ್ವಾಗತಿಸಿ ನಾಯಕ ವಿಶ್ವಾಸ್ ಧನ್ಯವಾದವಿತ್ತರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top