ಪಾಪ ಪಾಂಡು, ಸಿಲ್ಲಿ ಲಲ್ಲಿ ಹಾಸ್ಯ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಸಮಯದಲ್ಲಿ ಕಾತರದಿಂದ ವೀಕ್ಷಿಸುವ ವೀಕ್ಷಕರಿಗೆ ಕಚಗುಳಿ ಇಡುವ ಧಾರಾವಾಹಿ ಲೇಖಕರೇ ಪ್ರಸಿದ್ಧ ಹಾಸ್ಯ ಬರಹಗಾರರು ಶ್ರೀ ಎಂ ಎಸ್ ನರಸಿಂಹಮೂರ್ತಿ. ಇವರು ಬರೆದ ಸಂಭಾಷಣೆಗೆ ನಟಿಸಿದ ನಟರು ಹಲವರು.
ಎಂ ಎಸ್ ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ಎಂ ಎ ಸೂರಪ್ಪ ಮತ್ತು ಸಾವಿತ್ರಮ್ಮ ದಂಪತಿಗಳ ಪುತ್ರನಾಗಿ ೨೦-೧೦-೧೯೪೯ ರಂದು ಜನಿಸಿದರು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಿಕ್ಷಣ ತಾಲೂಕಿನಲ್ಲಿ ಪೂರೈಸಿ, ಪಿ ಯು ಸಿ ಪರೀಕ್ಷೆ ಬೆಂಗಳೂರಿನಲ್ಲಿ ಪಾಸು ಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಎಂ ಎಂ ಪರೀಕ್ಷೆ ಮುಗಿಸಿ ಪತ್ರಿಕೋದ್ಯಮದ ಸ್ನಾತಕೋತ್ತರ ಡಿಪ್ಲೊಮಾ ಪ್ರಥಮ ರ್ಯಾಂಕ್ ಪಡೆದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಅನೇಕ ಅಂಕಣ ಬರಹಗಳು, ಹಾಸ್ಯಲೇಖನಗಳು ಹಲವಾರು ಪತ್ರಿ
ಆಕಾಶವಾಣಿಯಲ್ಲಿ ನೂರಕ್ಕೂ ಹೆಚ್ಚು ನಗೆಭಾಷಣಗಳು ಮತ್ತು ಬಾನುಲಿ ನಾಟಕಗಳು, ಪ್ರಸಾರಗೊಂಡಿವೆ. ಅನೇಕ ಕನ್ನಡ ತರಬೇತಿ ಶಿಬಿರದಲ್ಲಿಯೂ ಪ್ರಮುಖವಾಗಿ ಸಂಚಾಲತ್ವ, ಹಾಸ್ಯಸಾಹಿತ್ಯ ರಚನೆ ಕಮ್ಮಟಗಳ ಸಂಚಾಲತ್ವ, ಆಡಳಿತದಲ್ಲಿ ಕನ್ನಡ ಶಿಬಿರಗಳಲ್ಲಿ ಉಪನ್ಯಾಸ, ಉದಯವಾಣಿ ಪತ್ರಿಕೆಯ ವಿಶೇಷವಾದ ವಿಡಂಬನೆಯ ಅಂಕಣ ಬರಹಗಾರರಾಗಿ ಪ್ರಸಿಧ್ಧರಾದ ನಾಡಿನ ಅಧ್ಭುತ ಲೇಖಕರು. ಕರ್ಮವೀರ, ಮಂಗಳ, ತುಷಾರ; ಪತ್ರಿಕೆಯಲ್ಲಿ ಪ್ರಶ್ನೋತ್ತರ ಅಂಕಣಕ್ಕೆ ಉತ್ತರಿಸಿದ ಲೇಖಕರು. ನಗೆಸಾಹಿತ್ಯದ ಬಗ್ಗೆ ವಿದೇಶದಲ್ಲಿ ವಿವಿಧ ಕನ್ನಡ ಸಂಘಟನಗಳ ಆಹ್ವಾನದ ಮೇರೆಗೆ ಹಾಜರಾಗಿ, ಭಾಷಣಗಳನ್ನು ಮಾಡಿ, ಜನರನ್ನು ನಗೆಗಡಿಲನಲ್ಲಿ ಮುಳುಗಿಸಿ, ಹಾಸ್ಯ ರಸಾಯನ ನೀಡಿದ ಮಹನೀಯರು.
ಲಲಿತಲಾಸ್ಯಲಲಾಮ, ಹಾಸ್ಯ ಬ್ರಹ್ಮ, ಬಿರುದು ಪಡೆದಿದ್ದಾರೆ. ಬೀchi ಪ್ರಶಸ್ತಿ, ತರಂಗರಂಗ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ನವರತ್ನರಾಮ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಮಣ ಶ್ರೀ ನಗೆ ರಾಜ್ಯಪ್ರಶಸ್ತಿ, ಪರಮಾನಂದ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ, ಶಿಡ್ಲಘಟ್ಟದ ಅಧ್ಯಕ್ಷತೆ ವಹಿಸಿದ್ದಾರೆ. ಜೀವಿತಾವಧಿ ಟೆಲಿಪ್ರಶಸ್ತಿ ಗಳಿ

.jpeg)
