ಸುರಪುರ: ಇಲ್ಲಿನ ನಿವೃತ್ತ ಶಿಕ್ಷಕಿ ಹಾಗೂ ಆಧ್ಯಾತ್ಮಿಕ ಚಿಂತಕರಾದ ಶಕುಂತಲಾಬಾಯಿ ಜೋಶಿ (91) ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೃತರು ಹಿರಿಯ ಸಾಹಿತಿ ಹಾಗೂ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಜಾಲವಾದಿ ಅವರ ತಾಯಿಯಾಗಿದ್ದಾರೆ.
ಮೃತರ ನಿಧನಕ್ಕೆ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಹಿರಿಯ ಮುಖಂಡ ರಾಜಾ ಮುಕುಂದ ನಾಯಕ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಶಕುಂತಲಾಬಾಯಿ ಅವರ ಅಗಲಿಕೆಗೆ ಕ್ಷೇತ್ರದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ನಿವೃತ್ತ ಎಸ್ಪಿ ಸಿ.ಎನ್. ಭಂಡಾರಿ, ಹೈಕೋರ್ಟ್ ವಕೀಲ ಜೆ. ಆಗಸ್ಟಿನ್, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ರಂಗಂಪೇಟ ಕಸಾಸಂ ಅಧ್ಯಕ್ಷ ಸೂಗುರೇಶ ವಾರದ, ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಹಾಗೂ ಸಾಹಿತಿಗಳಾದ ನಬೀಲಾಲ ಮಕಾನದಾರ, ಸಿದ್ರಾಮ ಹೊನ್ಕಲ್, ಪ್ರಕಾಶಚಂದ ಜೈನ, ಲಕ್ಷ್ಮಿಕಾಂತ ಮೊಹರೀರ ಮತ್ತು ನಾಗರಾಜ ಜಮದರಖಾನಿ ಅವರು ಮೃತರ ಆತ್ಮಕ್ಕೆ ಶಾಂತಿ ಕೋರಿ ಜಂಟಿ ಸಂತಾಪ ಪ್ರಕಟಿಸಿದ್ದಾರೆ.
ಅಲ್ಲದೆ, ಡಾ. ಸತ್ಯನಾರಾಯಣ ಆಲದರ್ತಿ, ಡಾ. ಜಾಗೀರದಾರ, ಐ.ಜಿ. ನಾರಾಯಣಾಚಾರ್ಯ, ಕನಕಪ್ಪ ವಾಗನಗೇರಿ, ರಾಠೋಡ ಎಚ್., ವೆಂಕಟೇಶಗೌಡ ಪಾಟೀಲ, ಮಲ್ಲಿಕಾರ್ಜುನ ಉದ್ಧಾರ, ಸಜ್ಜನಶೆಟ್ಟಿ, ಪ್ರಕಾಶ ಬಣಗಾರ, ಲಕ್ಷ್ಮಣ ಗುತ್ತೇದಾರ, ಕವಿ ಮಲ್ಲೇಶಿ ಕೋನಾಳ, ನ್ಯಾಯವಾದಿ ಜಯಲಲಿತಾ ಪಾಟೀಲ ಮತ್ತು ಪಾರ್ವತಿ ದೇಸಾಯಿ ಅವರು ಶೋಕ ವ್ಯಕ್ತಪಡಿಸಿದ್ದಾರೆ.
ವಿವಿಧ ಸಂಘಟನೆಗಳ ಪ್ರಮುಖರಾದ ಕರವೇ ಅಧ್ಯಕ್ಷ ವೆಂಕಟೇಶ ಭೈರಿಮಡ್ಡಿ, ಮುದ್ದಪ್ಪ ಅಪ್ಪಾಗೋಳ, ಪ್ರಕಾಶ ಅಲಬನೂರ, ಅರ್ಷದ್ ದಖನಿ, ಶಿಕ್ಷಕರ ಸಂಘದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ, ನರಸಿಂಹ ಬಾಡಿಹಾಳ, ಕಾರ್ಮಿಕ ನಾಯಕ ದೇವೇಂದ್ರಪ್ಪ ಪತ್ತಾರ, ರೈತ ನಾಯಕ ಮಲ್ಲಿಕಾರ್ಜುನ ಸತ್ಯಂಪೇಟೆ, ದಸಂಸ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಹಾಗೂ ರಾಘವೇಂದ್ರ ಭಕ್ರಿ ಸೇರಿದಂತೆ ಪ್ರಮುಖರು ಮೃತರ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


