ಸಮಾಜಸೇವೆ ಸಲ್ಲಿಸಿ ಬಡವರ ಕಣ್ಣೀರು ಒರೆಸಿ: ಡಾ. ಸೂರ್ಯನಾರಾಯಣ

Upayuktha
0

ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ





ಮಂಗಳೂರು: ರೋಟರಿ ಸದಸ್ಯರು ತಮ್ಮ ಕಠಿಣ ಶ್ರಮ, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಬಡವರ ಕಣ್ಣೀರು ಒರೆಸುವ ಕಾರ್ಯ ಕೈಗೊಳ್ಳಬೇಕು. ಅಲ್ಲದೆ ನಾಯಕತ್ವ ಗುಣಗಳನ್ನು ಬೆಳೆಸಿ ಯಶಸ್ಸು ಸಾಧಿಸಿ ಸಂಸ್ಥೆಗೆ ಗೌರವ ಸಂಪಾದಿಸಬೇಕು ಎಂದು ರೋಟರಿ ಸಂಸ್ಥೆಯ 3181ರ ಜಿಲ್ಲಾ ನಿಯೋಜಿತ ಗವರ್ನರ್ ಡಾ. ಸೂರ್ಯ ನಾರಾಯಣ ಸಲಹೆ ನೀಡಿದರು.


ಅವರು ಶನಿವಾರ (ಜು.18) ನಗರದ ಎ.ಜೆ. ಗ್ರ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ಜರುಗಿದ ರೋಟರಿ ಕ್ಲಬ್ ಮಂಗಳೂರು ಸಿಟಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಪದಗ್ರಹಣದ ವಿಧಿ ವಿಧಾನಗಳನ್ನು ನೆರವೇರಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ನೂತನ ತಂಡಕ್ಕೆ ಶುಭ ಹಾರೈಸಿದರು.


ನಿರ್ಗಮಿತ ಅಧ್ಯಕ್ಷೆ ಸಜ್ನಾ ಭಾಸ್ಕರ್ ಸ್ವಾಗತಿಸಿ ತಮ್ಮ ಅಧಿಕಾರ ಅವಧಿಯಲ್ಲಿ ಸಹಕಾರ ನೀಡಿದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ನಿರ್ಗಮನ ಕಾರ್ಯದರ್ಶಿ ಪದ್ಮನಾಭ ನಾಯಕ್ ವಾರ್ಷಿಕ ವರದಿ ಮಂಡಿಸಿದರು. ವಲಯ ಸಹಾಯಕ ಗವರ್ನರ್ ಡಾ. ಅರವಿಂದ್ ರಾವ್ ಅವರು ಡಾ. ರಂಜನ್ ಅವರ ಸಂಪಾದಕತ್ವದ ಸಂಸ್ಥೆಯ ಗೃಹವಾರ್ತಾ ಪತ್ರಿಕೆ "ಸಿಟಿ ಬಿಟ್ಸ್ ಆಂಡ್ ಬೈಟ್ಸ್"ನ್ನು ಅನಾವರಣಗೊಳಿಸಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.


ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಸನಿತ್ ಶೇಟ್ ಅವರು ತಮ್ಮ ಅಧಿಕಾರವಧಿಯಲ್ಲಿ ಪ್ರಸ್ತುತ ಸಾಲಿನ ಸಮಾಜಮುಖಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣ ಇತ್ಯಾದಿ ಪರಿಣಾಮಕಾರಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳ ಯಶಸ್ವಿ ಅನುಷ್ಠಾನಕ್ಕೆ ಸರ್ವ ಸದಸ್ಯರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಸಂಸ್ಥೆಗೆ ಪ್ರಿಯಾ ಶೇಟ್, ಅವಿಲ್ ಲಾರೆನ್ಸ್ ಪಾಯ್ಸ್ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.


ಸಂಸ್ಥೆಯ ಸಮುದಾಯ ಸೇವಾ ಯೋಜನೆ ಅಂಗವಾಗಿ ನಗರದ ರಿಯಾ ಪ್ರತಿಷ್ಠಾನ ಆಶ್ರಮಕ್ಕೆ 60 ಸಾವಿರ ರೂ. ಮೌಲ್ಯದ ಗೃಹ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.


ರೋಟರಿ ಜಿಲ್ಲಾ 3181ರ ಗವರ್ನರ್ ಸತೀಶ್ ಬೋಳಾರ್ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂದರ್ಭೋಚಿತವಾಗಿ ಮಾತನಾಡಿದರು.


ವೇದಿಕೆಯಲ್ಲಿ ವಲಯ ಅಧಿಕಾರಿ ಗಣೇಶ್ ಕೊಡ್ಲಮೊಗರು, ಸಂಸ್ಥೆಯ ಸಲಹೆಗಾರ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ನಿತಿನ್ ದೇವಾಡಿಗ ವಂದಿಸಿದರು.


ನೂತನ ನಿರ್ದೇಶಕರು:

ಡಾ‌. ರಂಜನ್ (ಸಂಸ್ಥೆ ಸೇವೆ), ಗಣೇಶ್ ಕೊಡ್ಲಮೊಗರು (ವೃತ್ತಿಪರ ಸೇವೆ), ಸರಿತಾ ಡಿಸೋಜ (ಸಮಾಜಸೇವೆ), ಪದ್ಮನಾಭ ನಾಯಕ್ (ಅಂತಾರಾಷ್ಟ್ರೀಯ ಸೇವೆ), ಕೆನ್ಯೂಟ್ ಪಿಂಟೊ (ಯುವಜನ ಸೇವೆ), ಪ್ರತಿಭಾ ರಾವ್ (ಕೋಶಾಧಿಕಾರಿ), ರಾಕೇಶ್ ಶೆಟ್ಟಿ (ದಂಡಾಧಿಕಾರಿ).


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top