ಸ.ಪ್ರ.ದ. ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು: SIR ಮಾಹಿತಿ - ಜಾಥಾ ಕಾರ್ಯಕ್ರಮ

Upayuktha
0

 


ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ  SIR ಜಾಗೃತಿಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಯಿತು. 


ಎಸ್‌ಐಆರ್‌  ಕುರಿತಾದ ಮಾಹಿತಿ ಉಪನ್ಯಾಸವನ್ನು ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಾದ ಪ್ರಶಾಂತ್ ಎನ್ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನೀಡಿದರು ಪ್ರಾoಶುಪಾಲರಾದ ನಿತ್ಯಾನಂದ ವಿ ಗಾವಂಕರ್ SIR ಕುರಿತಾದ ಮಾಹಿತಿಯನ್ನು ತಮ್ಮ ಕುಟುಂಬ ನೆರೆಹೋರೆ ಮತ್ತು ಗ್ರಾಮದಲ್ಲಿ ಹಂಚಿಕೊಂಡು ತಾವು ಜಾಗೃತರಾಗುವ ಜೊತೆಗೆ ಸಮಾಜವನ್ನೂ ಜಾಗೃತ ಗೊಳಿಸಬೇಕೆಂದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶೃತಿ ಬಿ ಎಸ್, ಛಾಯಾ,  ಶ್ರೀಕಾಂತ್ ಉಪಸ್ಥಿತರಿದ್ದರು. 


ನಂತರದಲ್ಲಿ ವಿದ್ಯಾರ್ಥಿಗಳಿಂದ ಜಾಥಾ ಹಾಗೂ ಸಾಕ್ಷರತಾ ಕ್ಲಬ್ ಸದಸ್ಯರಿಂದ ಕಾಲೇಜಿನ ಅಸುಪಾಸಿನ ಮನೆಗಳಿಗೆ ಭೇಟಿ ನೀಡಿ SIR ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ಗಣ್ಯ ವ್ಯಕ್ತಿಗಳ  ಮನೆಗೆ ಭೇಟಿ ನೀಡುವ ಅಂಗವಾಗಿ ನಿವೃತ್ತ ಶಿಕ್ಷಕರಾದ ಚಿಕ್ಕಣ್ಣ ಮಾಸ್ಟರ್‌ ಹಾಗೂ ಸೇಸು ಟೀಚರ್‌ ದಂಪತಿಗಳಲ್ಲಿ  SIR ಅಭಿಯಾನವನ್ನು ಪ್ರೋತ್ಸಾಹಿಸುವಂತೆ ಕೋರಲಾಯಿತು. ಮತದಾರರ ಸಾಕ್ಷರತಾ ಕ್ಲಬ್‌ನ ಸಂಚಾಲಕರು ತೆಕ್ಕಟ್ಟೆ , ಬ್ರಹ್ಮಾವರ, ಉದ್ಯಾವರ ಪದವಿ ಪೂರ್ವ ಕಾಲೇಜುಗಳಲ್ಲಿ ಎಸ್‌ ಐಆರ್‌ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟಿರುತ್ತಾರೆ. 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top