ಕಂದಗಲ್ಲ: ಜನರಿಗೆ ಅನುಕೂಲವಾಗಲೆಂದು ಸರಕಾರ ಏನೆಲ್ಲ ಸೌಲಭ್ಯಗಳನ್ನು ಒದಗಿಸಿದೆಯಾದರೂ ಕಂದಗಲ್ಲ ಗ್ರಾಮಕ್ಕೆ ಮಾತ್ರ ಯಾವ ಸೌಕರ್ಯಗಳೂ ಸಿಕ್ಕಿಲ್ಲ. ಗ್ರಾಮವನ್ನು ನಗರಗಳಿಗೆ ಸಂಪರ್ಕ ಕಲ್ಪಿಸಲು ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ಗ್ರಾಮದಿಂದ ಬೆಳಗಾವಿ-ಹೈದ್ರಾಬಾದ ಹೆದ್ದಾರಿಗೆ ಸಂಪರ್ಕಿಸುವ 5 ಕಿ.ಮೀ ರಸ್ತೆ ನಿರ್ಮಿಸಿ ವರ್ಷಾನುಗಟ್ಟಲೆ ಕಳೆದರು ಈ ರಸ್ತೆಯಲ್ಲಿ ಇನ್ನು ಸರಕಾರಿ ಬಸ್ ಸಂಚರಿಸದಿರುವುದರಿಂದ ಈ ಭಾಗದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದೆ. ಕಂದಗಲ್ಲ ಸೇರಿದಂತೆ ಸೋಮಲಾಪುರ, ಮರಟಗೇರಿ, ಗೋನಾಳ ಎಸ್.ಕೆ. ಒಳಗೊಂಡಂತೆ 25 ಹಳ್ಳಿಗಳಿಗೆ ಈ ರಸ್ತೆ ಅನುಕೊಲವಿದ್ದು ಬಾಗಲಕೋಟೆ, ಬೆಳಗಾವಿ, ಹೈದ್ರಾಬಾದ್ ಮುಂತಾದ ದೊಡ್ಡ ನಗರಗಳಿಗೆ ಹೋಗಿ, ಬರಲು ಅನುಕೂಲವಾಗಿದೆ.
ಸಾರಿಗೆ ವ್ಯವಸ್ಥೆ ಇಲ್ಲ: ಒಂದು ಬಸ್ಸು ಕೂಡ ಈ ರಸ್ತೆಯ ಮೇಲೆ ಓಡಾಡಲ್ಲ. ಸರಿಯಾದ ರಸ್ತೆ ಇದ್ದು ಸಾಕಷ್ಟು ಹಳ್ಳಿ ನಗರಗಳ ಪ್ರಯಾಣಿಕರಿಗೆ ಅವಶ್ಯಕತೆ ಇರುವ ರಸ್ತೆಯಲ್ಲಿ ಸಾರಿಗೆ ಇಲ್ಲದಿರುವುದು ಆಶ್ಚರ್ಯ ತಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬಸ್ ಸಂಚಾರ ಆರಂಭಿಸಬೇಕು: ಜಿಲ್ಲಾ ಕೇಂದ್ರ ಬಾಗಲಕೋಟೆ ಸೇರಿದಂತೆ ಇತರ ನಗರಗಳಿಗೆ ಹೋಗಿ ಬರಲು ಕಂದಗಲ್ಲ ಭಾಗದ ಪ್ರಯಾಣಿಕರಿಗೆ ನೇರವಾದ ಬಸ್ ಸಂಚಾರ ಇಲ್ಲ ಬಾಗಲಕೋಟೆಯಿಂದ ಕಂದಗಲ್ಲಿಗೆ ವಸತಿ ಬಸ್ ಪ್ರಾರಂಭಿಸಿದರೆ ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಅನುಕೊಲಕ್ಕಾಗಿ ಬಾಗಲಕೋಟೆ, ಬೆಂಗಳೂರು, ಹೈದ್ರಾಬಾದ, ಮಂಗಳೂರು ಹಾಗೂ ಇನ್ನು ಮುಂತಾದ ನಗರಗಳಿಗೆ ಹೋಗಿ ಬರುವವರಿಗೆ ಈ ರಸ್ತೆ ಬಹಳ ಅನುಕೊಲಕಾರಿಯಾಗಿದೆ.
ಬೆಂಗಳೂರು, ಮಂಗಳೂರು, ಬೆಳಗಾವಿ ಬಸ್ಸಿಗೆ ಆಗ್ರಹ: ಹುನಗುಂದ ಸಾರಿಗೆ ಘಟಕದಿಂದ ಹುನಗುಂದ-ಬೆಂಗಳೂರು ಹಾಗೂ ಮಂಗಳೂರು ಬಸ್ ಪ್ರಾರಂಭಿಸಿ ಬೆಂಗಳೂರು ಬಸ್ ತುಂಬ ಆದಾಪುರ, ಕಂದಗಲ್ಲ, ತಾವರಗೇರಾ, ಗಂಗಾವತಿ ಮಾರ್ಗವಾಗಿ ಓಡಿಸಿ, ಹುನಗುಂದ-ಮಂಗಳೂರು ಬಸ್ಸನ್ನು ಅದಾಪುರ, ಕಂದಗಲ್ಲ, ಮರಟಗೇರಿ, ಶಿರಗುಂಪಿ, ಕುಷ್ಟಗಿ, ಗಜೇಂದ್ರಗಡ ಮಾರ್ಗವಾಗಿ ಓಡಿಸಬೇಕು, ಕಂದಗಲ್ಲ ಬೆಳಗಾವಿ ಬಸ್ಸನ್ನು ಕಂದಗಲ್ಲ, ತುಂಬ, ಹುನಗುಂದ್, ಬಾಗಲಕೋಟ,ಮಾರ್ಗವಾಗಿ ಬೆಳಗಾವಿಗೆ ಓಡಿಸಬೇಕು ಎಂದು ಈ ಭಾಗದ ಅಂದಾಜು 20 ರಿಂದ 25 ಗ್ರಾಮಗಳ ಜನತೆ ಆಗ್ರಹಿಸಿದ್ದಾರೆ.
ಈ ಮಾರ್ಗದಲ್ಲಿ ಬಸ್ ಪ್ರಾರಂಭಿಸಿದರೆ ಹೆಚ್ಚಿನ ಹಣ ತೆತ್ತು ಸುತ್ತು ಹಾಕಿ ಹೋಗುವ ಬವಣೆ ತಪ್ಪಲಿದೆ. ಸುಮಾರು ಕಿ.ಮೀಗಳ ಅಂತರ ಕಡಿಮೆಯಾಗಿ ಸಮಯ ಉಳಿತಾಯವಾಗುತ್ತದೆ. ಇದರಿಂದ ಸಾವಿರಾರು ಜನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


