ಹಲೋ, ಹೇಗಿದ್ದೀರಾ?
ಜೀವನದಲ್ಲಿ ಶಿಸ್ತು ನಮ್ಮನ್ನು ಯಶಸ್ಸಿನ ಹತ್ತಿರ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಸ್ತು ಕೇವಲ ಉತ್ತಮ ಬಟ್ಟೆ ಧರಿಸುವುದಕ್ಕೆ ಅಷ್ಟೇ ಸೀಮಿತವಲ್ಲ, ಅದು ನಮ್ಮನ್ನು ಅನೇಕ ವಿಷಯಗಳಲ್ಲಿ ಪ್ರಭಾವಿತಗೊಳಿಸುತ್ತದೆ.
ದೈಹಿಕ ಶಿಸ್ತು: ಜೀವನದಲ್ಲಿ ಯೋಗ, ಪ್ರಾಣಾಯಾಮ, ಮಿತ ಭುಕ್, ಹಿತ ಭುಕ್ ಎನ್ನುವಂತೆ ಮಿತವಾದ ಆಹಾರ ಸೇವಿಸಿ ನಮ್ಮ ಶಿಸ್ತನ್ನು ಕಾಪಾಡಿಕೊಳ್ಳಬಹುದು.
ಮಾನಸಿಕ ಶಿಸ್ತು: ಉತ್ತಮವಾದ ವಿಚಾರ ಬೆಳೆಸಿಕೊಂಡು, ನಾವು ಕಿರಿಕಿರಿ ಮಾಡಿಕೊಳ್ಳದೇ, ಇನ್ನೊಬ್ಬರಿಗೂ ಕಿರಿಕಿರಿ ಮಾಡದೆ ಶಾಂತಿ ಯಿಂದ ಬಾಳಿದರೆ ಅದುವೇ ನಮ್ಮ ಮಾನಸಿಕ ಶಿಸ್ತು.
ಸಾಮಾಜಿಕ ಶಿಸ್ತು: ಮನುಷ್ಯ ಸಾಮಾಜಿಕ ಜೀವಿ. ಆದರೆ ನಾವು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ನಾವು ಕಲಿಯುತ್ತಾ, ಇನ್ನೊಬ್ಬರಿಗೂ ಕಲಿಸುತ್ತಾ, ಎಲ್ಲರೊಡನೆ ಹೊಂದಿಕೊಂಡು ಬಾಳಿದರೆ ಅದುವೇ ನಾವು ಸಮಾಜ ಜೀವಿ ಆಗಿದ್ದಕ್ಕೆ ಸಾರ್ಥಕವಾಗುತ್ತದೆ.
ಬನ್ನಿ, ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳೋಣ. ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


